ಕಿವೀಸ್ ಸರಣಿ 0-3 ವೈಟ್‌ವಾಶ್ ಬಗ್ಗೆ 6 ಗಂಟೆ ಪೋಸ್ಟ್‌ಮಾರ್ಟಂ!
ತವರಿನಲ್ಲೇ ನ್ಯೂಜಿಲೆಂಡ್ ಎದುರು ಹೀನಾಯ ಸೋಲು ಅನುಭವಿಸಿರುವುದಕ್ಕೆ ರೋಹಿತ್ ಶರ್ಮಾ ಹಾಗೂ ಗೌತಮ್ ಗಂಭೀರ್ ಅವರಿಗೆ ಬಿಸಿಸಿಐ ಕ್ಲಾಸ್ ತೆಗೆದುಕೊಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 0-3 ಅಂತರದಲ್ಲಿ ವೈಟ್‌ವಾಶ್ ಮುಖಭಂಗಕ್ಕೆ ಒಳಗಾದ ಬಗ್ಗೆ ಶುಕ್ರವಾರ ಬಿಸಿಸಿಐ 6 ಗಂಟೆಗಳ ‘ಪೋಸ್ಟ್‌ಮಾರ್ಟಂ’ ನಡೆಸಿದೆ.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ನಾಯಕ ರೋಹಿತ್ ಶರ್ಮಾ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಭಾರತದ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ನಡೆಸಿದರು. ಕೋಚ್ ಗೌತಮ್ ಗಂಭೀರ್ ಆನ್‌ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.
ಸಂಜು ಸ್ಯಾಮ್ಸನ್ ಭರ್ಜರಿ ಶತಕ: ಡರ್ಬನ್‌ನಲ್ಲಿ ಟೀಂ ಇಂಡಿಯಾ ದರ್ಬಾರ್
ಮುಂಬೈ ಟೆಸ್ಟ್‌ಗೆ ರ್‍ಯಾಂಕ್ ಟರ್ನರ್ ಪಿಚ್ ಆಯ್ಕೆ, ವೇಗಿ ಬುಮ್ರಾಗೆ ವಿಶ್ರಾಂತಿ ಹಾಗೂ ಗಂಭೀರ್ ಕೋಚಿಂಗ್ ಶೈಲಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ. ತಂಡದ ಬ್ಯಾಟರ್‌ಗಳು ಸ್ಪಿನ್ನರ್‌ಗಳ ವಿರುದ್ಧ ಅಸ್ಥಿರ ಆಟವಾಡುತ್ತಿರುವ ಹೊರತಾಗಿಯೂ, ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್ ಆಯ್ಕೆ ಮಾಡಿದ್ದು ಯಾಕೆ ಎಂದು ನಾಯಕ ಹಾಗೂ ಕೋಚ್‌ಗೆ ಬಿಸಿಸಿಐ ಪ್ರಶ್ನಿಸಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ತಂಡದ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದರ ಬಗ್ಗೆ ರೋಹಿತ್, ಗಂಭೀರ್, ಅಗರ್ಕರ್ ಜೊತೆ ಬಿಸಿಸಿಐ ಸಲಹೆಗಳನ್ನೂ ಕೇಳಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ರಾಹುಲ್ ಮತ್ತೆ ಫೇಲ್: ಸೋಲಿನತ್ತ ಭಾರತ ಎ
ಮೆಲ್ಬರ್ನ್: ಕೆ.ಎಲ್.ರಾಹುಲ್ ಸೇರಿದಂತೆ ಭಾರತದ ತಾರಾ ಬ್ಯಾಟರ್‌ಗಳು ಮತ್ತೆ ವೈಫಲ್ಯ ಅನುಭವಿಸಿದ್ದು, ಆಸ್ಟ್ರೇಲಿಯಾ ‘ಎ’ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಹೀನಾಯ ಸೋಲಿನತ್ತ ಮುಖಮಾಡಿದೆ.
ಭಾರತದ 161 ರನ್‌ಗೆ ಉತ್ತರವಾಗಿ ಆಸೀಸ್ ‘ಎ’ ತಂಡ ಶುಕ್ರವಾರ 223 ರನ್‌ಗೆ ಆಲೌಟಾಯಿತು. ಮೊದಲ ದಿನ 2 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದ್ದ ತಂಡ 2ನೇ ದಿನ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಮಾರ್ಕಸ್ ಹ್ಯಾರಿಸ್ 74, ಜಿಮ್ಮಿ ಪೀರ್ಸನ್ 30, ಕೋರೆ ರೊಚ್ಚಿಕ್ಕೊಳಿ 35 ರನ್ ಸಿಡಿಸಿದರು. ಉತ್ತಮ ದಾಳಿ ಸಂಘಟಿಸಿದ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಕಿತ್ತರೆ, ಮುಕೇಶ್ ಕುಮಾರ್ 3, ಖಲೀಲ್ ಅಹ್ಮದ್ 2 ವಿಕೆಟ್ ಪಡೆದರು.
ಐಪಿಎಲ್ ಮೆಗಾ ಹರಾಜಿನಲ್ಲಿ ಈ ಮೂರು ವೇಗಿಗಳ ಮೇಲೆ ಹಣದ ಸುರಿಮಳೆ? ಸ್ಟಾರ್ಕ್ ರೆಕಾರ್ಡ್ ಕೂಡಾ ಬ್ರೇಕ್?
62 ರನ್ ಹಿನ್ನಡೆ ಅನುಭವಿಸಿದ ಭಾರತ, 2ನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ತಂಡ 2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 73 ರನ್ ಗಳಿಸಿದ್ದು, ಕೇವಲ 11 ರನ್ ಮುನ್ನಡೆ ಪಡೆದಿದೆ. ಅಭಿಮನ್ಯು ಈಶ್ವರನ್ 17ಕ್ಕೆ ಔಟಾದರೆ, ರಾಹುಲ್ 44 ಎಸೆತಗಳನ್ನೆದುರಿಸಿ 10 ರನ್ ಗಳಿಸಿದ್ದಾಗ ದುರದೃಷ್ಟಕರ ರೀತಿಯಲ್ಲಿ ಕ್ಲೀನ್ ಬೌಲ್ಡ್ ಆದರು. ಸಾಯಿ ಸುದರ್ಶನ್(03), ಋತುರಾಜ್ ಗಾಯಕ್ವಾಡ್(11), ದೇವದತ್ ಪಡಿಕ್ಕಲ್(01) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಧ್ರುವ್ ಜುರೆಲ್ 19, ನಿತೀಶ್ ರೆಡ್ಡಿ 9 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.