ಪಾಕಿಸ್ತಾನಿ ಫ್ಯಾನ್‌ಗೆ 'ಸುಂದರ..ಅತಿ ಸುಂದರ..' ರಿಪ್ಲೈ ನೀಡಿದ ಗೂಗಲ್‌ ಸಿಇಒ!

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಶುಭ ಕೋರಿ ಟ್ವೀಟ್‌ ಮಾಡಿದ ಗೂಗಲ್‌ ಸಿಇಒ ಸುಂದರ್‌ ಪಿಚೈ, ಈ ವೇಳೆ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸಾಧಿಸಿದ 4 ವಿಕೆಟ್‌ ಗೆಲುವನ್ನೂ ಉಲ್ಲೇಖ ಮಾಡಿದ್ದರು.
 

Google CEO Sundar Pichai  Epic Response To Pakistan Fan Tweet Goes Viral san

ಬೆಂಗಳೂರು (ಅ.24): ಗೂಗಲ್‌ ಸಿಇಒ ಸುಂದರ್‌ ಪಿಚೈ ಸೋಮವಾರ ತಮ್ಮ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಈ ವೇಳೆ ಟೀಮ್‌ ಇಂಡಿಯಾ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸಿದ ವಿಚಾರವನ್ನು ಅವರು ಸೇರಿಸಿದ್ದರು. ಭಾರತೀಯ ಮೂಲದ ಸುಂದರ್‌ ಪಿಚೈ, ಕ್ರಿಕೆಟ್‌ನ ಅತಿದೊಡ್ಡ ಅಭಿಮಾನಿ. ಐಐಟಿ ಖರಗ್‌ಪುರದಲ್ಲಿ ಓದುತ್ತಿದ್ದ ವೇಳೆ ಕ್ರಿಕೆಟ್‌ ನೋಡಲು ಪಡುತ್ತಿದ್ದ ಪಾಡುಗಳನ್ನು ಸಾಕಷ್ಟು ಬಾರಿ ವಿವರಿಸಿದ್ದಾರೆ. ಸೋಮವಾರ ತಮ್ಮ ಟ್ವಿಟರ್‌ನಲ್ಲಿ, 'ಕಳೆದ ರಾತ್ರಿ ನಡೆದ ಪಂದ್ಯದ ಕೊನೆಯ ಮೂರು ಓವರ್‌ಗಳನ್ನು ಮತ್ತೊಮ್ಮೆ ನೋಡುವ ಮೂಲಕ ನಾನು ದೀಪಾವಳಿ ಹಬ್ಬವನ್ನು ಆಚರಿಸಿದೆ. ಎಂಥಾ ಪಂದ್ಯ ಮತ್ತು ಅದ್ಭುತ ಪ್ರದರ್ಶನ' ಎಂದು ಪಿಚೈ ಬರೆದುಕೊಂಡಿದ್ದರು. ಭಾನುವಾರ ಮೆಲ್ಬೋರ್ನ್‌ನ ಎಂಸಿಜಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಾಲ್ಕು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತ್ತು.


ಪಿಚೈಗೆ ಕೆಣಕಿದ ಪಾಕಿಸ್ತಾನಿ ಫ್ಯಾನ್‌, ಅದ್ಭುತವಾಗಿ ತಿರುಗೇಟು ನೀಡಿದ ಗೂಗಲ್‌ ಸಿಇಒ: ಸುಂದರ್‌ ಪಿಚೈ ಮಾಡಿರುವ ಈ ಟ್ವೀಟ್‌ಗೆ ಪ್ರತಿಯಾಗಿ ಪಾಕಿಸ್ತಾನದ ಅಭಿಮಾನಿಯಾಗಿರುವ ಮುಹಮ್ಮದ್ ಶಹಜೈಬ್, ಕೆಣಕುವಂಥ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಪಿಚೈ ನೀವು ಮೊದಲ ಮೂರು ಓವರ್‌ಗಳನ್ನು ಮತ್ತೊಮ್ಮೆ ನೋಡಬೇಕಿತ್ತು ಎಂದು ಬರೆದಿದ್ದ. ಭಾರತದ ಬ್ಯಾಟಿಂಗ್‌ನ ಮೊದಲ ಮೂರು ಓವರ್‌ಗಳಲ್ಲಿ ಟೀಮ್‌ ಇಂಡಿಯಾ ಕೆಲ ವಿಕೆಟ್‌ಗಳನ್ನು ಕಡಿಮೆ ರನ್‌ಗಳಿಗೆ ಕಳೆದುಕೊಂಡಿತ್ತು. 'ನೀವು ಮೊದಲ ಓವರ್‌ ನೋಡಬೇಕಿತ್ತ' ಎನ್ನುವ ಟ್ವೀಟ್‌ಗೆ ಅಷ್ಟೇ ಅದ್ಭುತವಾಗಿ ಪ್ರತಿಕ್ರಿಯೆ ನೀಡಿದ ಗೂಗಲ್‌ ಹಾಗೂ ಆಲ್ಫಾಬೆಟ್‌ ಸಿಇಒ, 'ಅದನ್ನೂ ಕೂಡ ಮಾಡಿದೆ, ಭುವಿ ಹಾಗೂ ಆರ್ಶದೀಪ್‌ ಎಂಥಾ ಅದ್ಭುತ ಸ್ಪೆಲ್‌ ಮಾಡಿದರು' ಎಂದು ಹೇಳುವ ಮೂಲಕ ಅಭಿಮಾನಿಯನ್ನು ಟ್ರೋಲ್‌ ಮಾಡಿದ್ದಾರೆ.

 

Google CEO Sundar Pichai  Epic Response To Pakistan Fan Tweet Goes Viral san

ಪಿಚೈ ಮಾಡಿರುವ ಎಪಿಕ್‌ ರಿಪ್ಲೈ, ಭಾರತ ತಂಡದ ಬ್ಯಾಟಿಂಗ್‌ನ ಬದಲಾಗಿ ಬೌಲಿಂಗ್‌ನ ಮೂರು ಓವರ್‌ಗಳದ್ದಾಗಿತ್ತು. ಆ ಮೂರು ಓವರ್‌ಗಳಲ್ಲಿ ಭಾರತದ ಭುವನೇಶ್ವರ್‌ ಕುಮಾರ್‌ ಹಾಗೂ ಆರ್ಶದೀಪ್‌ ಅದ್ಭುತವಾಗಿ ದಾಳಿ ಮಾಡಿದ್ದಲ್ಲದೆ, ಪಾಕಿಸ್ತಾನದ ಬಾಬರ್‌ ಅಜಮ್‌ (Babar azam) ಹಾಗೂ ಆರ್ಶದೀಪ್‌ನ (Arshadeep) ವಿಕೆಟ್‌ ಕೂಡ ಉರುಳಿಸಿದ್ದರು. ಸುಂದರ್‌ ಪಿಚೈ ಅವರ ಈ ಟ್ವೀಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ  (India-Pakistan Cricket Match)ಪಂದ್ಯದ ಕುರಿತು ಸುಂದರ್ ಪಿಚೈ ಟ್ವೀಟ್‌ಗೆ ಭಾರತೀಯ ಟ್ವಿಟರ್ (Twitter ) ಬಳಕೆದಾರರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇದು ಗೂಗಲ್ ಸಿಇಒ ಅವರ ಮುಂಜಾನೆಯ ಸರ್ಜಿಕಲ್ ಸ್ಟ್ರೈಕ್ ಎಂದು ಟ್ವಿಟರ್‌ನಲ್ಲಿಯೇ ಭಾರತದ ಅಭಿಮಾನಿಯೊಬ್ಬ ಬರೆದಿದ್ದಾನೆ. ಇನ್ನೊಬ್ಬ ವ್ಯಕ್ತಿ, ಇದಕ್ಕಿಂತ ಸುಂದರ ಉತ್ತರ ಇಲ್ಲವೇ ಇಲ್ಲ ಎಂದಿದ್ದಾರೆ. ಇದು ಸುಂದರ್‌ ಪಿಚೈ ಅಲ್ಲ, ಸುಂದರ್‌ ಪಿಟಾಯಿ ಎಂದು ಇನ್ನೊಬ್ಬರು ಬರೆದಿದ್ದಾರೆ.

ಭಾರತದ ಡಿಜಿಟಲ್‌ ಭವಿಷ್ಯಕ್ಕೆ ಗೂಗಲ್‌ ಬದ್ಧ: Sundar Pichai

ಸುಂದರ್‌ ಪಿಚೈ ಟ್ವೀಟ್‌ಗೆ ರಿಪೈ ಮಾಡಿದ್ದ ಶಹಜೈಬ್, ನಾನು ಭಾರತ ತಂಡದ ಬ್ಯಾಟಿಂಗ್‌ನ ಮೊದಲ ಮೂರು ಓವರ್‌ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇನ್ನೊಬ್ಬ, ವಾದ ಮಾಡಲು ಹೋಗಬೇಡ, ಇಂಥ ದೊಡ್ಡ ವ್ಯಕ್ತಿ ರಿಪ್ಲೈ ಮಾಡಿದ್ದಾರಲ್ಲ ಅದಕ್ಕಾಗಿ ಖುಷಿ ಪಡು (Google CEO Sunder Pichai) ಎಂದು ಬರೆದಿದ್ದಾರೆ.

Google London Office ಫೋಟೊಸ್‌ ಹಂಚಿಕೊಂಡ ಸಿಇಓ ಸುಂದರ್‌ ಪಿಚೈ: ಹೇಗಿರಲಿದೆ ನೋಡಿ ಹೊಸ ಕಚೇರಿ!

ಭಾರತದ ಸಾಕಷ್ಟು ಅಭಿಮಾನಿಗಳು, ಸುಂದರ್‌ ಪಿಚೈ ಅವರು ಮಾಡಿರುವ ಟ್ವೀಟ್‌ಅನ್ನು ಫ್ರೇಮ್‌ ಮಾಡಿಡು ಎಂದು ಟ್ವೀಟ್‌ ಮಾಡಿದ್ದರು. ಕೊನೆಗೆ ಶಹಜೈಬ್‌ ಅದನ್ನೂ ಕೂಡ ಮಾಡಿದ್ದು, ಪಕ್ಕದವರಿಂದ ಸಾಕಷ್ಟು ಮನವಿಗಳು ಬಂದ ಹಿನ್ನಲೆಯಲ್ಲಿ ಈ ಟ್ವೀಟ್‌ಅನ್ನು ಫ್ರೇಮ್‌ ಮಾಡಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವರು, 'ಅವಮಾವದಲ್ಲೂ ಸನ್ಮಾನ ಹುಡುಕೋದು ಅಂದ್ರೆ ಇದೆ' ಎಂದು ಬರೆದಿದ್ದಾರೆ.

Latest Videos
Follow Us:
Download App:
  • android
  • ios