ರೋಹಿತ್ ಶರ್ಮಾ ಪುತ್ರನ ಹೆಸರು ರಿವೀಲ್ ಮಾಡಿದ ಪತ್ನಿ ರಿತಿಕಾ, ಈ ಸುಂದರ ಹೆಸರಿನ ಅರ್ಥವೇನು?

ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾಯಕ ರೋಹಿತ್ ಶರ್ಮಾ ಅವರ ಎರಡನೇ ಮಗುವಿನ ಜನನವಾಗಿದೆ. ಆ ಸಮಯದಲ್ಲಿ ಪತ್ನಿ ರಿತಿಕಾ ಸಜ್ದೇಹ್ ಅವರ ಜೊತೆಗಿದ್ದ ರೋಹಿತ್ ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.

Rohit Sharmas Wife Ritika Sajdeh Reveals Newborn Sons Name gow

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಎರಡನೇ ಮಗುವಿನ ಹೆಸರು ಬಹಿರಂಗವಾಗಿದೆ. ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ನವಜಾತ ಶಿಶುವಿನ ಹೆಸರನ್ನು ರೋಹಿತ್ ಪತ್ನಿ ರಿತಿಕಾ ಸಜ್ದೇಹ್ ಬಹಿರಂಗಪಡಿಸಿದ್ದಾರೆ. ರೋಹಿತ್ ಅವರ ಮೊದಲ ಮಗು ಹೆಣ್ಣು ಮಗು. ಆಕೆಯ ಹೆಸರು ಸಮೈರಾ. ಈಗ ಎರಡನೇ ಮಗುವಾದ ಗಂಡು ಮಗುವಿಗೆ ಆಹಾನ್ ಎಂದು ಹೆಸರಿಡಲಾಗಿದೆ. ಈ ಹೆಸರಿಗೆ ಹಲವು ಅರ್ಥಗಳಿವೆ. ಪವಿತ್ರ ಬೆಳಗು, ಬೆಳಗಿನ ಸೌಂದರ್ಯ, ಸೂರ್ಯನ ಮೊದಲ ಕಿರಣ, ಯಾವುದೇ ಆರಂಭ ಅಥವಾ ಉದಯ.

ಇದು ದೇಶದಲ್ಲೇ ಮೊದಲು, ಕೇರಳದ ಜಿಲ್ಲಾ ಆಸ್ಪತ್ರೆಯಲ್ಲಿ ಸಕ್ಸಸ್‌ ಹಾರ್ಟ್ ಟ್ರಾನ್ಸ್‌ಪ್ಲಾಂಟ್!

ರೋಹಿತ್ ಕುಟುಂಬದಲ್ಲಿ ಈಗ ನಾಲ್ಕು ಜನ ಸದಸ್ಯರಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಆ ನಾಲ್ವರ ಬಗ್ಗೆ ರಿತಿಕಾ ಉಲ್ಲೇಖಿಸಿದ್ದಾರೆ. ಅವರು ನಾಲ್ಕು ಗೊಂಬೆಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಗೊಂಬೆಯ ಟೋಪಿಯಲ್ಲಿ ಆಹಾನ್, ಎರಡನೇ ಗೊಂಬೆಯ ಟೋಪಿಯಲ್ಲಿ ರಿಟ್ಸ್, ಮೂರನೇ ಗೊಂಬೆಯ ಟೋಪಿಯಲ್ಲಿ ಸ್ಯಾಮಿ ಮತ್ತು ನಾಲ್ಕನೇ ಗೊಂಬೆಯ ಟೋಪಿಯಲ್ಲಿ ರೋ ಎಂದು ಬರೆಯಲಾಗಿದೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ರೋಹಿತ್ ಮತ್ತು ರಿತಿಕಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಟಾಪ್ 10ರಲ್ಲಿ 9ಕಂಪೆನಿ ಮಾರುಕಟ್ಟೆ ಬಂಡವಾಳ ಏರಿಕೆ, ಇನ್ಫೋಸಿಸ್‌ಗೆ ಸೋಲು!

ನವಜಾತ ಶಿಶುವಿನಿಂದ ದೂರದಲ್ಲಿರುವ ರೋಹಿತ್: ಎರಡನೇ ಮಗುವಿನ ಜನನದ ಸಮಯದಲ್ಲಿ ಪತ್ನಿಯ ಪಕ್ಕದಲ್ಲಿರಲು ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ರೋಹಿತ್ ಆಡಿಲ್ಲ. ಆದರೆ ಈ ಪಂದ್ಯ ನಡೆಯುತ್ತಿರುವಾಗಲೇ ಅವರು ಭಾರತ ತಂಡವನ್ನು ಸೇರಿಕೊಂಡರು. ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ XI ವಿರುದ್ಧದ ಅಭ್ಯಾಸ ಪಂದ್ಯವನ್ನು ರೋಹಿತ್ ಆಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 11 ಎಸೆತಗಳಲ್ಲಿ 3 ರನ್ ಗಳಿಸಿ ಔಟಾದರು ಭಾರತದ ನಾಯಕ. ಈ ಇನ್ನಿಂಗ್ಸ್‌ನಲ್ಲಿ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಪರ್ತ್ ಟೆಸ್ಟ್‌ನಲ್ಲಿ ಆರಂಭಿಕ ಆಟಗಾರರಾದ ಕೆ ಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಆರಂಭಿಕ ಜೋಡಿಯನ್ನು ಮುರಿಯಲು ರೋಹಿತ್ ಬಯಸಲಿಲ್ಲ. ಈ ಕಾರಣಕ್ಕಾಗಿಯೇ ಅವರು ಆರಂಭಿಕ ಬ್ಯಾಟಿಂಗ್ ಮಾಡುವ ಬದಲು ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿದರು.

ಅಡಿಲೇಡ್‌ನಲ್ಲಿ ಆಡಲಿರುವ ರೋಹಿತ್:  ಡಿಸೆಂಬರ್ 6 ರಂದು ಅಡಿಲೇಡ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಸರಣಿಯ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಿಂದೆ ಬರಬಹುದು ರೋಹಿತ್. ಅವರು ತಂಡದ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದಾರೆ.

Latest Videos
Follow Us:
Download App:
  • android
  • ios