ನವ​ದೆ​ಹ​ಲಿ(ಅ.17): ನಾನು ಕೂಡ ಎಲ್ಲ​ರಂತೆಯೇ, ನನಗೂ ಕೋಪ ಬರುತ್ತದೆ. ಆದರೆ ಭಾವ​ನೆ​ಗಳ​ ಮೇಲೆ ಉತ್ತ​ಮ ನಿಯಂತ್ರಣ ಸಾಧಿ​ಸಿ​ದ್ದೇನೆ ಎಂದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದ್ದಾರೆ. 
ಧೋನಿ ಮಗಳು ಝಿವಾ ಕನ್ನಡಕ ಕದ್ದರಾ ಈ ಬಾಲಿವುಡ್ ಸ್ಟಾರ್..?

ವಿಶ್ವ​ಕಪ್‌ ಸೆಮಿ​ಫೈ​ನಲ್‌ ಸೋಲಿನ ಬಳಿಕ ಜಾಹೀ​ರಾತು ಕಾರ್ಯ​ಕ್ರ​ಮ​ದಲ್ಲಿ ಧೋನಿ ಕಾಣಿ​ಸಿ​ಕೊಂಡ​ರು ‘ಇತ​ರ​ರಿಗಿಂತ ಹೆಚ್ಚು ಭಾವ​ನೆ​ಗ​ಳ ಮೇಲೆ ನಿಯಂತ್ರಣ ಹೊಂದಿ​ದ್ದೇನೆ. ನನಗೂ ಹತಾಶೆ, ಕೋಪ, ನಿರಾಸೆ ಮೂಡು​ತ್ತದೆ. ಆದರೆ ಇವು​ಗಳ್ಯಾವುದೂ ರಚ​ನಾ​ತ್ಮಕ ಭಾವ​ನೆ​ಗ​ಳಲ್ಲ ಎಂಬು​ದು ಮುಖ್ಯ​ವಾದ ಅಂಶ. ಆ ವೇಳೆ ಭಾವ​ನೆ​ಗಿಂತ ಏನು ಮಾಡ​ಬೇಕೆಂಬ ನಿರ್ಧಾರ ಮುಖ್ಯ​. ಮುಂದೇನು ಮಾಡ​ಬೇ​ಕು? ಯಾರನ್ನು ಬಳ​ಸ​ಬ​ಹುದು? ಎಂಬಿತ್ಯಾದಿ ಯೋಚನೆ​ಗ​ಳಿಂದ ಭಾವ​ನೆ​ಗ​ಳನ್ನು ನಿಯಂತ್ರಿ​ಸು​ತ್ತೇ​ನೆ’ ಎಂದು ಧೋನಿ ತಿಳಿ​ಸಿ​ದ​ರು.

ಪುಲ್ವಾಮ ಹುತಾತ್ಮರ ಮಕ್ಕ​ಳಿಗೆ ಸೆಹ್ವಾಗ್‌ ಶಾಲೆಯಲ್ಲಿ ಉಚಿತ ಶಿಕ್ಷಣ

ಅ.24ಕ್ಕೆ ಧೋನಿ ಭವಿಷ್ಯ ನಿರ್ಧಾ​ರ?

ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ ಭವಿ​ಷ್ಯದ ಕುರಿತು ರಾಷ್ಟ್ರೀಯ ಆಯ್ಕೆ​ಗಾ​ರರ ಬಳಿ ಅ.24ರಂದು ಮಾತ​ನಾ​ಡು​ವು​ದಾಗಿ ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಬುಧವಾರ ತಿಳಿ​ಸಿ​ದರು. 

ಟ್ರೋಲಿಗನ ಬಾಯಿ ಮುಚ್ಚಿಸಿದ ಮಿಥಾಲಿ ರಾಜ್..!

ಅ.24ರಂದು ಬಾಂಗ್ಲಾ​ದೇಶ ವಿರುದ್ಧ 3 ಪಂದ್ಯ​ಗಳ ತವ​ರಿನ ಟಿ20 ಸರ​ಣಿಗೆ ಭಾರತ ತಂಡ​ವನ್ನು ಆಯ್ಕೆ ಮಾಡ​ಲಾ​ಗು​ವುದು. ಅದೇ ದಿನ ಆಯ್ಕೆ​ಗಾ​ರ​ರನ್ನು ಭೇಟಿ​ ಸಂದರ್ಭ ಈ ವಿಚಾರ ಚರ್ಚಿಸುವುದಾಗಿ ಗಂಗೂಲಿ ಹೇಳಿದ್ದಾರೆ. ಈ ವಿಚಾ​ರ​ದಲ್ಲಿ ಧೋನಿ ಅಭಿ​ಪ್ರಾ​ಯವೂ ಮುಖ್ಯ. ಧೋನಿ ಜೊತೆ ಮಾತ​ನಾ​ಡು​ವೆ’ ಎಂದು ಗಂಗೂಲಿ ಹೇಳಿ​ದ​ರು.