Asianet Suvarna News Asianet Suvarna News

ಭಾರತದ ಡಿಜಿಟಲ್‌ ಭವಿಷ್ಯಕ್ಕೆ ಗೂಗಲ್‌ ಬದ್ಧ: Sundar Pichai

ಭಾರತದ ರಾಯಭಾರಿ ಕಚೇರಿಗೆ ಗೂಗಲ್‌ ಸಿಇಒ ಸುಂದರ್ ಪಿಚೈ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಈ ವೇಳೆ, ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. 

google committed to indias digital future says ceo sundar pichai ash
Author
First Published Sep 20, 2022, 2:54 PM IST

ಅಮೆರಿಕ ರಾಜಧಾನಿ ವಾಷಿಂಗ್ಟನ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಗೂಗಲ್‌ ಸಿಇಒ (Chief Executive Officer) ಸುಂದರ್ ಪಿಚೈ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಈ ವೇಳೆ, ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರ ಜತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಮೆರಿಕದಲ್ಲಿ ಗೂಗಲ್‌ನ ಚಟುವಟಿಕೆ, ಪ್ರಮುಖವಾಗಿ ಡಿಜಿಟಲೀಕರಣಕ್ಕೆ (Digitization) ನೀಡಿರುವ ಒತ್ತಿನ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ವಾಷಿಂಗ್ಟನ್‌ ಡಿಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಬೇಟಿ ನೀಡಿದ ಬಗ್ಗೆ ಸುಂದರ್ ಪಿಚೈ ಟ್ವೀಟ್‌ ಮಾಡಿದ್ದು, ರಾಯಭಾರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಭಾರತೀಯ ಮೂಲದ ಅಮೆರಿಕದ ಪ್ರಮುಖ ಟೆಕ್‌ (Tech) ಕಂಪನಿಯ ಸಿಇಒ ಒಬ್ಬರು ಇದೇ ಮೊದಲ ಬಾರಿಗೆ ವಾಷಿಂಗ್ಟನ್‌ನಲ್ಲಿರುವ ರಾಯಭಾರಿ ಕಚೇರಿಗೆ ಭೇಟಿ ನೀಡಿದ್ದಾರೆ. 
 
ಇನ್ನು, ಭಾರತಕ್ಕೆ ಗೂಗಲ್‌ನ ಬದ್ಧತೆಯ ಬಗ್ಗೆ ಚರ್ಚಿಸುವ ಅವಕಾಶ ಸಿಕ್ಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಹಾಗೂ, ಭಾರತದ ಡಿಜಿಟಲ್‌ ಭವಿಷ್ಯದ ಬಗ್ಗೆ ಎದುರು ನೋಡುವುದಾಗಿಯೂ ಸುಂದರ್ ಪಿಚೈ ಹೇಳಿಕೆ ನೀಡಿದ್ದಾರೆ. ಈ ವರ್ಷ ಜನವರಿಯಲ್ಲಿ ಪದ್ಮ ಭೂಷಣ (Padma Bhushan) ಪ್ರಶಸ್ತಿ ಪಡೆದ 17 ಪುರಸ್ಕೃತರಲ್ಲಿ ಸುಂದರ್‌ ಪಿಚೈ ಸಹ ಒಬ್ಬರಾಗಿದ್ದಾರೆ. ಇನ್ನೊಂದೆಡೆ, ‘’ಪರಿವರ್ತಿಸುವ ತಂತ್ರಜ್ಞಾನ; ಸಕ್ರಿಯಗೊಳಿಸುವ ಕಲ್ಪನೆಗಳು’’ ಎಂದು ರಾಯಭಾರಿ ತರಂಜಿತ್ ಸಿಂಗ್ ಸಂಧು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಗೂಗಲ್ ಹಾಗೂ ಆಲ್ಫಬೆಟ್‌ (Alphabet) ಸಿಇಒ ಸುಂದರ್‌ ಪಿಚೈ ಅವರನ್ನು ರಾಯಭಾರಿ ಕಚೇರಿಯಲ್ಲಿ ಸ್ವಾಗತಿಸಲು ಸಂತೋಷವಾಯಿತು ಎಂದೂ ಅವರು ಹೇಳಿದರು. ಅಲ್ಲದೆ, "ಗೂಗಲ್‌ನೊಂದಿಗೆ ಭಾರತ-ಯುಎಸ್ ವಾಣಿಜ್ಯ, ಜ್ಞಾನ ಮತ್ತು ತಾಂತ್ರಿಕ ಪಾಲುದಾರಿಕೆಯನ್ನು ವಿಸ್ತರಿಸುವ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ’’ ಎಂದೂ ಭಾರತೀಯ ರಾಯಭಾರಿ ಹೇಳಿದ್ದಾರೆ. 

ಇದನ್ನು ಓದಿ: ಭಾರತಕ್ಕೆ ಮತ್ತೆ ಕಾಲಿಟ್ಟ ಗೂಗಲ್‌ ಸ್ಟ್ರೀಟ್‌: ಬೆಂಗಳೂರಿನಲ್ಲಿ ಗೂಗಲ್‌ ಮ್ಯಾಪ್‌ ಬಳಸಿ ಟ್ರಾಫಿಕ್‌ ನಿರ್ವಹಣೆ

ಸುಂದರ್‌ ಪಿಚೈ ಸಿಇಒ ಆಗಿರುವ ಸಮಯದಲ್ಲಿ ಗೂಗಲ್ ಭಾರತದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದೆ ಹಾಗೂ ಯುವ ಸಮುದಾಯಕ್ಕೆ ತರಬೇತಿ ನೀಡುವುದು ಸೇರಿ ಹಲವಾರು ಕ್ಷೇತ್ರಗಳಲ್ಲಿ ಗೂಗಲ್‌ ತನ್ನ ಹೆಜ್ಜೆ ಗುರುತನ್ನು ತೀವ್ರವಾಗಿ ವಿಸ್ತರಿಸಿದೆ. ಭಾಋತದ ಡಿಜಿಟೀಕಲಕರಣಕ್ಕೆ 10 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡೋದಾಗಿ ಗೂಗಲ್‌ ಈಗಾಗಲೇ ಘೋಷಿಸಿದೆ. ಇನ್ನು, ರಿಲಯನ್ಸ್‌ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಜತೆಗೆ ಪಾಲುದಾರಿಕೆಯನ್ನೂ ಗೂಗಲ್‌ ಹೊಂದಿದೆ. ಅಲ್ಲದೆ, ಉದ್ಯೋಗಿಗಳ ಅಭಿವೃದ್ಧಿ ಮತ್ತು ಕೌಶಲ್ಯ ಅಭಿವೃದ್ಧಿ ವಿಚಾರವಾಗಿಯೂ ಪಾಲುದಾರಿಕೆ ಹೊಂದಿದೆ. ಹಾಗೆ, ಡಿಜಿಟಲ್‌ ಇಂಡಿಯಾ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಡಿಜಿಟಲ್ ಸಾಕ್ಷರತಾ ಮಿಷನ್‌ ವಿಚಾರವಾಗಿ ಅವರು ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ. 

ಇದನ್ನೂ ಓದಿ: Google London Office ಫೋಟೊಸ್‌ ಹಂಚಿಕೊಂಡ ಸಿಇಓ ಸುಂದರ್‌ ಪಿಚೈ: ಹೇಗಿರಲಿದೆ ನೋಡಿ ಹೊಸ ಕಚೇರಿ!
 
ಭಾರತದ ರಾಯಭಾರಿಯೊಂದಿಗಿನ ಸಭೆಯಲ್ಲಿ ಸುಂದರ್‌ ಪಿಚೈ ಅವರು ಭಾರತ ತೆಗೆದುಕೊಳ್ಳುತ್ತಿರುವ ಉಪಕ್ರಮಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಗೂಗಲ್‌ ಭಾರತವನ್ನು ಹೇಗೆ ಸಕಾರಾತ್ಮಕ ಚೌಕಟ್ಟಿನಲ್ಲಿ ನೋಡುತ್ತಿದೆ ಎಂಬುದನ್ನು ಸುಂದರ್‌ ಪಿಚೈ ಹೇಳಿದ್ದಾರೆ. ಹಾಗೂ. ರಾಯಭಾರಿ ಜ್ಞಾನ ಮತ್ತು ಶಿಕ್ಷಣ ಪಾಲುದಾರಿಕೆಯ ಬಗ್ಗೆ ರಾಯಭಾರಿ ಮಾತನಾಡಿದರು. ಇನ್ನು, ತಮ್ಮ ಸಂಭಾಷಣೆಯ ಸಮಯದಲ್ಲಿ, ಗೂಗಲ್ ಸಿಇಒ, ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಭಾರತದೊಂದಿಗೆ ಅದರ ಪಾಲುದಾರಿಕೆಯನ್ನು ಮುಂದುವರಿಸುವ ವಿವಿಧ ವಿಧಾನಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಡಿಜಿಟಲ್ ಪಾವತಿಗಳು ಮತ್ತು ಮೂಲಸೌಕರ್ಯ ಡಿಜಿಟಲೈಸೇಷನ್‌ ಸೇರಿದಂತೆ ಗೂಗಲ್ ಭಾರತದಲ್ಲಿ ತೊಡಗಿಸಿಕೊಂಡಿರುವ ಡಿಜಿಟಲೀಕರಣದ ಪ್ರಯತ್ನಗಳನ್ನು ಸುಂದರ್‌ ಪಿಚೈ ಚರ್ಚಿಸಿದರು.

Follow Us:
Download App:
  • android
  • ios