18 ವರ್ಷಗಳ ಹಿಂದೆ ನಡೆದ ಸ್ಲ್ಯಾಪ್ ಗೇಟ್ ವಿವಾದ ಮತ್ತೆ ಚರ್ಚೆಗೆ ಬಂದಿದೆ. ಹರ್ಭಜನ್ ಜೊತೆ ಸೆಣೆಸಲು ಶ್ರೀಶಾಂತ್ ಸಜ್ಜಾಗಿದ್ದಾರೆ. ಬಾಕ್ಸಿಂಗ್ ರಿಂಗ್ ಒಳಗೆ ಬರಲು ಸವಾಲು ಹಾಕಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಮತ್ತು ಹೆಚ್ಚು ಚರ್ಚೆಯಾಗಿದ್ದ "ಸ್ಲ್ಯಾಪ್ಗೇಟ್" ವಿವಾದ ಮತ್ತೊಮ್ಮೆ ಬಿಸಿ ಪಡೆದಿದೆ. 2008 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ನಂತರ ಹರ್ಭಜನ್ ಸಿಂಗ್,ಎಸ್. ಶ್ರೀಶಾಂತ್ ಅವರಿಗೆ ಹೊಡೆದಿದ್ರು. 18 ವರ್ಷಗಳ ನಂತರವೂ ಭಾರತದ ಮಾಜಿ ವೇಗಿ ಎಸ್. ಶ್ರೀಶಾಂತ್ ಕೋಪ ತಣ್ಣಗಾಗಿಲ್ಲ. ಹರ್ಭಜನ್ ಸಿಂಗ್ ಅವರನ್ನು ಶ್ರೀಶಾಂತ್ ಅಖಾಡಕ್ಕೆ ಆಹ್ವಾನಿಸಿದ್ದಾರೆ. ಬಾಕ್ಸಿಂಗ್ ರಿಂಗ್ ಒಳಗೆ ಮುಖಾಮುಖಿ ಹೋರಾಟ ನಡೆಸಲು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಬಹಿರಂಗ ಸವಾಲು
ದಿ ಲಲ್ಲಂಟಾಪ್ ನಲ್ಲಿ ನಡೆದ ಸಂದರ್ಶನವೊಂದರಲ್ಲಿ, ಶ್ರೀಶಾಂತ್ ಈ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಹಿಂದಿನ ಜಾಹೀರಾತೊಂದರ ಫೋಟೋ ತೋರಿಸಲಾಗಿದೆ. ಅದ್ರಲ್ಲಿ ಶ್ರೀಶಾಂತ್ ಹಾಗೂ ಹರ್ಭಜನ್ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡಿದ್ದಾರೆ. ಇದನ್ನು ನೋಡಿ ಅಭಿಪ್ರಾಯ ತಿಳಿಸುವಂತೆ ಶ್ರೀಶಾಂತ್ ಗೆ ಹೇಳಿದಾಗ, ಬೇರೆ ಆಲೋಚನೆ ಮಾಡ್ದೆ ನೇರವಾಗಿ ಹರ್ಭಜನ್ ಅವರಿಗೆ ಶ್ರೀಶಾಂತ್ ಸವಾಲು ಹಾಕಿದ್ದಾರೆ.
Vaibhav Sooryavanshi: ವೈಭವ್ ಸೂರ್ಯವಂಶಿಗೆ ಶಿಕ್ಷೆ ಕೊಡಿ ಎಂದವರಿಗೆ ಮುಟ್ಟಿ
ಹರ್ಭಜನ್ ಸಿಂಗ್ ಇನ್ನೂ ಈ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಅದರಿಂದ ಆರ್ಥಿಕವಾಗಿ ಲಾಭ ಗಳಿಸುತ್ತಿದ್ದಾರೆ ಎಂದು ಶ್ರೀಶಾಂತ್ ಹೇಳಿದ್ದಾರೆ. ಈ ಹಳೆ ಘಟನೆಗೆ ಶ್ವಾಶ್ವತ ಮುಕ್ತಿ ನೀಡುವ ಅಗತ್ಯವಿದೆ. ಅದಕ್ಕಾಗಿ ಹರ್ಭಜನ್ ಅವರನು ಬಾಕ್ಸಿಂಗ್ ರಿಂಗ್ ಒಳಗೆ ಆಹ್ವಾನಿಸ್ತಿದ್ದೇನೆ. ನಿಮಗೆ ರಿಂಗ್ ಒಳಗೆ ಪ್ರವೇಶಿಸಲು ಧೈರ್ಯವಿದೆಯೇ ಅಂತ ಶ್ರೀಶಾಂತ್ ಕೇಳಿದ್ದಾರೆ.
ನಿಮಗೆ ಧೈರ್ಯವಿದೆಯೇ? ನನ್ನ ಜೊತೆ ರಿಂಗ್ಗೆ ಬರಲು ಧೈರ್ಯವಿದೆಯೇ? ನೀವು ಬರಬಹುದೇ? ನನ್ನ ಜೊತೆ ರಿಂಗ್ ಒಳಗೆ ಬರಲು ನಿಮಗೆ ಧೈರ್ಯವಿದೆಯೇ? ಇದು ನಟನೆಯಲ್ಲ, ನಾನು ನಗುತ್ತಿದ್ದೇನೆ. ನೀವು ನಗುತ್ತಿಲ್ಲ, ನೀವು ಏನು ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ. ನೋಡೋಣ. ಇದು ಮುಕ್ತ ಸವಾಲು ಎಂದು ಶ್ರೀಶಾಂತ್ ಹೇಳಿದ್ದಾರೆ.
IPL 2027 ಆರಂಭ ಯಾವಾಗಿನಿಂದ? ಫೈನಲ್ ಮ್ಯಾಚ್ ಯಾವಾಗ? ಮುಂಬರುವ ಐಪಿಎಲ್‌ನ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ
ಜಾಹೀರಾತುಗಳು ಅಥವಾ ಸಾರ್ವಜನಿಕ ನಿಂದನೆಯ ಬದಲಾಗಿ ನಿಜವಾದ ಹೋರಾಟದಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವಂತೆ ಹರ್ಭಜನ್ಗೆ ಶ್ರೀಶಾಂತ್ ಹೇಳಿದ್ದಾರೆ. ಇದನ್ನು ಸ್ವಾಭಿಮಾನದ ವಿಷಯ ಎಂದ ಶ್ರೀಶಾಂತ್, ಹರ್ಭಜನ್ ಅವರನ್ನು ರಿಂಗ್ನಲ್ಲಿ ಎದುರಿಸಲು ಸಿದ್ಧ ಎಂದಿದ್ದಾರೆ. ಅಷ್ಟೇ ಅಲ್ಲ, ಭಜ್ಜಿ, ನಾನು ನಿಮಗೆ ಸವಾಲು ಹಾಕುತ್ತೇನೆ. ನಿಮಗೆ ಮತ್ತು ನನಗೆ ಹೊಡೆತದ ಘಟನೆಯಿಂದ ಸಮಸ್ಯೆ ಆಗಿದ್ದು, ನೀವು ಅದ್ರಿಂದ ಕೈತುಂಬಾ ಸಂಪಾದಿಸುತ್ತಿದ್ದರೆ, ನಾನು ಸಹ ಗಳಿಸಲು ಶುರು ಮಾಡ್ತೇನೆ. ರಿಂಗ್ಗೆ ಬನ್ನಿ. ನಾನು ನಿಮ್ಮನ್ನು ಹೃದಯಪೂರ್ವಕವಾಗಿ ಕರೆಯುತ್ತಿದ್ದೇನೆ. ನಮಗೆ ಸ್ವಾಭಿಮಾನವಿದ್ದರೆ, ಜಾಹೀರಾತು ಮಾಡ್ಬೇಡಿ, ನಿಜವಾದ ರೀತಿಯಲ್ಲಿ ಫೈಟ್ ಮಾಡೋಣ. ಎಲ್ಲಾ ಮಲಯಾಳಿಗಳು ಮತ್ತು ಎಲ್ಲಾ ಸರ್ದಾರ್ಗಳಿಗಾಗಿ ದಯವಿಟ್ಟು ಬನ್ನಿ ಎಂದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ, ಇಬ್ಬರು ಆಟಗಾರರು ಹಲವಾರು ಸಾರ್ವಜನಿಕ ವೇದಿಕೆಗಳು, ಟಿವಿ ಕಾರ್ಯಕ್ರಮಗಳು ಮತ್ತು ಜಾಹೀರಾತುಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದ್ರೆ ಇತ್ತೀಚಿಗೆ ಒಂದು ಜಾಹೀರಾತಿನ ಕಾರಣಕ್ಕೆ ಮತ್ತೆ ಇಬ್ಬರ ಸಂಬಂಧ ಹಳಸಿದೆ. ಇಬ್ಬರೂ ಮತ್ತೆ ದೂರವಾಗಿದ್ದಾರೆ. ಶ್ರೀಶಾಂತ್ ಈ ಸಂಬಂಧವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಪ್ರಸ್ತುತ, ಈ ಸವಾಲಿಗೆ ಹರ್ಭಜನ್ ಸಿಂಗ್ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದ್ರೆ ಶ್ರೀಶಾಂತ್ ಅವರ ಹೇಳಿಕೆ 2008 ರ ಸ್ಲ್ಯಾಪ್ಗೇಟ್ ವಿವಾದವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.


