- Home
- Entertainment
- TV Talk
- 'ಬ್ರಹ್ಮಗಂಟು' ನಟಿ ಶೋಭಿತಾ ಶಿವಣ್ಣ ಗಂಡ ಪರಿಚಯಸ್ಥರಿಗೆ ಗಂಡನ ಸುಳಿವು ಬಿಟ್ಟುಕೊಡಲಿಲ್ಲ ಏಕೆ?
'ಬ್ರಹ್ಮಗಂಟು' ನಟಿ ಶೋಭಿತಾ ಶಿವಣ್ಣ ಗಂಡ ಪರಿಚಯಸ್ಥರಿಗೆ ಗಂಡನ ಸುಳಿವು ಬಿಟ್ಟುಕೊಡಲಿಲ್ಲ ಏಕೆ?
ಕನ್ನಡ ಮತ್ತು ತೆಲುಗು ಧಾರಾವಾಹಿ ಹಾಗೂ ಸಿನಿಮಾ ನಟಿ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಎಲ್ಲರಿಗೂ ಆಘಾತ ತಂದಿದೆ.

ಕನ್ನಡ, ತೆಲುಗು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. `ಎರಡೊಂದ್ಲ ಮೂರು`, `ಎಟಿಎಂ`, `ಒಂದ್ ಕಥೆ ಹೇಳ್ಳ`, `ಜಾಕ್‌ಪಾಟ್`, `ಅಪಾರ್ಟ್‌ಮೆಂಟ್ ಟು ಮರ್ಡರ್`, `ವಂದನ` ಸಿನಿಮಾಗಳಲ್ಲಿ ನಟಿಸಿದ್ದರು.
ಬ್ರಹ್ಮಗಂಟೆ, ನಿನ್ನಿಂದಲೇ ಧಾರಾವಾಹಿಗಳಲ್ಲಿ ನಟಿಸಿದ್ದರು. ತೆಲುಗು ಸಿನಿಮಾಗಳಲ್ಲಿ ನಟಿಸುತ್ತಾ ಹೈದರಾಬಾದ್‌ನಲ್ಲಿ ನೆಲೆಸಿದ್ದರು.
ಎರಡು ವರ್ಷಗಳ ಹಿಂದೆ ಹೈದರಬಾದ್ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದ ಶೋಭಿತಾ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಹಾಸನ ಜಿಲ್ಲೆಯ ಸಕಲೇಶಪುರದವರಾದ ಶೋಭಿತಾ `ಫಸ್ಟ್ ಡೇ ಫಸ್ಟ್ ಶೋ` ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಹೆಚ್ಚು ಜನಪ್ರಿಯವಾಗಲಿಲ್ಲ.
2010ರಲ್ಲಿ ಪ್ರಸಾರ ಆಗಿದ್ದ 'ಕೃಷ್ಣ ರುಕ್ಮಿಣಿ' ಧಾರಾವಾಹಿ ಮೂಲಕ ಶೋಭಿಯಾ ಶಿವಣ್ಣ ಕಿರುತೆರೆ ಪ್ರವೇಶ ಮಾಡಿದ್ದರು. ಅಲ್ಲಿಂದ 'ನಿನ್ನಿಂದಲೇ', 'ಮನಸೆಲ್ಲ ನೀನೇ', ಗಾಳಿಪಟ, ಮಂಗಳಗೌರಿ, ದೀಪವು ನಿನ್ನದೆ ಗಾಳಿಯು ನಿನ್ನದೆ, ಅಮ್ಮಾವ್ರು, ಮನೆದೇವರು ಅಂತಹ ಧಾರಾವಾಹಿಗಳಲ್ಲಿ ನಟಿಸಿದ್ದರು. ಶೋಭಿತಾ ಶಿವಣ್ಣ 30ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರ ವಿವಾಹದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆ ವೇಳೆ ಅವರು ಪತಿ ಹೆಸರು, ವೃತ್ತಿ ಏನು? ಅನ್ನೋದು ಕೂಡ ಗೊತ್ತಾಗಿರಲಿಲ್ಲ.
ಎರಡು ವರ್ಷಗಳ ಹಿಂದೆ ಮದುವೆಯಾದ ನಂತರ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಮದುವೆಯ ನಂತರ ಸಿನಿಮಾಗಳಿಂದ ದೂರವಿದ್ದರು. 2023ರಲ್ಲಷ್ಟೇ ಶೋಭಿತಾ ಶಿವಣ್ಣ ವೈವಾಹಿಕ ಜೀವನಕ್ಕೆ ಮುಂದಾಗಿದ್ದರು. ಅದ್ಧೂರಿಯಾಗಿ ಮದುವೆ ಆಯ್ತು. ಶೋಭಿತಾ ಮದುವೆಯಲ್ಲಿ ಚಿತ್ರರಂಗದ ಅನೇಕ ಹಿರಿಯ ಕಲಾವಿದರು ಭಾಗಿಯಾಗಿ ಶುಭ ಹಾರೈಸಿದ್ದರು. ಮದುವೆ ಬಳಿಕ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಮದುವೆಯಲ್ಲಿ ಗಂಡನ ಪರಿಚಯಿಸದ ಶೋಭಿತಾ:
ಮದುವೆ ಅಂದಮೇಲೆ ಹುಡುಗರ ಬಗ್ಗೆ ಹಿರಿಯರಿಗೆ ಹೇಳಿಕೊಳ್ಳುವುದು ಸಾಮಾನ್ಯ. ಆದರೆ ಶೋಭಿತಾ ಮದುವೆ ಮನೆಯಲ್ಲಿ ಯಾರಿಗೂ ಪತಿಯ ಪರಿಚಯ ಮಾಡಿಕೊಟ್ಟಿಲ್ಲ ಎನ್ನಲಾಗಿದೆ. ಅವರ ಪತಿಯ ಸುಳಿವ ಸಹ ನೀಡಿರಲಿಲ್ಲ ಎಂದು ಕೆಲವರು ಹೇಳುತ್ತಾರೆ. ಇದೆಲ್ಲ ಇಂಬು ಕೊಡುವಂತದ್ದು ಮದುವೆ ಬಳಿಕ ಹೈದರಬಾದ್ನಲ್ಲಿ ನೆಲೆಸಿದ್ದು. ಅಲ್ಲಿಂದ ಮತ್ತೆ ಈ ಕಡೆ ಬರಲೇ ಇಲ್ಲ
ಹೈದರಾಬಾದ್‌ನಲ್ಲಿ ಮರಣೋತ್ತರ ಪರೀಕ್ಷೆ ನಂತರ ಬೆಂಗಳೂರಿಗೆ ಪಾರ್ಥಿವ ಶರೀರ ತರಲಾಗುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.