ಧೋನಿ ಕೆಣಕಿ ಕಂಗೆಟ್ಟ ಟ್ವಿಟರ್ ಬಳಕೆದಾರ, ಕೂಲ್ ಕ್ಯಾಪ್ಟನ್ ಉತ್ತರಕ್ಕೆ ಸೈಲೆಂಟ್!
ಟ್ವಿಟರ್ ಬಳಕೆದಾರನೊಬ್ಬ ಎಂಎಸ್ ಧೋನಿಯನ್ನು ಕೆಣಿಕಿದ್ದಾನೆ. ಇಷ್ಟೇ ನೋಡಿ, ಇದಕ್ಕೆ ಧೋನಿ ಅಭಿಮಾನಿಗಳು ಪ್ರತಿಕ್ರಿಯೆ ನೀಡುವ ಮೊದಲೇ ಖುದ್ದು ಧೋನಿ ಉತ್ತರ ನೀಡಿದ್ದಾರೆ. ಧೋನಿಯ ಪ್ರತಿಕ್ರಿಯೆಗೆ ಆತ ಸೈಲೆಂಟ್ ಆಗಿದ್ದಾನೆ.
ರಾಂಚಿ(ನ.30) ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಟೀಕೆ, ಆರೋಪ, ಟ್ರೋಲ್‌ಗೆ ತೆಲಕೆಡಿಸಿಕೊಂಡ ವ್ಯಕ್ತಿಯಲ್ಲ. ಸುದ್ದಿಗೋಷ್ಠಿ, ಸಾಮಾಜಿಕ ಮಾಧ್ಯಮದಲ್ಲಿ ಧೋನಿ ನೀಡುವ ಒಂದೊಂದು ಉತ್ತರ ತಮಾಷೆಯಾಗಿ ಕಂಡರೂ ಟೀಕಿಸಿದವರಿಗೆ, ಟ್ರೋಲ್ ಮಾಡಿದರಿಗೆ ಕಪಾಳಮೋಕ್ಷ ಮಾಡಿದಂತಿದೆ. ಇದೀಗ ಧೋನಿಯ ದಶಕಗಳ ಹಿಂದಿನ ಟ್ವೀಟ್ ಒಂದು ವೈರಲ್ ಆಗಿದೆ. ಧೋನಿಯ ಬ್ಯಾಟಿಂಗ್ ಕುರಿತು ಟ್ರೋಲ್ ಮಾಡಿದ ವ್ಯಕ್ತಿಗೆ ನೀಡಿದ ಉತ್ತರ ಭಾರಿ ಮೆಚ್ಚುಗೆ ಪಡೆದಿದೆ. ಇಷ್ಟೇ ಅಲ್ಲ ಧೋನಿಯ ನಾಲ್ಕೇ ನಾಲ್ಕು ಪದದ ಉತ್ತರಕ್ಕೆ ಟೀಕಿಸಿದ ವ್ಯಕ್ತಿ ಗಪ್ ಚುಪ್ ಆಗಿದ್ದಾನೆ.
ಧೋನಿಯ ಹಳೇ ಟ್ವೀಟ್ ಇದೀಗ ಮತ್ತೆ ಭಾರಿ ಚರ್ಚೆಯಾಗುತ್ತಿದೆ. 2012ರಲ್ಲಿ ಧೋನಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದರು. ಕೆಲ ಪಂದ್ಯದಲ್ಲಿ ಧೋನಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ತಂಡ ಗೆಲುವಿನ ಲಯದಲ್ಲಿತ್ತು. ಧೋನಿ ಬ್ಯಾಟಿಂಕ್ ಕುರಿತು ಕೆಲವರು ಟ್ರೋಲ್ ಮಾಡಿದ್ದರು. ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಹೀಗೆ ಶ್ರೀಧರ್ ರೆಡ್ಡಿ ಅನ್ನೋ ಟ್ವಿಟರ್ ಖಾತೆ ಮೂಲಕ ಬಳಕೆದಾರ ಧೋನಿ ಬ್ಯಾಟಿಂಗ್ ಟೀಕಿಸಿ ಟ್ವೀಟ್ ಮಾಡಿದ್ದರು.
ನನ್ನ ಗರ್ಲ್‌ಫ್ರೆಂಡ್___!ಬ್ಯಾಚುಲರ್ ಹುಡುಗರಿಗೆ ಒಂದೇ ವಾಕ್ಯದಲ್ಲಿ ಪ್ರೀತಿ ಪಾಠ ಹೇಳಿದ ಧೋನಿ!
ಧೋನಿಯ ಕಳಪೆ ಬ್ಯಾಟಿಂಗ್ ಟೀಕಿಸಿದ ಟ್ವಿಟರ್ ಬಳಕೆದಾರ, ಎಂಎಸ್ ಧೋನಿ ಟ್ವಿಟರ್ ಬದಲು ನಿಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಗಮನಕೇಂದ್ರೀಕರಿಸಿ ಎಂದು ಟ್ವೀಟ್ ಮಾಡಿದ್ದಾರೆ. ಬಳಿಕ ಧೋನಿ ಟ್ವಿಟರ್ ಖಾತೆಗೂ ಟ್ಯಾಗ್ ಮಾಡಿದ್ದರು. ಧೋನಿಯನ್ನು ಕೆಣಕಿದ ವ್ಯಕ್ತಿಗೆ ಧೋನಿ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದರು. ಯೆಸ್ ಸರ್, ಏನಾದರೂ ಸಲಹೆ ಇದೆಯಾ ಸರ್ ಎಂದು ಧೋನಿ ಪ್ರತಿಕ್ರಿಯೆ ನೀಡಿದ್ದರು.
ಟ್ವಿಟರ್ ಬದಲು ಬ್ಯಾಟಿಂಗ್ ಕಡೆ ಕಮನ ಇರಲಿ ಎಂದ ವ್ಯಕ್ತಿಗೆ, ಸರಿ, ಬ್ಯಾಟಿಂಗ್ ಉತ್ತಮಪಡಿಸಲು ಏನಾದರೂ ಸಲಹೆ ಇದೆಯಾ ಎಂದು ಧೋನಿ ಮರುಪ್ರಶ್ನೆ ಹಾಕಿದ್ದರು. ಈ ಟ್ವೀಟ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಧೋನಿ ಉತ್ತರವನ್ನು ಎಲ್ಲರೂ ಕೊಂಡಾಡಿದ್ದರು. 2012, ಜುಲೈ 17 ರಂದು ಧೋನಿ ಈ ರಿಪ್ಲೈ ಮಾಡಿದ್ದಾರೆ.
ನಾಯಕ ಧೋನಿ ಜತೆಗಿನ ವಾಗ್ವದದ ಬಗ್ಗೆ ಮೊದಲ ಬಾರಿ ತುಟಿಬಿಟ್ಟಿದ ಎರಡು ವಿಶ್ವಕಪ್ ವಿಜೇತ ತಂಡದ ವೇಗಿ..!
ಧೋನಿ ಸಾಮಾಜಿಕ ಜಾಲತಾಣಗಳಿಂದ ಸಾಕಷ್ಟು ದೂರವಿದ್ದಾರೆ. ಧೋನಿ ಕೊನೆಯಬಾರಿಗೆ ಟ್ವೀಟ್ ಮಾಡಿರುವುದು 2021ರ ಜನವರಿ 8 ರಂದು. ತಮ್ಮ ಸ್ಟ್ರಾಬೆರಿ ಹಣ್ಣಿನ ಫಾರ್ಮ್ ಕುರಿತು ಟ್ವೀಟ್ ಮಾಡಿದ್ದರು. ಬಳಿಕ ಟ್ವೀಟ್ ಮಾಡಿಲ್ಲ. ಇನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮದಿಂದ ಧೋನಿ ದೂರ ಉಳಿದಿದ್ದಾರೆ.