ಭಾರತ ಕ್ರಿಕೆಟ್‌ ತಂಡದಲ್ಲಿ 'ಗಂಭೀರ' ಭಿನ್ನಮತ?: ಹದಗೆಟ್ಟ ಡ್ರೆಸ್ಸಿಂಗ್ ರೂಂ ವಾತಾವರಣ

ನ್ಯೂಜಿಲೆಂಡ್‌ ವಿರುದ್ಧದ ಸೋಲು ಮತ್ತು ಆಸ್ಟ್ರೇಲಿಯಾ ವಿರುದ್ಧದ ಕಳಪೆ ಪ್ರದರ್ಶನದ ಬಳಿಕ ಟೀಂ ಇಂಡಿಯಾದಲ್ಲಿ ಭಿನ್ನಮತ ಉಂಟಾಗಿದೆ ಎಂದು ವರದಿಯಾಗಿದೆ. ಕೊಹ್ಲಿ, ರೋಹಿತ್ ಮತ್ತು ಕೋಚ್ ಗಂಭೀರ್ ನಡುವೆ ಮನಸ್ತಾಪ ಉಂಟಾಗಿದ್ದು, ತಂಡದಲ್ಲಿನ ವಾತಾವರಣ ಹದಗೆಟ್ಟಿದೆ ಎನ್ನಲಾಗಿದೆ.

Gautam Gambhir Stresses Dressing Room Unity Amid Media reports of Team Disintegration kvn

ಸಿಡ್ನಿ: ನ್ಯೂಜಿಲೆಂಡ್‌ ವಿರುದ್ಧ ಕ್ಲೀನ್‌ಸ್ವೀಪ್‌ ಮುಖಭಂಗ, ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್‌ ಸರಣಿಯ ಕಳಪೆ ಪ್ರದರ್ಶನದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಭಿನ್ನಮತ ತಲೆದೋರಿದೆ ಎಂದು ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗಿದೆ. ತಂಡದ ಡ್ರೆಸ್ಸಿಂಗ್‌ ರೂಮ್‌ನಲ್ಲಿ ವಾತಾವರಣ ಹದಗೆಟ್ಟಿದ್ದು, ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ಕೋಚ್‌ ಗೌತಮ್‌ ಗಂಭೀರ್‌ ನಡುವೆ ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ರವಿ ಶಾಸ್ತ್ರಿ, ರಾಹುಲ್‌ ದ್ರಾವಿಡ್‌ ಕೋಚ್‌ ಆಗಿದ್ದಾಗ ತಂಡದಲ್ಲಿ ಉತ್ತಮ ವಾತಾವರಣ ಇತ್ತು. ಆದರೆ ಗಂಭೀರ್‌ ಕೋಚ್‌ ಹುದ್ದೆ ಅಲಂಕರಿಸಿದ ಬಳಿಕ ಆಟಗಾರರ ನಡುವೆ ಸಮನ್ವಯತೆ ಕಂಡುಬರುತ್ತಿಲ್ಲ. ಈ ಬಗ್ಗೆ ಪ್ರಮುಖ ಮಾಧ್ಯಮಗಳ ವರದಿಗಳು ತಿಳಿಸುವಂತೆ, ರೋಹಿತ್‌ ಶರ್ಮಾ ಈ ಹಿಂದಿನಂತೆ ಆಟಗಾರರ ಜೊತೆ ಸರಿಯಾಗಿ ಚರ್ಚೆ ನಡೆಸುತ್ತಿಲ್ಲ. ಗಂಭೀರ್‌ ಕೋಚ್‌ ಹುದ್ದೆ ಅಲಂಕರಿಸಿದ ಬಳಿಕ ರೋಹಿತ್‌ ತಮ್ಮ ನಾಯಕತ್ವದಲ್ಲಿ ನಿರ್ಲಕ್ಷ್ಯ ಹೊಂದಿದ್ದಾರೆ. ಯಾರನ್ನಾದರೂ ತಂಡದಿಂದ ಕೈ ಬಿಡಬೇಕಿದ್ದರೆ, ಅದರ ಹಿಂದಿರುವ ಕಾರಣವನ್ನೂ ಆಟಗಾರರಿಗೆ ಸರಿಯಾಗಿ ತಿಳಿಸುತ್ತಿಲ್ಲ ಎನ್ನಲಾಗುತ್ತಿದೆ. ಆಟಗಾರರ ಆಯ್ಕೆ ವಿಚಾರದಲ್ಲೂ ರೋಹಿತ್‌ ಶರ್ಮಾ ಹಾಗೂ ಕೋಚ್‌ ಗಂಭೀರ್‌ ನಡುವೆ ಸಹಮತ ಮೂಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.

ಜಸ್ಪ್ರೀತ್‌ ಬುಮ್ರಾಗೆ ಕಾನೂನು ಜಾರಿ ಮಾಡ್ತೇವೆ: ಅಚ್ಚರಿ ಹೇಳಿಕೆ ಕೊಟ್ಟ ಆಸೀಸ್ ಪ್ರಧಾನಿ

ಇದೇ ಕಾರಣಕ್ಕೆ ಆಟಗಾರರಲ್ಲಿ ಅಭದ್ರತೆ ಉಂಟಾಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ನಿತೀಶ್‌ ರೆಡ್ಡಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ರೀತಿ ಆಡಿದರೂ, ಶುಭ್‌ಮನ್‌ ಗಿಲ್‌ರನ್ನು ಸರಿಯಾಗಿ ಬಳಸಿಕೊಳ್ಳಲು ತಂಡ ವಿಫಲವಾಗಿದೆ. ಹರ್ಷಿತ್‌ ರಾಣಾ, ವಾಷಿಂಗ್ಟನ್‌ ಸುಂದರ್‌ ಆಯ್ಕೆಯಲ್ಲೂ ಗೊಂದಲ ಉಂಟಾಗಿದೆ. ಹೀಗಾಗಿಯೇ ತಂಡ ಎಲ್ಲಾ ಪಂದ್ಯಗಳಲ್ಲೂ ಬದಲಾವಣೆಯೊಂದಿಗೆ ಆಡಿದೆ ಎಂದು ವರದಿಯಾಗಿದೆ.

ಗೇಮ್‌ ಪ್ಲ್ಯಾನ್‌ ಪ್ರಕಾರ ಆಡುತ್ತಿಲ್ಲ!

ಆಟಗಾರರ ನಡುವೆ ಭಿನ್ನಮತ ತಲೆದೋರಲು ಪ್ರಮುಖ ಕಾರಣ ಗೇಮ್‌ ಪ್ಲ್ಯಾನ್‌. ತಂಡದ ಆಡಳಿತ ಹೆಚ್ಚಾಗಿ ಆಟಗಾರರಿಗೆ ಅವರದೇ ಆಯ್ಕೆಯ ಶೈಲಿಯಲ್ಲಿ, ಮುಕ್ತವಾಗಿ ಆಟವಾಡುವ ಸ್ವಾತಂತ್ರ್ಯ ನೀಡುತ್ತದೆ. ಕೆಲ ಸಂದರ್ಭಗಳಲ್ಲಿ ತಂಡ ಹಾಕಿಕೊಂಡ ಗೇಮ್‌ ಪ್ಲ್ಯಾನ್‌ ಪ್ರಕಾರ ಆಡಬೇಕಾಗುತ್ತದೆ. ಆದರೆ ಬಹುತೇಕ ಆಟಗಾರರು ಇದನ್ನು ಕಡೆಗಣಿಸುತ್ತಿದ್ದು, ತಮ್ಮಿಚ್ಛೆಯಂತೆ ಆಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಮೆಲ್ಬರ್ನ್‌ ಟೆಸ್ಟ್‌ ಬಳಿಕ ಆಟಗಾರರ ವಿರುದ್ಧ ಕಿಡಿಕಾರಿರುವ ಗಂಭೀರ್‌, ‘ಸಾಕು, ಇದನ್ನು ಇಲ್ಲಿಗೆ ನಿಲ್ಲಿಸಿ. ಮುಕ್ತವಾಗಿ ಆಡಲು ನಿಮಗೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಸಮಯ ಮುಗಿದಿದೆ. ಇನ್ನು ತಂಡದ ಯೋಜನೆ ಪ್ರಕಾರ ಆಡಬೇಕು. ಅಲ್ಲದಿದ್ದರೆ ತಂಡದಿಂದ ಹೊರಹೋಗುವ ದಾರಿ ತೋರಿಸಲಾಗುತ್ತದೆ’ ಎಂದಿದ್ದಾರೆ ಎಂದು ವರದಿಯಾಗಿದೆ.

ಆಸ್ಪತ್ರೆಯಲ್ಲೇ ಲೇಡಿ ಸಿಬ್ಬಂದಿ ಜತೆ ವಿನೋದ್ ಕಾಂಬ್ಳಿ ಬಿಂದಾಸ್ ಡ್ಯಾನ್ಸ್! ವಿಡಿಯೋ ವೈರಲ್

ಆಸೀಸ್‌ ಸರಣಿಗೆ ಪೂಜಾರ ಬೇಕು ಎಂದಿದ್ದ ಗಂಭೀರ್‌!

ಆಸ್ಟ್ರೇಲಿಯ ಸರಣಿಗೆ ಅನುಭವತಿ ಚೇತೇಶ್ವರ ಪೂಜಾರ ಅವರನ್ನು ಆಯ್ಕೆ ಮಾಡುವಂತೆ ಗಂಭೀರ್ ಹಲವು ಬಾರಿ ಮನವಿ ಮಾಡಿದ್ದರು ಆದರೆ ಈ ಮನವಿಯನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಿರ್ಲಕ್ಷಿಸಿತ್ತು ಎಂದು ವರದಿಯಾಗಿದೆ. ಭಾರತ ಪರ್ತ್ ಟೆಸ್ಟ್ ಗೆದ್ದ ನಂತರವೂ ಪೂಜಾರರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಗಂಭೀರ್‌ ಕೇಳುತ್ತಿದ್ದರು ಎನ್ನಲಾಗಿದೆ. ಪೂಜಾರ ಆಸ್ಟ್ರೇಲಿಯಾದಲ್ಲಿ ಭಾರತದ ಈ ಹಿಂದಿನ ಎರಡು ಸರಣಿ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Latest Videos
Follow Us:
Download App:
  • android
  • ios