Asia Cup 2023: ಇಂದು ಪಾಕ್ vs ಲಂಕಾ ಸೆಮೀಸ್ ಫೈಟ್
ಗುರುವಾರದ ಲಂಕಾ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ ಇದೆ. ಆದರೆ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದುಗೊಂಡರೆ ನೆಟ್ ರನ್‌ರೇಟ್ ಆಧಾರದಲ್ಲಿ ಲಂಕಾ ಫೈನಲ್‌ಗೇರಲಿದ್ದು, ಭಾರತ ವಿರುದ್ಧ ಸೆಣಸಾಡಲಿದೆ.
ಕೊಲಂಬೊ(ಸೆ.14): ಈ ಬಾರಿ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಪ್ರಶಸ್ತಿ ಸುತ್ತಿಗೇರುವ ಮತ್ತೊಂದು ತಂಡ ಯಾವುದು ಎಂಬ ಕುತೂಹಲಕ್ಕೆ ಗುರುವಾರ ಉತ್ತರ ಸಿಗಲಿದೆ. ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೆಣಸಾಡಲಿದ್ದು, ಗೆದ್ದ ತಂಡ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
ಉಭಯ ತಂಡಗಳು ಸದ್ಯ ಆಡಿದ 2 ಪಂದ್ಯಗಳಲ್ಲಿ ತಲಾ 1 ಗೆಲುವಿನೊಂದಿಗೆ 2 ಅಂಕಗಳನ್ನು ಸಂಪಾದಿಸಿವೆ. ಎರಡೂ ತಂಡಗಳು ಆರಂಭಿಕ ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ್ದು, ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಶರಣಾಗಿದ್ದವು. ಹೀಗಾಗಿ ಈ ಪಂದ್ಯ ವರ್ಚುವಲ್ ನಾಕೌಟ್ ಎನಿಸಿಕೊಂಡಿದೆ. ಅತ್ತ ಬಾಂಗ್ಲಾ ಈಗಾಗಲೇ ಹೊರಬಿದ್ದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಗೆಲುವು ಕಂಡ ಟಾಪ್ 6 ಕ್ರಿಕೆಟಿಗರಿವರು..! ಎಲೈಟ್ ಕ್ಲಬ್ ಸೇರಿದ ಕೊಹ್ಲಿ
ಪಾಕ್‌ಗೆ ಗಾಯದ ಸಮಸ್ಯೆ: ನಿರ್ಣಾಯಕ ಹಂತದಲ್ಲಿ ಪಾಕ್ ತಂಡ ಗಾಯದ ಸಮಸ್ಯೆಗೆ ಸಿಲುಕಿದ್ದು, ತಾರಾ ವೇಗಿಗಳು ಗೈರಾಗಲಿದ್ದಾರೆ. ನಸೀಂ ಶಾ ಈಗಾಗಲೇ ಹೊರಬಿದ್ದಿದ್ದು, ಹ್ಯಾರಿಸ್ ರೌಫ್ ಕೂಡಾ ಲಂಕಾ ವಿರುದ್ಧ ಆಡುವುದು ಅನುಮಾನ. ಮತ್ತೊಂದೆಡೆ ತಂಡದ ಬ್ಯಾಟರ್‌ಗಳು ನೇಪಾಳ ವಿರುದ್ಧ ಹೊರತುಪಡಿಸಿ ಇತರ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಬಾಬರ್ ಆಜಂ, ಫಖರ್ ಜಮಾನ್, ಇಮಾಮ್ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದ್ದು, ರಿಜ್ವಾನ್, ಅಘಾ ಸಲ್ಮಾನ್ ಕೂಡಾ ಅಬ್ಬರಿಸಬೇಕಾದ ಅನಿವಾರ್ಯತೆಯಿದೆ.
ಮತ್ತೊಂದೆಡೆ ಪ್ರಮುಖ ಬೌಲರ್‌ಗಳ ಅನುಪಸ್ಥಿತಿ ಹೊರತಾಗಿಯೂ ಲಂಕಾ ಬೌಲಿಂಗ್‌ನಲ್ಲಿ ಮೊನಚು ಕಾಣುತ್ತಿದ್ದು, ಕಳೆದ 14 ಪಂದ್ಯಗಳಲ್ಲಿ ಎದುರಾಳಿ ತಂಡವನ್ನು ಆಲೌಟ್ ಮಾಡಿದೆ. ಸ್ಪಿನ್ನರ್‌ಗಳಾದ ದುನಿತ್ ವೆಲ್ಲಲಗೆ, ಮಹೀಶ್ ತೀಕ್ಷಣ ಪಾಕ್ ಬ್ಯಾಟರ್‌ಗಳಿಗೆ ಸವಾಲೆಸೆಯುವ ನಿರೀಕ್ಷೆ ಇದೆ. ಬೌಲರ್‌ಗಳ ಶ್ರಮಕ್ಕೆ ಬ್ಯಾಟರ್‌ಗಳಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ. ಇದು ಲಂಕಾದ ಚಿಂತನೆ ಕಾರಣವಾಗಿದೆ.
ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು, ನೀವೇ ಸರ್ವಸ್ವ: ಪತಿ ರಾಹುಲ್‌ಗೆ ಭಾವನಾತ್ಮಕ ಸಂದೇಶ ಕಳಿಸಿದ ಆಥಿಯಾ ಶೆಟ್ಟಿ
ಮಳೆಗೆ ರದ್ದಾದರೆ ಲಂಕಾ ಫೈನಲ್‌ಗೆ
ಗುರುವಾರದ ಲಂಕಾ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ ಇದೆ. ಆದರೆ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದುಗೊಂಡರೆ ನೆಟ್ ರನ್‌ರೇಟ್ ಆಧಾರದಲ್ಲಿ ಲಂಕಾ ಫೈನಲ್‌ಗೇರಲಿದ್ದು, ಭಾರತ ವಿರುದ್ಧ ಸೆಣಸಾಡಲಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಲಂಕಾ ಸದ್ಯ -0.200 ರನ್‌ರೇಟ್ ಹೊಂದಿದ್ದು, ಪಾಕಿಸ್ತಾನ(-1.892)ಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ. ಫೈನಲ್ ಪಂದ್ಯ ಭಾನುವಾರ ನಿಗದಿಯಾಗಿದೆ.
ಒಟ್ಟು ಮುಖಾಮುಖಿ: 155
ಪಾಕಿಸ್ತಾನ: 92
ಶ್ರೀಲಂಕಾ: 58
ಫಲಿತಾಂಶವಿಲ್ಲ: 05
ಸಂಭವನೀಯ ಆಟಗಾರರ ಪಟ್ಟಿ
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್, ಅಘಾ ಸಲ್ಮಾನ್, ಇಫ್ತಿಕಾರ್ ಅಹಮ್ಮದ್, ಶದಾಬ್ ಖಾನ್, ಫಹೀಂ, ಶಾಹೀನ್ ಅಫ್ರಿದಿ, ಜಮಾನ್ ಖಾನ್, ಹ್ಯಾರಿಸ್ ರೌಫ್/ಶಾನವಾಜ್.
ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕರುಣರತ್ನೆ, ಕುಸಾಲ್ ಮೆಂಡಿಸ್, ಸಮರವಿಕ್ರಮ, ಅಸಲಂಕ, ಧನಂಜಯ ಡಿ ಸಿಲ್ವಾ, ದಶುನ್ ಶಾನಕ(ನಾಯಕ), ವೆಲ್ಲಲಗೆ, ಮಹೀಶ್ ತೀಕ್ಷಣ,ರಜಿತ, ಮಥೀಶ್ ಪತಿರನ.
ಪಂದ್ಯ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್
ಕೊಲಂಬೊ ಕ್ರೀಡಾಂಗಣದ ಪಿಚ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಹೆಸರುವಾಸಿ. ಇಲ್ಲಿ ಸ್ಪಿನ್ ಬೌಲರ್‌ಗಳು ಹೆಚ್ಚಿನ ನೆರವು ಪಡೆದ ಉದಾಹರಣೆ ಇದೆ. ಇಲ್ಲಿ ನಡೆದ ಸೂಪರ್-4ನ ಕಳೆದ 3 ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ ತಂಡಗಳು ಜಯ ಗಳಿಸಿವೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.