ಪುಲ್ವಾಮ ಹುತಾತ್ಮರ ಮಕ್ಕಳಿಗೆ ಸೆಹ್ವಾಗ್ ಶಾಲೆಯಲ್ಲಿ ಉಚಿತ ಶಿಕ್ಷಣ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಜನ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳಿಗೆ ಸೆಹ್ವಾಗ್ ಉಚಿತ ಶಿಕ್ಷಣ, ತರಭೇತಿ ನೀಡುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಅ.17]: ಪುಲ್ವಾಮ ಉಗ್ರರ ದಾಳಿಯಲ್ಲಿ ಮಡಿದ ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಕ್ರಿಕೆಟ್ ತರಬೇತಿ ಹಾಗೂ ಶಿಕ್ಷಣವನ್ನು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡುತ್ತಿದ್ದಾರೆ.
ಭಾರತದಲ್ಲಿ ಟಿ20 ಆಡಲು ಸಜ್ಜಾದ ಸಚಿನ್, ಲಾರಾ, ಸೆಹ್ವಾಗ್!
ಹರ್ಯಾಣದಲ್ಲಿರುವ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಯೋಧರ ಮಕ್ಕಳಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಿದ್ದಾರೆ. ಸೆಹ್ವಾಗ್ ಅವರ ಈ ಕಾರ‍್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಪುಲ್ವಾಮಾ ದಾಳಿ ಘಟನೆ ನಂತರ ಕಾಶ್ಮೀರದಲ್ಲಿ 93 ಉಗ್ರರ ಹತ್ಯೆ
ಬುಧವಾರ ಸೆಹ್ವಾಗ್ ನಾಲ್ಕು ಚಿತ್ರಗಳನ್ನು ಟ್ವೀಟ್ ಮಾಡಿದ್ದು, ‘ಹೀರೋಗಳ ಮಕ್ಕಳು! ಸೆಹ್ವಾಗ್ ಶಾಲೆಯಲ್ಲಿ ಇವರಿಬ್ಬರನ್ನು ಹೊಂದಿರುವುದು, ಅವರ ಜೀವನ ರೂಪಿಸಲು ಕೊಡುಗೆ ನೀಡುವುದು ನಮ್ಮ ಪುಣ್ಯ. ಬ್ಯಾಟ್ಸ್ಮನ್ ಅರ್ಪಿತ್ ಸಿಂಗ್, ಪುಲ್ವಾಮ ಹುತಾತ್ಮ ರಾಮ್ ವಕೀಲ್ ಪುತ್ರ. ಬೌಲರ್ ರಾಹುಲ್ ಸೋರೆಂಗ್, ಪುಲ್ವಾಮ ಹುತಾತ್ಮ ವಿಜಯ್ ಸೋರೆಂಗ್ ಪುತ್ರ. ಈ ಸಂತಸವನ್ನು ಬೇರಾರಯವುರಲ್ಲೂ ಸೋಲಿಸಲಾಗದು!’ ಎಂದು ಬರೆದಿದ್ದರು.
BCCIಗೆ ಗಂಗೂಲಿ ಬಿಗ್ ಬಾಸ್; ವಿಶೇಷ ರೀತಿಯಲ್ಲಿ ಶುಭಕೋರಿದ ಸೆಹ್ವಾಗ್!
ಇದೇ ವರ್ಷ ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೊರ್ ಸಮೀಪ ಭಾರತೀಯ ಸೇನಾ ವಾಹನದ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ಆತ್ಮಾಹುತಿ ಕಾರು ಬಾಂಬ್ ದಾಳಿ ನಡೆಸಿದ್ದರು. ಈ ಭಯೋತ್ಪಾದಕ ದಾಳಿಯಿಂದ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸುವುದಕ್ಕಾಗಿ ಮಾಜಿ ಕ್ರಿಕೆಟಿಗರಾದ ಸೆಹ್ವಾಗ್, ಗಂಭೀರ್ ತಾವಾಗಿಯೇ ಮುಂದೆ ಬಂದಿದ್ದರು.