ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಸಂಜು ಸ್ಯಾಮ್ಸನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಡರ್ಬನ್: ಸಂಜು ಸ್ಯಾಮ್ಸನ್ ದರ್ಬಾರ್‌ಗೆ ಸಾಕ್ಷಿಯಾದ ಡರ್ಬನ್‌ ಕ್ರೀಡಾಂಗಣದಲ್ಲಿ ವಿಶ್ವ ಚಾಂಪಿಯನ್‌ ಭಾರತಕ್ಕೆ ಅಮೋಘ ಗೆಲುವು ಒಲಿದಿದೆ. ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 00 ರನ್‌ ಬೃಹತ್‌ ಗೆಲುವು ದಾಖಲಿಸಿತು. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಕಲೆಹಾಕಿದ್ದು 8 ವಿಕೆಟ್‌ಗೆ 202 ರನ್‌. ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಸ್ಯಾಮ್ಸನ್‌ ಸತತ 2 ಟಿ20 ಪಂದ್ಯಗಳಲ್ಲಿ ಶತಕ ಸಿಡಿಸಿದ ಭಾರತ ಮೊದಲ ಬ್ಯಾಟರ್‌ ಎಂಬ ದಾಖಲೆ ಬರೆದರು. ಅಭಿಷೇಕ್‌ ಜೊತೆ ಇನ್ನಿಂಗ್ಸ್‌ ಆರಂಭಿಸಿದ ಸಂಜು ಕೇವಲ 47 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 10 ಸಿಕ್ಸರ್‌ಗಳಿದ್ದವು. ಅವರು 50 ಎಸೆತಗಳಲ್ಲಿ 107 ರನ್‌ ಸಿಡಿಸಿದರು. ತಿಲಕ್‌ ವರ್ಮಾ 18 ಎಸೆತಕ್ಕೆ 33 ರನ್‌ ಬಾರಿಸಿ ತಂಡವನ್ನು 200ರ ಗಡಿ ದಾಟಿಸಿದರು. 14 ಓವರಲ್ಲಿ 162 ರನ್‌ ಗಳಿಸಿದ್ದ ಭಾರತ ಕೊನೆ 6 ಓವರ್‌ನಲ್ಲಿ ಕೇವಲ 40 ರನ್‌ ಸೇರಿಸಿತು.

ಗುಡ್ ನ್ಯೂಸ್ ನೀಡಿದ ಕೆಎಲ್ ರಾಹುಲ್-ಅಥಿಯಾ, ಹೊಸ ವರ್ಷಕ್ಕೆ ಮೊದಲ ಮಗುವಿನ ನಿರೀಕ್ಷೆ!

ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ 17.5 ಓವರ್‌ಗಳಲ್ಲಿ 141 ರನ್‌ಗೆ ಆಲೌಟಾಯಿತು. ಮೊದಲ ಓವರ್‌ನಲ್ಲೇ ಮಾರ್ಕ್‌ರಮ್‌ ವಿಕೆಟ್‌ ಕಳೆದುಕೊಂಡ ತಂಡ ಬಳಿಕ ಕುಸಿಯುತ್ತಲೇ ಹೋಯಿತು. ಕ್ಲಾಸೆನ್‌ 25, ರಿಕೆಲ್ಟನ್‌ 21, ಡೇವಿಡ್‌ ಮಿಲ್ಲರ್‌ 18 ರನ್‌ ಗಳಿಸಿದ್ದು ತಂಡಕ್ಕೆ ಏನೇನೂ ಸಾಲಲಿಲ್ಲ. ಕೊನೆಯಲ್ಲಿ ಗೆರಾಲ್ಡ್‌ ಕೋಟ್ಜೀ 23 ರನ್‌ ಬಾರಿಸಿ ಸೋಲಿನ ಅಂತರ ತಗ್ಗಿಸಿದರು.

ಸ್ಕೋರ್‌: ಭಾರತ 20 ಓವರಲ್ಲಿ 202/8 (ಸಂಜು 107, ತಿಲಕ್‌ 33, ಕೋಟ್ಜೀ 3-37), ದ.ಆಫ್ರಿಕಾ 17.5 ಓವರ್‌ಗಳಲ್ಲಿ 141/10 (ಕ್ಲಾಸೆನ್‌ 25, ವರುಣ್‌ 3-25, ರವಿ ಬಿಷ್ಣೋಯ್‌ 3-28)

01ನೇ ಬ್ಯಾಟರ್‌: ಟಿ20ಯಲ್ಲಿ 2 ಶತಕ ಬಾರಿಸಿದ ವಿಶ್ವದ ಮೊದಲ ವಿಕೆಟ್‌ ಕೀಪರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌.

04ನೇ ಬ್ಯಾಟರ್‌: ಸತತ 2 ಅಂ.ರಾ. ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ 4ನೇ ಬ್ಯಾಟರ್‌ ಸಂಜು. ಫ್ರಾನ್ಸ್‌ನ ಗುಸ್ಟವ್‌ ಮೆಕೋನ್‌, ದ.ಆಫ್ರಿಕಾದ ರಿಲೀ ರೋಸೌ, ಇಂಗ್ಲೆಂಡ್‌ನ ಫಿಲ್‌ ಸಾಲ್ಟ್‌ ಇತರ ಸಾಧಕರು.

ಐಪಿಎಲ್ ಮೆಗಾ ಹರಾಜು: ಇಂಗ್ಲೆಂಡ್‌ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟ ಫ್ರಾಂಚೈಸಿಗಳು!

10 ಸಿಕ್ಸರ್‌: ಸಂಜು ಬಾರಿಸಿದ 10 ಸಿಕ್ಸರ್‌ ಬಾರಿಸಿದರು. ಇದು ಅಂ.ರಾ. ಟಿ20 ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳ ಪೈಕಿ ಜಂಟಿ ಗರಿಷ್ಠ. 2017ರಲ್ಲಿ ರೋಹಿತ್‌ ಶ್ರೀಲಂಕಾ ವಿರುದ್ಧ 10 ಸಿಕ್ಸರ್‌ ಬಾರಿಸಿದ್ದರು.

20 ಸೆಂಚುರಿ: ಭಾರತ ದಾಖಲೆ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 20 ವೈಯಕ್ತಿಕ ಶತಕಗಳನ್ನು ಬಾರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಶುಕ್ರವಾರ ಸಂಜು ಗಳಿಸಿದ ಶತಕ ಭಾರತ ಪರ ದಾಖಲಾದ 20ನೇ ಶತಕ. ರೋಹಿತ್‌ ಶರ್ಮಾ 5, ಸೂರ್ಯಕುಮಾರ್‌ 4, ಸಂಜು ಹಾಗೂ ಕೆ.ಎಲ್‌.ರಾಹುಲ್‌ ತಲಾ 2, ಅಭಿಷೇಕ್‌ ಶರ್ಮಾ, ದೀಪಕ್‌ ಹೂಡಾ, ಋತುರಾಜ್‌, ವಿರಾಟ್‌ ಕೊಹ್ಲಿ, ಶುಭ್‌ಮನ್‌ ಗಿಲ್‌, ಜೈಸ್ವಾಲ್‌, ಸುರೇಶ್‌ ರೈನಾ ತಲಾ 1 ಶತಕ ಬಾರಿಸಿದ್ದಾರೆ. ಇನ್ನು, ಗರಿಷ್ಠ ಶತಕ ಬಾರಿಸಿದ ತಂಡಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ 2, ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. ಕಿವೀಸ್‌ ಪರ 12, ಆಸೀಸ್‌ ಪರ 11 ಶತಕ ದಾಖಲಾಗಿವೆ.