Rahul Dravid  

(Search results - 128)
 • rahul dravid

  Cricket11, Feb 2020, 1:16 PM IST

  ಶತಕ ಸಿಡಿಸಿ ಕೊಹ್ಲಿ ದಾಖಲೆ ಮುರಿದು, ದ್ರಾವಿಡ್ ರೆಕಾರ್ಡ್ ಸರಿಗಟ್ಟಿದ ರಾಹುಲ್..!

  ಒಂದು ಹಂತದಲ್ಲಿ 62 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಶ್ರೇಯಸ್ ಜತೆ ಶತಕದ ಜತೆಯಾಟ ನಿಭಾಯಿಸಿದ ರಾಹುಲ್ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಇದಾದ ಬಳಿಕ ಮನೀಶ್ ಪಾಂಡೆ ಜತೆಯೂ ರಾಹುಲ್ 107 ರನ್‌ಗಳ ಜತೆಯಾಟವಾಡಿ ತಂಡ ಸ್ಫರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.

 • KL-Rahul Keeper

  Cricket26, Jan 2020, 11:41 PM IST

  ಕಡಲೂರಿಗೆ ಮುತ್ತಾದ ರಾಹುಲ್, ಯಶಸ್ಸಿನ ಹಿಂದಿವೆ ನೂರಾರು ಸವಾಲ್

  ಕೆ ಎಲ್ ರಾಹುಲ್ ಸದ್ಯ ಕ್ರಿಕೆಟ್ ಜಗತ್ತಿನ ಓಡುವ ಕುದುರೆ. ರಾಹುಲ್ ನ್ಯೂಜಿಲೆಂಡ್ ವಿರುದ್ಧ ನೀಡುತ್ತಿರುವ ಪ್ರದರ್ಶನಕ್ಕೆ ಮೊದಲೊಂದು ಮೆಚ್ಚುಗೆ ಕೊಟ್ಟು ಬಿಡೋಣ. ಹಠತೊಟ್ಟ ರಾಹುಲ್ ಕತೆ ಇಲ್ಲಿದೆ

 • Dravid and KL Rahul
  Video Icon

  Cricket21, Jan 2020, 3:27 PM IST

  ಟೀಂ ಇಂಡಿಯಾದಲ್ಲಿದ್ದಾನೆ ಮಾಡ್ರನ್ 'ರಾಹುಲ್'..!

  ಕಳೆದ ವರ್ಷ ತವರಿನಲ್ಲೇ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ್ದ  ಟೀಂ ಇಂಡಿಯಾ, ಇದೀಗ ಕಾಂಗರೂಗಳ ಪಡೆಗೆ ತಿರುಗೇಟು ನೀಡಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಮಾಡ್ರನ್ ದ್ರಾವಿಡ್ ಆಟ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

 • samith dravid

  Cricket21, Jan 2020, 11:13 AM IST

  ಅಂಡರ್‌-14 ಕ್ರಿಕೆಟ್‌: ಕರ್ನಾಟಕಕ್ಕೆ ನೆರವಾದ ಸಮಿತ್‌ ದ್ರಾವಿಡ್‌ ಅಜೇಯ ಶತಕ!

  ಇಲ್ಲಿನ ಆಲೂರು ಮೈದಾನದಲ್ಲಿ ಸೋಮವಾರ ಮುಕ್ತಾಯವಾದ ದಕ್ಷಿಣ ವಲಯ ಕ್ರಿಕೆಟ್‌ ಟೂರ್ನಿಯ ಗೋವಾ ವಿರುದ್ಧದ ಪಂದ್ಯದಲ್ಲಿ, ಸಮಿತ್‌ 180 ಎಸೆತಗಳನ್ನು ಎದುರಿಸಿ 15 ಬೌಂಡರಿ, 4 ಸಿಕ್ಸರ್‌ ಸಹಿತ 109 ರನ್‌ ಗಳಿಸಿ ಅಜೇಯರಾಗಿ ಉಳಿದರು.

 • PM Modi will talk to school students on January 20 kps

  Cricket20, Jan 2020, 8:27 PM IST

  ಪರೀಕ್ಷಾ ಪೇ ಚರ್ಚಾ: ಮಕ್ಕಳಿಗೆ ದ್ರಾವಿಡ್-ಕುಂಬ್ಳೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ!

  ಮಕ್ಕಳನ್ನು ಪರೀಕ್ಷಾ ಭಯದ ವಾತಾವರಣದಿಂದ ಮುಕ್ತರಾಗಿಸಿ, ಅವರಲ್ಲಿ ಆತ್ಮವಿಶ್ವಾಸ ಹಾಗೂ ಉತ್ಸಾಹ ತುಂಬುವ ಪ್ರಧಾನಿ ಮೋದಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷಣ್ ಹೋರಾಟದ ಕತೆ ಹೇಳಿದ್ದಾರೆ. ಮೋದಿ ಮಕ್ಕಳಿಗೆ ವಿವರಿಸಿದ ಸ್ಫೂರ್ತಿಯ ಕತೆ ಇಲ್ಲಿದೆ.

 • dravid

  Cricket20, Jan 2020, 1:08 PM IST

  ಮತ್ತೆ ಮಿಂಚಿದ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌

  ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಸಮಿತ್ 152 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 86 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

 • rahul dravid

  Cricket11, Jan 2020, 1:42 PM IST

  47ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ದ್ರಾವಿಡ್; ದಿಗ್ಗಜನಿಗೆ ಶುಭಾಶಯಗಳ ಸುರಿಮಳೆ!

  ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಹುಟ್ಟು ಹಬ್ಬದ ಸಂಭ್ರಮ. ಟೆಸ್ಟ್ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ಜಂಟ್ಲಮೆನ್ ರಾಹುಲ್ ದ್ರಾವಿಡ್. ಕ್ರಿಕೆಟ್‌ನ ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಅಪರೂಪದ ಕ್ರಿಕೆಟಿಗ ದ್ರಾವಿಡ್.  ಆರಂಭಿಕ, ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿದ್ದಾರೆ. ವಿಕೆಟ್ ಕೀಪರ್, ಬೌಲರ್, ನಾಯಕನಾಗಿಯೂ ತಂಡದ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದೀಗ 47ನೇ ವಸಂತಕ್ಕೆ ಕಾಲಿಟ್ಟಿರುವ ರಾಹುಲ್ ದ್ರಾವಿಡ್‌ಗೆ ದಿಗ್ಗಜರು ಶುಭಾಶಯ ಕೋರಿದ್ದಾರೆ.

 • samit dravid

  Cricket11, Jan 2020, 10:01 AM IST

  ಕರ್ನಾಟಕ ಅಂಡರ್‌-14 ತಂಡಕ್ಕೆ ದ್ರಾವಿಡ್‌ ಪುತ್ರ

  ಟೀಂ ಇಂಡಿಯಾ ಮಾಜಿ ನಾಯಕ, ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಪುತ್ರ ಇದೀಗ ಕ್ರಿಕೆಟ್‌ನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾನೆ. ದಿಟ್ಟ ಪ್ರದರ್ಶನದ ಮೂಲಕ ಕರ್ನಾಟಕ ಅಂಡರ್ 14 ತಂಡಕ್ಕೆ ಸಮಿತ್ ದ್ರಾವಿಡ್ ಎಂಟ್ರಿ ಕೊಟ್ಟಿದ್ದಾರೆ. 

 • Dravid-Ganguly

  Cricket3, Jan 2020, 9:59 AM IST

  NCA ಸುಧಾರಣೆಗೆ ದ್ರಾವಿಡ್‌-ಗಂಗೂಲಿ ಸೂತ್ರ; ಬೆಂಗಳೂರಿನಲ್ಲೇ ಹೊಸ ಅಕಾಡೆಮಿ!

  ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(NCA) ಮೇಜರ್ ಸರ್ಜರಿ ಮಾಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. NCA ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆ ಚರ್ಚಿಸಿರುವ ಗಂಗೂಲಿ ಸುಧಾರಣೆಗೆ ಹೊಸ ಸೂತ್ರ ಸಿದ್ಧಪಡಿಸಿದ್ದಾರೆ.

 • samith dravid

  Cricket20, Dec 2019, 11:30 AM IST

  ಭರ್ಜರಿ ದ್ವಿಶತಕ ಬಾರಿಸಿದ ದ್ರಾವಿಡ್‌ ಪುತ್ರ ಸಮಿತ್‌

  ಧಾರವಾಡ ವಲಯ ವಿರುದ್ಧದ ಪಂದ್ಯದಲ್ಲಿ ಸಮಿತ್‌, ಮೊದಲ ಇನ್ನಿಂಗ್ಸಲ್ಲಿ 250 ಎಸೆತಗಳಲ್ಲಿ 201 ಮತ್ತು ದ್ವಿತೀಯ ಇನ್ನಿಂಗ್ಸಲ್ಲಿ ಅಜೇಯ 94 ರನ್‌ಗಳಿಸಿದರು. ಅಲ್ಲದೇ 26 ರನ್‌ಗಳಿಗೆ 3 ವಿಕೆಟ್‌ ಪಡೆಯುವ ಮೂಲಕ ಆಲ್ರೌಂಡರ್‌ ಪ್ರದರ್ಶನ ತೋರಿದರು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

 • Deepika Padukone

  Cricket13, Dec 2019, 12:01 PM IST

  ಸಾರ್ವಕಾಲಿಕ ನೆಚ್ಚಿನ ಕ್ರಿಕೆಟಿಗನ ಹೆಸರು ಬಹಿರಂಗ ಪಡಿಸಿದ ದೀಪಿಕಾ ಪಡುಕೋಣೆ!

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ ಚಾಪಾಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ದೀಪಿಕಾ ಪಡುಕೋಣೆ ತಮ್ನ ಸಾರ್ವಕಾಲಿಕ ನೆಚ್ಚಿನ ಕ್ರಿಕೆಟಿಗನ ಹೆಸರು ಬಹಿರಂಗ ಪಡಿಸಿದ್ದಾರೆ. ಇಷ್ಟೇ ಅಲ್ಲ ಕಾರಣವನ್ನೂ ನೀಡಿದ್ದಾರೆ. 
   

 • dravid thumbnail

  Cricket25, Nov 2019, 4:56 PM IST

  ಸರಳತೆಗೆ ಮತ್ತೊಂದು ಹೆಸರು ರಾಹುಲ್ ದ್ರಾವಿಡ್

  ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಅತ್ಯಂತ ಸಭ್ಯ ಕ್ರಿಕೆಟಿಗ, ’ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಪ್ರಸ್ತುತ ಬೆಂಗಳೂರಿನ NCA ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವಕ್ರಿಕೆಟ್‌ಗೆ ಕರ್ನಾಟಕ ನೀಡಿದ ಅದ್ಭುತ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.

  ಮೈದಾನದೊಳಗೆ ಹಾಗೂ ಮೈದಾನದಾಚೆ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ರಾಹುಲ್ ದ್ರಾವಿಡ್, ಟೀಂ ಇಂಡಿಯಾ ಪಾಲಿಗೆ ಆಪತ್ಭಾಂದವ ಆಗಿದ್ದವರು. ತಾನೊಬ್ಬ ಸ್ಟಾರ್ ಆಟಗಾರನಾಗಿ ಬೆಳೆದು ನಿಂತರೂ ಸಿಂಪ್ಲಿಸಿಟಿ ಎನ್ನುವುದು ಕೊಂಚವೂ ಬದಲಾಗಿಲ್ಲ. ಫಾರ್ಮ್ ಎನ್ನುವುದು ತಾತ್ಕಾಲಿಕ, ಆದರೆ ವ್ಯಕ್ತಿತ್ವ ಎನ್ನುವುದು ಎಂದೆಂದಿಗೂ ಶಾಶ್ವತ ಎನ್ನುವುದಕ್ಕೆ ರಾಹುಲ್ ದ್ರಾವಿಡ್ ಜೀವಂತ ಉದಾಹರಣೆ. ಕರ್ನಾಟಕದ ಪ್ರತಿಭೆ ರಾಹುಲ್ ದ್ರಾವಿಡ್ ಬಗೆಗಿನ ಕೆಲ ಕುತೂಹಲಕಾರಿ ಸಂಗತಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • Kohli dravid

  Cricket24, Nov 2019, 5:55 PM IST

  ಪಿಂಕ್ ಬಾಲ್ ಟೆಸ್ಟ್; ಮೊದಲ ಶತಕ ಸಿಡಿಸಿದ್ದು ಕೊಹ್ಲಿ ಅಲ್ಲ, ರಾಹುಲ್ ದ್ರಾವಿಡ್!

  ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ವಿರಾಟ್ ಕೊಹ್ಲಿ ಅಲ್ಲ, ಬದಲಾಗಿ ರಾಹುಲ್ ದ್ರಾವಿಡ್. ಕೊಹ್ಲಿಗಿಂತ ಮೊದಲೇ ರಾಹುಲ್ ದ್ರಾವಿಡ್ ಪಿಂಕ್ ಬಾಲ್ ಸೆಂಚುರಿ ದಾಖಲಿಸಿ ಇತಿಹಾಸ ರಚಿಸಿದ್ದಾರೆ. 

 • Ex Indian Cricketer, Director of NCA Rahul Dravid

  Cricket12, Nov 2019, 10:01 PM IST

  ರಾಹುಲ್ ದ್ರಾವಿಡ್ ಸ್ವಹಿತಾಸಕ್ತಿ ವಿಚಾರಣೆ ಅಂತ್ಯ; ಶೀಘ್ರದಲ್ಲಿ ತೀರ್ಪು!

  ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಮೇಲಿನ ಸ್ವಹಿತಾಸಕ್ತಿ ಆರೋಪದ ತೀರ್ಪು ಶೀಘ್ರದಲ್ಲೇ ಹೊರಬೀಳಲಿದೆ. ಈ  ಕುರಿತು ಬಿಸಿಸಿಐ ಎಥಿಕ್ಸ್ ಆಫೀಸರ್ ಡಿಕೆ ಜೈನ್ ಪ್ರತಿಕ್ರಿಯೆ ನೀಡಿದ್ದಾರೆ.
   

 • সৌরভ গঙ্গোপাধ্যায় ও রাহুল দ্রাবিড়
  Video Icon

  Cricket1, Nov 2019, 10:05 AM IST

  BCCIಗೂ ತಟ್ಟಿತಾ ಮ್ಯಾಚ್ ಫಿಕ್ಸಿಂಗ್ ಭೂತ..?

  ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬಯಲಾಗುತ್ತಿದ್ದಂತೆ, ಇದೀಗ ಕರಾಳಹಸ್ತ ಬಿಸಿಸಿಐಗೂ ತಟ್ಟಿದೆಯಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ NCA ಮುಖ್ಯಸ್ಥ ರಾಹುಲ್ ದ್ರಾವಿಡ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ.