MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • T20 Rankings: ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!

T20 Rankings: ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!

ದುಬೈ: ಅಂತಾರಾಷ್ಟ್ರೀಯ ಟಿ20 ನೂತನ ರ್‍ಯಾಂಕಿಂಗ್‌ ಪ್ರಕಟವಾಗಿದ್ದು, ಕೆಲವೊಂದು ಮಹತ್ವದ ಬದಲಾವಣೆಗಳಾಗಿವೆ.ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ ಪಡೆದಿದ್ದಾರೆ.

1 Min read
Author : Naveen Kodase
Published : Mar 18 2026, 05:45 PM IST
Share this Photo Gallery
  • FB
  • TW
  • Linkdin
  • Whatsapp
16
ಒಂದು ಸ್ಥಾನ ಮೇಲೇರಿದ ಸಂಜು ಸ್ಯಾಮ್ಸನ್
Image Credit : Getty

ಒಂದು ಸ್ಥಾನ ಮೇಲೇರಿದ ಸಂಜು ಸ್ಯಾಮ್ಸನ್

ವಿಶ್ವಕಪ್ ನಂತರ ಯಾವುದೇ ಪಂದ್ಯವನ್ನು ಆಡಿಲ್ಲವಾದರೂ, ಐಸಿಸಿ ಟಿ20 ರಾಂಕಿಂಗ್‌ನಲ್ಲಿ ಕೇರಳ ಮೂಲದ ಆಟಗಾರ ಆಟಗಾರ ಸಂಜು ಸ್ಯಾಮ್ಸನ್ ಏರಿಕೆ ಕಂಡಿದ್ದಾರೆ. ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸಂಜು, ಒಂದು ಸ್ಥಾನ ಮೇಲೇರಿ 21ನೇ ಸ್ಥಾನಕ್ಕೆ ತಲುಪಿದ್ದಾರೆ.

26
ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ
Image Credit : Getty

ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ

ಅವರ ಆರಂಭಿಕ ಜೊತೆಗಾರ ಅಭಿಷೇಕ್ ಶರ್ಮಾ 875 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂಬರ್ 1 ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇಶಾನ್ ಕಿಶನ್ ಕೇವಲ 4 ರೇಟಿಂಗ್ ಪಾಯಿಂಟ್‌ಗಳ ವ್ಯತ್ಯಾಸದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ತಿಲಕ್ ವರ್ಮಾ ಒಂದು ಸ್ಥಾನ ಜಿಗಿದು 6ನೇ ಸ್ಥಾನಕ್ಕೆ ಬಂದರೆ, ನಾಯಕ ಸೂರ್ಯಕುಮಾರ್ ಯಾದವ್ 9ನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಶಿವಂ ದುಬೆ (27) ಮತ್ತು ಹಾರ್ದಿಕ್ ಪಾಂಡ್ಯ (48) ಅವರ ರಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Related Articles

Related image1
ಬೇಕಂತಲೇ ಸಂಜು ಸ್ಯಾಮ್ಸನ್ ಫೋಟೋ ಬಿಟ್ಟು ಫೋಸ್ಟ್ ಮಾಡಿದ್ರಾ ಶುಭ್‌ಮನ್ ಗಿಲ್? ಆಕ್ರೋಶ ಹೊರಹಾಕಿದ ಫ್ಯಾನ್ಸ್‌
Related image2
ಮೊದಲ ಮಾತುಕತೆಯಲ್ಲೇ ದ್ರಾವಿಡ್‌ರನ್ನು ತಬ್ಬಿಬ್ಬು ಮಾಡಿದ್ದ ವೈಭವ್ ಸೂರ್ಯವಂಶಿ! ಆ ಕ್ಷಣವನ್ನು ನೆನಪಿಸಿದ ಸಂಜು ಸ್ಯಾಮ್ಸನ್
36
ಟಿ20 ಬೌಲಿಂಗ್‌ನಲ್ಲೂ ರಶೀದ್ ಖಾನ್ ನಂ.1
Image Credit : Getty

ಟಿ20 ಬೌಲಿಂಗ್‌ನಲ್ಲೂ ರಶೀದ್ ಖಾನ್ ನಂ.1

ಟಿ20 ಬೌಲಿಂಗ್ ರಾಂಕಿಂಗ್‌ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ತಮ್ಮ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ವರುಣ್ ಚಕ್ರವರ್ತಿ ಎರಡನೇ ಸ್ಥಾನದಲ್ಲಿದ್ದಾರೆ.

46
ಐದನೇ ಸ್ಥಾನಕ್ಕೆ ಎಂಟ್ರಿಕೊಟ್ಟ ಬುಮ್ರಾ
Image Credit : ANI

ಐದನೇ ಸ್ಥಾನಕ್ಕೆ ಎಂಟ್ರಿಕೊಟ್ಟ ಬುಮ್ರಾ

ಮತ್ತೊಂದು ಪ್ರಮುಖ ಬದಲಾವಣೆ ಎಂದರೆ, ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಬಂದಿದ್ದಾರೆ. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ 11 ಸ್ಥಾನಗಳ ಭರ್ಜರಿ ಜಿಗಿತ ಕಂಡು 13ನೇ ಸ್ಥಾನಕ್ಕೆ ಏರಿದ್ದಾರೆ.

56
ಡೇರಲ್ ಮಿಚೆಲ್ ನಂ.1
Image Credit : AFP

ಡೇರಲ್ ಮಿಚೆಲ್ ನಂ.1

ಏಕದಿನ ಬ್ಯಾಟಿಂಗ್ ರಾಂಕಿಂಗ್‌ನಲ್ಲಿ, ಪಾಕಿಸ್ತಾನದ ಆಟಗಾರ ಸಲ್ಮಾನ್ ಆಗಾ 9 ಸ್ಥಾನ ಮೇಲೇರಿ 10ನೇ ಸ್ಥಾನಕ್ಕೆ ಬಂದಿರುವುದು ಗಮನಾರ್ಹ ಬದಲಾವಣೆ. ಈ ರಾಂಕಿಂಗ್‌ನಲ್ಲಿ ಡೇರಿಲ್ ಮಿಚೆಲ್ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

66
ಏಕದಿನ ಬೌಲಿಂಗ್‌ನಲ್ಲೂ ರಶೀದ್ ಖಾನ್ ನಂ.1
Image Credit : Getty

ಏಕದಿನ ಬೌಲಿಂಗ್‌ನಲ್ಲೂ ರಶೀದ್ ಖಾನ್ ನಂ.1

ಏಕದಿನ ಬೌಲಿಂಗ್ ರಾಂಕಿಂಗ್‌ನಲ್ಲಿ 705 ರೇಟಿಂಗ್ ಅಂಕ ಹೊಂದಿರುವ ಆಫ್ಘಾನಿಸ್ತಾನದ ರಶೀದ್ ಖಾನ್ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಬಾಂಗ್ಲಾದೇಶದ ಆಟಗಾರ ಮೆಹಿದಿ ಹಸನ್ ಮಿರಾಜ್ 9 ಸ್ಥಾನ ಜಿಗಿದು 7ನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ಭಾರತದ ಕುಲ್ದೀಪ್ ಯಾದವ್ 8ನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ)
ಜಸ್ಪ್ರೀತ್ ಬುಮ್ರಾ
ಸಂಜು ಸ್ಯಾಮ್ಸನ್
ಐಸಿಸಿ ಟಿ20 ವಿಶ್ವಕಪ್
Latest Videos
Recommended Stories
Recommended image1
ಐಪಿಎಲ್‌ಗೆ ಸಡ್ಡು ಹೊಡೆಯಲು ಹೋದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮುಖಭಂಗ!
Recommended image2
ಟಿ20 ವಿಶ್ವಕಪ್ ಬಹಿಷ್ಕಾರ, ಬಾಂಗ್ಲಾ ಮಂಡಳಿಗೆ ಈಗ ಪಶ್ಚಾತ್ತಾಪ! ತನಿಖೆಗೆ ಸಮಿತಿ ರಚನೆ
Recommended image3
RCB ತಂಡ ಖರೀದಿ ರೇಸ್‌ನಿಂದ ಮ್ಯಾಂಚೆಸ್ಟರ್‌ ಯುನೈಟೆಡ್‌ ಔಟ್! ಅಂತಿಮ ಹಂತದಲ್ಲಿ ಕನ್ನಡಿಗ ಸೇರಿ ರೇಸ್‌ನಲ್ಲಿವೆ ಈ ಎರಡು ಸಂಸ್ಥೆಗಳು!
Related Stories
Recommended image1
ಬೇಕಂತಲೇ ಸಂಜು ಸ್ಯಾಮ್ಸನ್ ಫೋಟೋ ಬಿಟ್ಟು ಫೋಸ್ಟ್ ಮಾಡಿದ್ರಾ ಶುಭ್‌ಮನ್ ಗಿಲ್? ಆಕ್ರೋಶ ಹೊರಹಾಕಿದ ಫ್ಯಾನ್ಸ್‌
Recommended image2
ಮೊದಲ ಮಾತುಕತೆಯಲ್ಲೇ ದ್ರಾವಿಡ್‌ರನ್ನು ತಬ್ಬಿಬ್ಬು ಮಾಡಿದ್ದ ವೈಭವ್ ಸೂರ್ಯವಂಶಿ! ಆ ಕ್ಷಣವನ್ನು ನೆನಪಿಸಿದ ಸಂಜು ಸ್ಯಾಮ್ಸನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved