ಟ್ರೋಲಿಗನ ಬಾಯಿ ಮುಚ್ಚಿಸಿದ ಮಿಥಾಲಿ ರಾಜ್..!
ಮಾತೃಭಾಷೆಯ ಬಗ್ಗೆ ಟ್ರೋಲ್ ಮಾಡಲು ಬಂದ ವ್ಯಕ್ತಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಅ.16]: ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ತಮ್ಮ ಮಾತೃಭಾಷೆಯಾದ ತಮಿಳನ್ನು ಬಳಸುವುದಿಲ್ಲ ಎನ್ನುವ ಟೀಕೆಗೆ ಖಡಕ್ ಆಗಿಯೇ ಉತ್ತರಿಸಿದ್ದಾರೆ.
ಮೂಲತಃ ತಮಿಳುನಾಡಿನವರಾದ ಮಿಥಾಲಿ ರಾಜ್, ಇಂಗ್ಲೀಷ್, ಹಿಂದಿ ಹಾಗೂ ತೆಲುಗು ಬಳಸುತ್ತಾರೆ. ಆದರೆ ತಮಿಳು ಮಾತನಾಡುವುದಿಲ್ಲ ಎಂದು ಟ್ವಿಟರಿಗನೊಬ್ಬ ಟ್ವೀಟ್ ಮಾಡಿದ್ದ. ಆಕೆಗೆ ತಮಿಳು ಗೊತ್ತಿಲ್ಲ. ಅವರು ಇಂಗ್ಲೀ಼ಷ್, ತೆಲುಗು, ಹಿಂದಿ ಮಾಯನಾಡುತ್ತಾರೆ ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿ ಮಿಥಾಲಿ ರಾಜ್ ಕಾಲೆಳೆದಿದ್ದ.
T20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಮಿಥಾಲಿ ರಾಜ್
ಇದಕ್ಕೆ 36 ವರ್ಷದ ಮಿಥಾಲಿ ತಮಿಳಿನಲ್ಲೇ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ತಮಿಳು ನನ್ನ ಮಾತೃಭಾಷೆ. ನಾನು ತಮಿಳಿನಲ್ಲಿ ಚೆನ್ನಾಗಿ ಮಾತನಾಡುತ್ತೇನೆ. ನಾನು ತಮಿಳುನಾಡಿನವಳು ಎಂದು ಹೇಳುವುದಕ್ಕೆ ಹೆಮ್ಮೆಯೆನಿಸುತ್ತದೆ. ಇದೆಲ್ಲವುದರ ಹೊರತಾಗಿ ನಾನೊಬ್ಬ ಹೆಮ್ಮೆಯ ಭಾರತೀಯಳು ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಮುಂದುವರೆದು ಸುಗು, ನೀವು ನನ್ನೆಲ್ಲಾ ಪೋಸ್ಟ್’ಗಳಿಗೂ ಟೀಕೆ ಮಾಡುತ್ತಲೇ ಇರುತ್ತೀರ. ನಾನು ಹೇಗಿರಬೇಕು. ಏನು ಮಾಡಬೇಕು ಎಂಬ ಸಲಹೆಯಂತೆಯೇ ನಾನು ನಡೆಯುತ್ತಿದ್ದೇನೆ ಎಂದು ವ್ಯಂಗ್ಯವಾಗಿಯೇ ಟ್ವೀಟ್ ಮಾಡಿದ್ದಾರೆ.
ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಪಂದ್ಯವನ್ನೂ ಗೆಲ್ಲುವುದರೊಂದಿಗೆ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಇದೇ ಪಂದ್ಯದಲ್ಲಿ ಮಿಥಾಲಿ ರಾಜ್ ನಾಯಕಿಯಾಗಿ ತಮ್ಮ ನೂರನೇ ಗೆಲುವಿಗೂ ಸಾಕ್ಷಿಯಾದರು. ಇದರ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ 20 ವರ್ಷ ಪೂರೈಸಿದ ಸಾಧನೆಯನ್ನು ಮಾಡಿದರು.
ಇದೇ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಮಿಥಾಲಿ ರಾಜ್ ಟಿ20 ಕ್ರಿಕೆಟ್’ಗೆ ವಿದಾಯ ಹೇಳಿದ್ದರು. ಏಕದಿನ ಕ್ರಿಕೆಟ್’ನಲ್ಲಿ ಇನ್ನಷ್ಟು ಗಮನ ಹರಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು.