Asianet Suvarna News Asianet Suvarna News

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸದ್ಯಕ್ಕಿಲ್ಲ ಕಿಂಗ್‌ ಕೊಹ್ಲಿ ಆಟ, ಬಿಸಿಸಿಐಗೆ ಮಾಹಿತಿ!

ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸದ್ಯದ ಮಟ್ಟಿಗೆ ಏಕದಿನ ಹಾಗೂ ಅಂತಾರಾಷ್ಟ್ರೀಯ ಟಿ20ಯಲ್ಲಿ ಆಡುವುದು ಅನುಮಾನ. ಈ ಬಗ್ಗೆ ಬಿಸಿಸಿಐಗೆ ಅವರು ಮಾಹಿತಿ ನೀಡಿದ್ದಾರೆ. ಆದರೆ, ರೋಹಿತ್‌ ಶರ್ಮ ನಿರ್ಧಾರದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

indefinite break from ODIs T20Is Virat Kohli informs BCCI no clarity on Rohit Sharma san
Author
First Published Nov 29, 2023, 7:56 PM IST

ಮುಂಬೈ (ನ29): ಟೀಮ್‌ ಇಂಡಿಯಾ ಮಾಜಿ  ನಾಯಕ ವಿರಾಟ್‌ ಕೊಹ್ಲಿ ಮುಂದಿನ ಅನಿರ್ದಿಷ್ಟ ಅವಧಿಯವರೆಗೆ ಸೀಮಿತ ಓವರ್‌ಗಳ ಕ್ರಿಕೆಟ್‌ ಅಂದರೆ, ಏಕದಿನ ಹಾಗೂ ಟಿ20 ಸರಣಿಗಳಿಗೆ ತಾವು ಲಭ್ಯರಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಭಾರತ ತಂಡ ಮುಂದಿನ ದಕ್ಷಿಣ ಆಫ್ರಿಕಾ ಪ್ರವಾಸ ಹಾಗೂ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಿಂದ ವಿರಾಟ್‌ ಕೊಹ್ಲಿ ಹೊರಗುಳಿಯಲಿದ್ದಾರೆ. ಸದ್ಯಕ್ಕೆ ವಿರಾಟ್‌ ಕೊಹ್ಲಿ ರೆಡ್‌ ಬಾಲ್‌ ಕ್ರಿಕೆಟ್‌ ಅಂದರೆ ಟೆಸ್ಟ್‌ ಕ್ರಿಕೆಟ್‌ನತ್ತ ಗಮನಹರಿಸಲು ನಿರ್ಧರಿಸಿದ್ದಾರೆ ಇದರಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರು ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮಾತ್ರವೇ ಆಡಲಿದ್ದಾರೆ. ಏಕದಿನ ಹಾಗೂ ಟಿ20 ಸರಣಿಗೆ ತಾವು ಲಭ್ಯರಿಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. "ಅವರು (ಕೊಹ್ಲಿ) ಬಿಸಿಸಿಐ ಮತ್ತು ಆಯ್ಕೆದಾರರಿಗೆ ವೈಟ್-ಬಾಲ್ ಕ್ರಿಕೆಟ್‌ನಿಂದ ವಿರಾಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ ಮತ್ತು ಅವರು ಮುಂದೆ ವೈಟ್-ಬಾಲ್ ಕ್ರಿಕೆಟ್ ಅನ್ನು ಯಾವಾಗ ಆಡಲು ಬಯಸುತ್ತಾರೆ ಎಂಬುದರ ಕುರಿತು ಅವರೇ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ಟೆಸ್ಟ್‌ ಕ್ರಿಕೆಟ್‌ ಆಡುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ, ಅಂದರೆ ಅವರು ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಗೆ ಲಭ್ಯವಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್-ಬಾಲ್ ಲೆಗ್‌ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಲಭ್ಯತೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆಸ್ಟ್ರೇಲಿಯಾದಲ್ಲಿ 2022 ರ ಟಿ 20 ವಿಶ್ವಕಪ್‌ನಿಂದ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಟಿ 20 ಕ್ರಿಕೆಟ್ ಆಡಿಲ್ಲ ಆದರೆ ಮುಂದಿನ ವರ್ಷ ಜೂನ್‌ನಲ್ಲಿ ವಿಶ್ವಕಪ್ ನಡೆಯಲಿದ್ದು, ಐಸಿಸಿ ಟ್ರೋಫಿ ಗೆಲ್ಲಲು ಇಬ್ಬರೂ ಮರಳಬಹುದು ಎನ್ನುವ ಮಾತುಕತೆ ನಡೆದಿದೆ. . ಇದಲ್ಲದೆ, ರೋಹಿತ್ ವಿಶ್ವಕಪ್‌ನಲ್ಲಿ ಬ್ಯಾಟ್‌ನೊಂದಿಗೆ ರೀತಿಯ ಪ್ರದರ್ಶನ ಮತ್ತು ಅವರಲ್ಲಿರುವ ನಾಯಕತ್ವದ ಕೌಶಲ್ಯದ ನಂತರ, ಟಿ 20 ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಲು ಅವರನ್ನು ಕೇಳುವ ಸಾಧ್ಯತೆ ಇದೆ. ಅದರಲ್ಲೂ ವಿಶ್ವಕಪ್‌ ಇನ್ನು ಆರು ತಿಂಗಳಷ್ಟೇ ದೂರವಿರುವ ಕಾರಣ, ಟಿ20 ಕ್ರಿಕೆಟ್‌ನಲ್ಲೂ ರೋಹಿತ್‌ ಶರ್ಮ ಅವರೇ ನಾಯಕರಾಗಿ ಮುಂದುವರಿಯಲಿ ಎನ್ನುವುದು ಬಿಸಿಸಿಐ ಬಯಕೆಯಾಗಿದೆ.

ಆದರೆ ಸದ್ಯದ ಪರಿಸ್ಥಿತಿಯಂತೆ ರೋಹಿತ್ ಮತ್ತು ಕೊಹ್ಲಿ ಇನ್ನು ಮುಂದೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಅದಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿಯೂ ಅವರು ಆಡುವ ಸಾಧ್ಯತೆ ಅನುಮಾನವಾಗಿದೆ. ಅದಲ್ಲದೆ, ಟಿ20 ವಿಶ್ವಕಪ್‌ವರೆಗೂ ಭಾರತ ಯಾವುದೇ ದೊಡ್ಡ ಏಕದಿನ ಸರಣಿಯನ್ನೂ ಹೊಂದಿಲ್ಲ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದ್ದು ಆ ಬಳಿಕ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿದೆ. ಕೊಹ್ಲಿ ಹಾಗೂ ರೋಹಿತ್‌ ಶರ್ಮ ಇಬ್ಬರೂ ಎರಡೂ ಟೆಸ್ಟ್‌ ಪಂದ್ಯ ಆಡುವ ಸಾಧ್ಯತೆ ಇದೆ. ಅದಾದ ಬಳಿಕ, ಅಫ್ಘಾನಿಸ್ತಾನ ತಂಡದ ವಿರುದ್ಧ ತವರಿನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಆ ಬಳಿಕ ಮತ್ತೆ ಯಾವುದೇ ಸರಣಿಗಳಿಲ್ಲ. ಇಂಗ್ಲೆಂಡ್‌ ತಂಡ ಐದು ಪಂದ್ಯಗಳ ಟೆಸ್ಟ್‌ಗಾಗಿ ಭಾರತಕ್ಕೆ ಪ್ರಯಾಣ ಮಾಡಲಿದ್ದರೆ, ಆ ಬಳಿಕ ಐಪಿಎಲ್‌ ನಡೆಯಲಿದೆ. ಆ ನಂತರ ಕೆರಿಬಿಯನ್‌ ಹಾಗೂ ಅಮೆರಿಕದ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ.

ಗ್ರೀನ್ ಎಂಟ್ರಿಯಿಂದ ಬದಲಾಗುತ್ತಾ RCB ಹಣೆಬರಹ..? ಎದುರಾಳಿಗೆ ನಡುಕ ಹುಟ್ಟಿಸುತ್ತಿದೆ ಬ್ಯಾಟಿಂಗ್ ಲೈನ್ಅಪ್..!

ಜೂನ್‌ವರೆಗೆ ಭಾರತ ತಂಡ ಆರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಕೊಹ್ಲಿ ಹಾಗೂ ರೋಹಿತ್‌ ಶರ್ಮ ಇವುಗಳನ್ನು ಮಿಸ್‌ ಮಾಡಿಕೊಂಡರೆ ಏನೂ ವ್ಯತ್ಯಾಸವಾಗೋದಿಲ್ಲ. ಟಿ20 ವಿಶ್ವಕಪ್‌ ಬಳಿಕವೇ ಇವರಿಬ್ಬರ ಸೀಮಿತ ಓವರ್‌ಗಳ ಕ್ರಿಕೆಟ್‌ನ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ. ವಿಶ್ವಕಪ್‌ ಬಳಿಕ ಭಾರತ ತಂಡ ಶ್ರೀಲಂಕಾ ಪ್ರವಾಸ ಮಾಡಲಿದ್ದು, ಟಿ20 ಹಾಗೂ ಏಕದಿನ ಸರಣಿ ಆಡಲಿದೆ.

ಗುಡ್‌ ನ್ಯೂಸ್ ಕೊಟ್ಟ ಬಿಸಿಸಿಐ: ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್‌ ಕೋಚ್ ಆಗಿ ಮುಂದುವರಿಕೆ..!

Follow Us:
Download App:
  • android
  • ios