ದೈತ್ಯ ಸಂಹಾರ ಮಾಡಿ 2026ರ ಟಿ20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ ಅಮೆರಿಕನ್ನರು..!
ಅಮೆರಿಕ. ವಿಶ್ವಕ್ಕೆ ದೊಡ್ಡಣ್ಣ. ಆದರೆ ಕ್ರಿಕೆಟ್ನಲ್ಲಿ ಮಾತ್ರ ಚಿಕ್ಕಣ್ಣ. ಹೌದು, ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ಗೂ ಮುನ್ನ ಅಮೆರಿಕ, ಕ್ರಿಕೆಟ್ ಶಿಶು, ಡಮ್ಮಿ ಟೀಮ್. ದುರ್ಬಲ ತಂಡ ಎನಿಸಿಕೊಂಡಿತ್ತು. ಟೂರ್ನಿಗೆ ಆತಿಥ್ಯ ವಹಿಸಿರುವುದರಿಂದ ವರ್ಲ್ಡ್‌ಕಪ್ ಆಡಲು ಅರ್ಹತೆ ಪಡೆದುಕೊಂಡಿದೆ.
ನ್ಯೂಯಾರ್ಕ್: ಅಮೆರಿಕ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಿರುವುದರಿಂದ ಟೂರ್ನಿ ಆಡಲು ಅರ್ಹತೆ ಪಡೆದಿದೆ. ಇಲ್ಲದಿದ್ದರೆ ಅಮೆರಿಕಾಗೆ ವರ್ಲ್ಡ್‌ಕಪ್ ಆಡುವ ಅರ್ಹತೆಯೇ ಇಲ್ಲ ಅಂದವರೇ ಜಾಸ್ತಿ. ಆದ್ರೆ ಅಂತವರಿಗೆ ಅಮೆರಿಕನ್ನರು ಫೀಲ್ಡ್‌ನಲ್ಲಿ ಆನ್ಸರ್ ಕೊಟ್ಟಿದ್ದಾರೆ. ಸೂಪರ್-8ಗೆ ಎಂಟ್ರಿ ಮಾತ್ರ ಪಡೆದಿಲ್ಲ. ಮುಂದಿನ ಟಿ20 ವಿಶ್ವಕಪ್ ಆಡಲು ಅರ್ಹತೆ ಪಡೆದಿದೆ.
ಆಡಿದ ಮೊದಲ ವಿಶ್ವಕಪ್ನಲ್ಲೇ ಅಮೆರಿಕಾ ಸೂಪರ್-8ಗೆ ಎಂಟ್ರಿ..!
ಅಮೆರಿಕ. ವಿಶ್ವಕ್ಕೆ ದೊಡ್ಡಣ್ಣ. ಆದರೆ ಕ್ರಿಕೆಟ್ನಲ್ಲಿ ಮಾತ್ರ ಚಿಕ್ಕಣ್ಣ. ಹೌದು, ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ಗೂ ಮುನ್ನ ಅಮೆರಿಕ, ಕ್ರಿಕೆಟ್ ಶಿಶು, ಡಮ್ಮಿ ಟೀಮ್. ದುರ್ಬಲ ತಂಡ ಎನಿಸಿಕೊಂಡಿತ್ತು. ಟೂರ್ನಿಗೆ ಆತಿಥ್ಯ ವಹಿಸಿರುವುದರಿಂದ ವರ್ಲ್ಡ್‌ಕಪ್ ಆಡಲು ಅರ್ಹತೆ ಪಡೆದುಕೊಂಡಿದೆ. ಇಲ್ಲದಿದ್ದರೆ ಅಮೆರಿಕಗೆ ವಿಶ್ವಕಪ್‌ಗೆ ಅರ್ಹತೆ ಪಡೆಯುವ ತಾಕತ್ತು ಇಲ್ಲ ಎಂದವರೇ ಜಾಸ್ತಿ. ಆದ್ರೆ ಅವರಿಗೆಲ್ಲಾ ಅಮೆರಿಕನ್ನರು ಫೀಲ್ಡ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. ಅಮೆರಿಕ ಈಗ ಕ್ರಿಕೆಟ್ನಲ್ಲೂ ದೊಡ್ಡಣ್ಣನಾಗಲು ಹೊರಟಿದೆ.
T20 World Cup 2024: ಒಂದಲ್ಲ, ಎರಡಲ್ಲ ಬರೋಬ್ಬರಿ 3 ಬಲಿಷ್ಠ ತಂಡಗಳು ಗ್ರೂಪ್ ಹಂತದಲ್ಲೇ ಔಟ್...!
'ಎ' ಗ್ರೂಪ್ನಲ್ಲಿ ಸ್ಥಾನ ಪಡೆದಿರುವ ಅಮೆರಿಕ, 4 ಪಂದ್ಯದಲ್ಲಿ ಎರಡು ಗೆದ್ದು ಒಂದನ್ನ ಸೋತಿದೆ. ಒಂದು ರದ್ದಾಗಿದೆ. ಮಾಜಿ ಚಾಂಪಿಯನ್ ಪಾಕಿಸ್ತಾನ ಮತ್ತು ಕೆನಡಾ ತಂಡಗಳನ್ನ ಸೋಲಿಸಿದೆ. ಇನ್ನು ಟೀಂ ಇಂಡಿಯಾ ವಿರುದ್ಧ ಸೋತರೂ ಅದು ವಿರೋಚಿತ ಸೋಲು. ಮೂರು ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ನೀಡಿದೆ. ಹಾಗಾಗಿಯೇ ಈಗ ಕ್ರಿಕೆಟ್ನಲ್ಲಿ ಚಿಕ್ಕಣ್ಣ ಅಲ್ಲ, ದೊಡ್ಡಣ್ಣ ಅಂತ ನಾವ್ ಹೇಳಿದ್ದು.
ಭಾರತದಲ್ಲಿ ನಡೆಯಲಿದೆ 2026ರ ಟಿ20 ವಿಶ್ವಕಪ್
ಸೂಪರ್-8ಗೆ ಅಮೆರಿಕ ಎಂಟ್ರಿ ಪಡೆಯುತ್ತಿದಂತೆ 2026ರ ಟಿ20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಿತು. ಹೌದು, ಈ ವರ್ಲ್ಡ್‌ಕಪ್‌ನಲ್ಲಿ ಸೂಪರ್-8ರಲ್ಲಿ ಆಡುವ ಎಲ್ಲಾ ತಂಡಗಳು ಮುಂದಿನ ಟಿ20 ವಿಶ್ವಕಪ್ ಆಡಲು ನೇರ ಅರ್ಹತೆ ಪಡೆದಿವೆ. ಅದರಲ್ಲಿ ಅಮೆರಿಕವೂ ಒಂದು. ಈ ಸಲ ಆತಿಥೇಯ ತಂಡ ಅನ್ನೋ ಕಾರಣಕ್ಕೆ ಅರ್ಹತೆ ಸಿಕ್ಕಿತ್ತು. ಆದ್ರೆ ಸಿಕ್ಕ ಮೊದಲ ಅವಕಾಶವನ್ನೇ ಎರಡು ಕೈಗಳಿಂದ ಬಾಚಿಕೊಂಡ ಅಮೆರಿಕ, ಅದ್ಭುತ ಪ್ರದರ್ಶನ ನೀಡಿ, ಮುಂದಿನ ವರ್ಲ್ಡ್‌ಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಕಳಪೆ ಆಟವಾಡಿ ಟಿ20 ವಿಶ್ವಕಪ್‌ನಿಂದ ಔಟ್: ಪಾಕ್ ಆಟಗಾರರ ಸಂಬಳ ಕಟ್?
2026ರಲ್ಲಿ ಭಾರತ-ಶ್ರೀಲಂಕಾ ರಾಷ್ಟ್ರಗಳು ಜಂಟಿಯಾಗಿ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಲಿವೆ. ಒಟ್ಟು 20 ತಂಡಗಳು ಈ ವರ್ಲ್ಡ್‌ಕಪ್‌ನಲ್ಲಿ ಆಡಲಿವೆ. ಅದರಲ್ಲಿ 12 ಟೀಮ್ಸ್ ನೇರ ಅರ್ಹತೆ ಪಡೆದ್ರೆ, ಉಳಿದ 8 ಟೀಮ್ಸ್ ಅರ್ಹತಾ ಸುತ್ತಿನ ಟೂರ್ನಿ ಆಡಿ, ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಬೇಕಿದೆ. ಈ ಸಲ ಸೂಪರ್-8ರಿಂದ ಅರ್ಹತೆ ಪಡೆಯಲು ವಿಫಲವಾಗಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್, ಶ್ರೇಯಂಕದಲ್ಲಿ ಟಾಪ್-10ನಲ್ಲಿರುವುದರಿಂದ ನೇರ ಅರ್ಹತೆ ಗಿಟ್ಟಿಸಲಿವೆ. ಲಂಕಾ ಆತಿಥ್ಯ ರಾಷ್ಟ್ರವಾಗಿದ್ದು, ಅದಕ್ಕೂ ನೇರ ಅರ್ಹತೆ ಸಿಗಲಿದೆ.
ಲಗಾನ್ ಟೀಮ್ ಕಟ್ಟಿಕೊಂಡು ಮಹಾಯುದ್ಧಕ್ಕಿಳಿದಿರುವ ಅಮೆರಿಕ
ಅಮೆರಿಕಾ ಟೀಮ್‌ನೊಮ್ಮೆ ನೋಡಿದ್ರೆ ನಿಮಗೆ ಸ್ಥಳೀಯ ಆಟಗಾರರು ಸಿಗೋದು ಮೂರ್ನಾಲ್ಕು ಮಂದಿ ಮಾತ್ರ, ಉಳಿದವರೆಲ್ಲಾ ಬೇರೆ ದೇಶದವರು. ಹೌದು, ಉದ್ಯೋಗಕ್ಕೆಂದು ಅಮೆರಿಕಗೆ ಹೋಗಿರುವ ಮಂದಿ, ಅಲ್ಲಿನ ಪೌರತ್ವ ಪಡೆದು, ಅಮೆರಿಕ ಪರ ಕ್ರಿಕೆಟ್ ಆಡುತ್ತಿದ್ದಾರೆ. ರಾತ್ರಿ ವೇಳೆ ಕೆಲಸ. ಬೆಳಗಿನ ವೇಳೆ ಕ್ರಿಕೆಟ್. ಅಮೆರಿಕ ತಂಡದಲ್ಲಿರುವವರ್ಯಾರು ವೃತ್ತಿಪರ ಕ್ರಿಕೆಟರ್ ಅಲ್ಲವೇ ಅಲ್ಲ. ಇದೊಂದು ರೀತಿ ಲಗಾನ್ ಟೀಮ್ ಅಂದ್ರೆ ತಪ್ಪಲ್ಲ. ಅಮೆರಿಕ ಟೀಮ್ನಲ್ಲಿ ಭಾರತದವರೇ ಆರು ಮಂದಿ ಇದ್ದಾರೆ. ಭಾರತೀಯನೇ ನಾಯಕ. ಒಟ್ನಲ್ಲಿ ಕ್ರಿಕೆಟ್ನಲ್ಲಿ ಚಿಕ್ಕಣ್ಣ ಎನಿಸಿಕೊಂಡಿದ್ದ ಅಮೆರಿಕ, ಈಗ ದೊಡ್ಡಣ್ಣನಾಗುವತ್ತ ಹೆಜ್ಜೆ ಇಟ್ಟಿದೆ. ಭವಿಷ್ಯದಲ್ಲಿ ಅಮೆರಿಕ ಡೇಂಜರಸ್ ಟೀಮ್‌ಗಳ ಲಿಸ್ಟ್‌ಗೆ ಸೇರುವ ದಿನಗಳು ಹತ್ತಿರದಲ್ಲೇ ಇವೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್