ಇನ್ನೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ, ಕೋಚ್ ಮುಂದುವರಿಕೆಗೆ ಟ್ವಿಸ್ಟ್ ನೀಡಿದ ದ್ರಾವಿಡ್!

ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮುಂದುವರಿಸುವುದಾಗಿ ಬಿಸಿಸಿಐ ಹೇಳಿತ್ತು. ಆದರೆ ಇದೀಗ ಖುದ್ದು ರಾಹುಲ್ ದ್ರಾವಿಡ್ ಟ್ವಿಸ್ಟ್ ನೀಡಿದ್ದಾರೆ. ಇನ್ನೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದಿದ್ದಾರೆ.

I have not signed yet says Rahul dravid on Team India coach extension agreement ckm

ನವದೆಹಲಿ(ನ.30) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವಧಿ ಅಂತ್ಯಗೊಂಡಿದೆ. ಹಲವರ ಹೆಸರು ಕೇಳಿಬರುತ್ತಿರುವ ನಡುವೆ ಬಿಸಿಸಿಐ, ರಾಹುಲ್ ದ್ರಾವಿಡ್ ಹಾಗೂ ಇತರ ಸಿಬ್ಬಂದಿಗಳ ಮುಂದುವರಿಸುವುದಾಗಿ ಘೋಷಿಸಿತ್ತು. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಇತ್ತ ರಾಹುಲ್ ದ್ರಾವಿಡ್ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಕೋಚ್ ಮುಂದುವರಿಕೆ ಕುರಿತು ನಾನು ಇನ್ನೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಸೌತ್ ಆಫ್ರಿಕಾ ವಿರುದ್ದದ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಕುರಿತು ಬಿಸಿಸಿಐ ಆಯ್ಕೆ ಸಮಿತಿ ಇಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಪಾಲ್ಗೊಂಡ ರಾಹುಲ್ ದ್ರಾವಿಡ್ ಹಲವು ವಿಚಾರ ಚರ್ಚಿಸಿದ್ದಾರೆ. ಸಭೆ ಬಳಿಕ ಹೊರಬಂದ ರಾಹುಲ್ ದ್ರಾವಿಡ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ಕೋಚಿಂಗ್  ಮುಂದುವರಿಕೆ ಕುರಿತು ಮಾತನಾಡಿದ ದ್ರಾವಿಡ್, ಇನ್ನೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಸಹಿ ಹಾಕಿದ ಬಳಿಕ ಉತ್ತರ ಸಿಗಲಿದೆ ಎಂದು ದ್ರಾವಿಡ್ ಹೇಳಿದ್ದಾರೆ.

ಧೋನಿ ಕೆಣಕಿ ಕಂಗೆಟ್ಟ ಟ್ವಿಟರ್ ಬಳಕೆದಾರ, ಕೂಲ್ ಕ್ಯಾಪ್ಟನ್ ಉತ್ತರಕ್ಕೆ ಸೈಲೆಂಟ್!

ಯಾವುದೂ ಅಧಿಕೃತವಾಗಿಲ್ಲ. ನಾನು ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ನನಗೆ ಒಪ್ಪಂದ ಪತ್ರ ಸಿಕ್ಕಿದ ಬಳಿಕ ಚರ್ಚೆ ನಡೆಸುತ್ತೇನೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಬಿಸಿಸಿಐ ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರಿಕೆಗೆ ಆಸಕ್ತಿ ತೋರಿದೆ. ಕಳೆದ ಹಲವು ದಿನಗಳಿಂದ ಚರ್ಚೆ ನಡೆಸಿದೆ. ಕೊನೆಗೂ ರಾಹುಲ್ ದ್ರಾವಿಡ್ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಈ ಕುರಿತು ಯಾವುದು ಅಧಿಕೃತವಾಗಿಲ್ಲ. 2024ರ ಟಿ20 ವಿಶ್ವಕಪ್ ಟೂರ್ನಿವರೆಗೆ ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದವರಿಸಲು ಬಿಸಿಸಿಐ ಆಸಕ್ತಿ ತೋರಿದೆ. 

 

 

ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ಮುಂದುವರಿಯಲು ರಾಹುಲ್‌ ದ್ರಾವಿಡ್‌ ಒಪ್ಪಿಕೊಂಡಿದ್ದು, ಅವರ ಗುತ್ತಿಗೆಯನ್ನು ನವೀಕರಿಸಲಾಗಿದೆ ಎಂದು ಬಿಸಿಸಿಐ ಬುಧವಾರ(ನ.29) ಪ್ರಕಟಣೆ ಮೂಲಕ ತಿಳಿಸಿದೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸದ್ಯಕ್ಕಿಲ್ಲ ಕಿಂಗ್‌ ಕೊಹ್ಲಿ ಆಟ, ಬಿಸಿಸಿಐಗೆ ಮಾಹಿತಿ!

2021ರ ನವೆಂಬರ್‌ನಲ್ಲಿ ಕೋಚ್‌ ಆಗಿ ನೇಮಕಗೊಂಡಿದ್ದ ದ್ರಾವಿಡ್‌ರ ಗುತ್ತಿಗೆಯು ಏಕದಿನ ವಿಶ್ವಕಪ್‌ ಬಳಿಕ ಮುಕ್ತಾಯಗೊಂಡಿತ್ತು. ಅವರ ಕೋಚಿಂಗ್‌ ಅವಧಿಯಲ್ಲಿ ಭಾರತ ಏಷ್ಯಾಕಪ್‌ನಲ್ಲಿ ಚಾಂಪಿಯನ್‌ ಆಗಿತ್ತು. ಇನ್ನು ಏಕದಿನ, ಟೆಸ್ಟ್‌ ಹಾಗೂ ಟಿ20 ಮೂರೂ ಮಾದರಿಯಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದರೂ, ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತ, 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಹಾಗೂ ಏಕದಿನ ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

Latest Videos
Follow Us:
Download App:
  • android
  • ios