ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್‌ಗೆ ಬಾಕ್ಸಿಂಗ್ ರಿಂಗ್‌ಗೆ ಬರುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಈ ಸವಾಲಿಗೆ ಖಡಕ್ ತಿರುಗೇಟು ನೀಡಿರುವ ಭಜ್ಜಿ, ಖಾಲಿ ಪಾತ್ರೆಗಳೇ ಹೆಚ್ಚು ಸದ್ದು ಮಾಡುತ್ತವೆ ಎಂದು ಗೂಢಾರ್ಥವಾಗಿ ಉತ್ತರಿಸಿದ್ದಾರೆ. ಈ ಲೇಖನವು 2008ರ ಐಪಿಎಲ್ ಕಪಾಳಮೋಕ್ಷ ಪ್ರಕರಣದ ಹಿನ್ನೆಲೆಯನ್ನು ವಿವರಿಸುತ್ತದೆ.
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಎಸ್ ಶ್ರೀಶಾಂತ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಕೇರಳ ಮೂಲದ ಮಾಜಿ ಕ್ರಿಕೆಟಿಗ ಶ್ರೀಶಾಂತ್, ಹರ್ಭಜನ್ ಸಿಂಗ್ ಅವರನ್ನು ಉದ್ದೇಶಿಸಿ ತಾಕತ್ ಇದ್ದರೇ ಬಾಕ್ಸಿಂಗ್ ರಿಂಗ್‌ವೊಳಗೆ ಬರಲು ಬಹಿರಂಗವಾಗಿಯೇ ತೊಡೆ ತಟ್ಟಿದ್ದರು. ಇದೀಗ ಶ್ರೀಶಾಂತ್ ಅವರ ಈ ಬಹಿರಂಗ ಸವಾಲಿಗೆ ಹರ್ಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಭಜ್ಜಿ ಮೇಲೆ ಬಹಿರಂಗವಾಗಿ ತೊಡೆತಟ್ಟಿದ್ದ ಶ್ರೀಶಾಂತ್:
ಎಸ್ ಶ್ರೀಶಾಂತ್ ಒಂದು ಮೀಡಿಯಾವೊಂದರಲ್ಲಿ ಮಾತನಾಡುತ್ತಾ, ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡಿರುವ ಫೋಟೋವನ್ನು ತೋರಿಸಲಾಗುತ್ತದೆ. ಇದರ ಬಗ್ಗೆ ನೀವೇನಂತೀರಾ ಎಂದು ಕೇಳುತ್ತಾರೆ. ನಿಮ್ಮ ಬಳಿ ತಾಕತ್ತು ಇದೆಯಾ? ನೀವು ಏನಾದರೂ ನನ್ನ ಜತೆ ರಿಂಗ್‌ನಲ್ಲಿ ಇಳಿಯಲು ಸಾಧ್ಯನಾ? ಇದೇ ರೀತಿ ಗ್ಲೌಸ್ ಹಾಕಿಕೊಂಡು ಬನ್ನಿ ಹಾಗೂ ನನ್ನನ್ನು ಎದುರಿಸಿ ಎಂದು ಶ್ರೀಶಾಂತ್ ಓಪನ್ ಚಾಲೆಂಜ್ ಹಾಕಿದ್ದರು.
ಇಷ್ಟಕ್ಕೆ ಸುಮ್ಮನಾಗದ ಶ್ರೀಶಾಂತ್, 'ನಾನು ನಿಮಗೆ ಬಹಿರಂಗವಾಗಿಯೇ ಸವಾಲು ಹಾಕುತ್ತಿದ್ದೇನೆ. ನೀವು ನನ್ನ ಕಪಾಳೆ ಹೊಡೆದಿದ್ದರ ಬಗ್ಗೆ ಇನ್ನೂ ನಿಮಗೆ ಇನ್ನೂ ಪಶ್ಚಾತಾಪವಿದೆಯಾ? ಅದನ್ನೇ ಇಟ್ಟುಕೊಂಡು ಹಣ ಗಳಿಸುತ್ತಿದ್ದೀರ. ನೀವು ಒಮ್ಮೆ ಬಾಕ್ಸಿಂಗ್ ರಿಂಗ್‌ಗೆ ಬನ್ನಿ ಎಂದು ಮನವಿ ಮಾಡುತ್ತಿದ್ದೇನೆ. ನಾನು ಹೃದಯಾಂತರಾಳದಿಂದ ನಿಮ್ಮನ್ನು ಫೈಟಿಂಗ್‌ಗೆ ಆಹ್ವಾನಿಸುತ್ತಿದ್ದೇನೆ. ಒಂದುವೇಳೆ ನಿಮಗೆ ಸ್ವಾಭಿಮಾನವಿದ್ದರೇ, ನಿಜವಾದ ಕಾದಾಟ ಆಗಿಯೇಬಿಡಲಿ ಎಂದು ಶ್ರೀಶಾಂತ್ ಹೇಳಿದ್ದರು.
ಖಡಕ್ ತಿರುಗೇಟು ಕೊಟ್ಟ ಹರ್ಭಜನ್ ಸಿಂಗ್:
ಇನ್ನು ಶ್ರೀಶಾಂತ್ ಅವರ ಈ ಬಹಿರಂಗ ಸವಾಲು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಈ ವಿಡಿಯೋ ಹರ್ಭಜನ್ ಸಿಂಗ್ ಅವರ ಗಮನಕ್ಕೂ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಜ್ಜಿ, ಖಾಲಿ ಪಾತ್ರೆಗಳೇ ಹೆಚ್ಚು ಸದ್ದು ಮಾಡುತ್ತವೆ. ಆದರೆ ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೇ, ಭಜ್ಜಿ ತಮ್ಮ ವಿಡಿಯೋದಲ್ಲಿ ಎಲ್ಲೂ ಶ್ರೀಶಾಂತ್ ಹೆಸರು ಬಳಸಿಕೊಂಡಿಲ್ಲ.
ಅಷ್ಟಕ್ಕೂ ಏನಿದು ಕಪಾಳಮೋಕ್ಷ ಪ್ರಕರಣ:
ಅಂದಹಾಗೆ 2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಆಗ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೇ, ಎಸ್ ಶ್ರೀಶಾಂತ್ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು. ಪಂದ್ಯ ಮುಕ್ತಾಯದ ಬಳಿಕ ಉಭಯ ಆಟಗಾರರ ನಡುವೆ ಕೊಂಚ ಮಾತಿನ ಚಕಮಕಿ ನಡೆದಿತ್ತು. ಆಗ ತಾಳ್ಮೆ ಕಳೆದುಕೊಂಡ ಭಜ್ಜಿ, ಶ್ರೀಶಾಂತ್ ಕೆನ್ನೆಗೆ ಬಲವಾಗಿ ಬಾರಿಸಿದ್ದರು. ಇದರ ಬೆನ್ನಲ್ಲೇ ಶ್ರೀಶಾಂತ್, ಮೈದಾನದಲ್ಲೇ ಬಿಕ್ಕಿಬಿಕ್ಕಿ ಅತ್ತಿದ್ದರು. ಆ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ಘಟನೆಯ ಬಗ್ಗೆ ಕೆಲವು ತಿಂಗಳ ಹಿಂದೆ ಪ್ರತಿಕ್ರಿಯಿಸಿದ್ದ ಭಜ್ಜಿ, ಆ ಘಟನೆ ನಡೆಯಬಾರದಿತ್ತು. ಈ ವಿಚಾರದಲ್ಲಿ ನಿಜಕ್ಕೂ ನಾನು ಪಶ್ಚಾತಾಪಪಡುತ್ತಿದ್ದೇನೆ ಎಂದಿದ್ದರು.


