ಐಪಿಎಲ್ ಮೆಗಾ ಹರಾಜಿನಲ್ಲಿ ಈ ಮೂರು ವೇಗಿಗಳ ಮೇಲೆ ಹಣದ ಸುರಿಮಳೆ? ಸ್ಟಾರ್ಕ್ ರೆಕಾರ್ಡ್ ಕೂಡಾ ಬ್ರೇಕ್?

ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಈ ಮೂವರು ವೇಗಿಗಳು ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Kagiso Rabada to Mitchell Starc IPL 2025 highest bid on these 3 fast bowlers in Mega Auction Starc record likely to be broken kvn

ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಮುಂಬರುವ ನವೆಂಬರ್‌ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ವಿಶ್ವದರ್ಜೆಯ ವೇಗದ ಬೌಲರ್‌ಗಳನ್ನು ಖರೀದಿಸಲು ಪೈಪೋಟಿ ನಡೆಸುವ ಸಾಧ್ಯತೆಯಿದೆ. 

ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿಯೂ ವೇಗದ ಬೌಲರ್‌ಗಳು ಕೋಟಿ ಕೋಟಿ ಹಣವನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ ವೇಗಿ ಪ್ಯಾಟ್ ಕಮಿನ್ಸ್‌ ಬರೋಬ್ಬರಿ 20.50 ಕೋಟಿ ರುಪಾಯಿ ತನ್ನದಾಗಿಸಿಕೊಂಡಿದ್ದರು. ಇನ್ನು ಕಳೆದ ಹರಾಜಿನಲ್ಲಿಯೇ ಕೆಕೆಆರ್ ಫ್ರಾಂಚೈಸಿಯು ಆಸೀಸ್ ಮೂಲದ ಮತ್ತೋರ್ವ ಮಾರಕ ವೇಗಿ ಮಿಚೆಲ್ ಸ್ಟಾರ್ಕ್‌ಗೆ 24.75 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿತ್ತು.

ಐಪಿಎಲ್ ಮೆಗಾ ಹರಾಜು: ಇಂಗ್ಲೆಂಡ್‌ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟ ಫ್ರಾಂಚೈಸಿಗಳು!

ಈ ಬಾರಿ ಎಲ್ಲಾ ತಂಡಗಳು ಮತ್ತೊಮ್ಮೆ ವಿಶ್ವದರ್ಜೆಯ ವೇಗದ ಬೌಲರ್‌ಗಳನ್ನು ಎದುರು ನೋಡುತ್ತಿವೆ. ಅದರಲ್ಲೂ ಮುಖ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳು ಮಾರಕ ವೇಗಿಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಎದುರು ನೋಡುತ್ತಿವೆ. ಬನ್ನಿ ನಾವಿಂದು ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ರುಪಾಯಿ ಕೊಳ್ಳೆಹೊಡೆಯಲು ಸಜ್ಜಾಗಿರುವ ಟಾಪ್ 3 ವೇಗದ ಬೌಲರ್‌ಗಳು ಯಾರು ಎನ್ನುವುದನ್ನು ನೋಡೋಣ.

1. ಕಗಿಸೋ ರಬಾಡ: 

ದಕ್ಷಿಣ ಆಫ್ರಿಕಾ ಮೂಲದ ಮಾರಕ ವೇಗಿ ಕಗಿಸೋ ರಬಾಡ ಅವರನ್ನು ಪಂಜಾಬ್ ಫ್ರಾಂಚೈಸಿ ಈಗಾಗಲೇ ತಂಡದಿಂದ ರಿಲೀಸ್ ಮಾಡಿದೆ. ಕಗಿಸೋ ರಬಾಡ ಇದುವರೆಗೂ 80 ಪಂದ್ಯಗಳನ್ನಾಡಿ 117 ವಿಕೆಟ್ ಕಬಳಿಸಿದ್ದಾರೆ. ಪ್ರತಿಗಂಟೆಗೆ ನಿರಂತವಾಗಿ 145+ ಕಿಲೋಮೀಟರ್ ವೇಗದಲ್ಲಿ ಕರಾರುವಕ್ಕಾದ ದಾಳಿ ನಡೆಸುವ ಕ್ಷಮತೆ ರಬಾಡ ಅವರಿಗಿದೆ. ಪವರ್‌ ಪ್ಲೇ ಹಾಗೂ ಡೆತ್ ಓವರ್‌ನಲ್ಲೂ 

2. ಆರ್ಶದೀಪ್ ಸಿಂಗ್:

ಟೀಂ ಇಂಡಿಯಾ ಎಡಗೈ ವೇಗದ ಬೌಲರ್ ಆರ್ಶದೀಪ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಅಚ್ಚರಿಯ ರೀತಿಯಲ್ಲಿ ರಿಲೀಸ್ ಮಾಡಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಆರ್ಶದೀಪ್ ಸಿಂಗ್ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು. ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಗರಿಷ್ಟ ವಿಕೆಟ್ ಕಬಳಿಸಿದ ಸಾಧನೆಯನ್ನು ಮಾಡಿದ್ದರು. ಐಪಿಎಲ್‌ನಲ್ಲಿ ಎಡಗೈ ವೇಗಿಗಳಿಗೆ ಅಪಾರವಾದ ಬೇಡಿಕೆ ಇರುವ ವಿಚಾರ ಗುಟ್ಟಾಗಿಯೇನೂ ಉಳಿದಿಲ್ಲ. ಗಂಟೆಗೆ 145+ ಕಿಲೋಮೀಟರ್ ವೇಗದದಲ್ಲಿ ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ನಲ್ಲಿ ದಾಳಿ ನಡೆಸಬಲ್ಲ ಆರ್ಶದೀಪ್ ಸಿಂಗ್ ಯಾವ ತಂಡದಲ್ಲಿದ್ದರೂ ಅವರು ಆಸ್ತಿಯೇ ಸರಿ. ಹೀಗಾಗಿ ಈ ಬಾರಿಯ ಆಟಗಾರರ ಹರಾಜಿನಲ್ಲಿ ಆರ್ಶದೀಪ್ ಸಿಂಗ್ ದಾಖಲೆ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. 

ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಈ ನಾಲ್ವರನ್ನು ಖರೀದಿಸಲಿ; ಸೂಪರ್ ಐಡಿಯಾ ಕೊಟ್ಟ ಎಬಿ ಡಿವಿಲಿಯರ್ಸ್!

3. ಮಿಚೆಲ್ ಸ್ಟಾರ್ಕ್‌:

ಐಪಿಎಲ್ ಇತಿಹಾಸದಲ್ಲೇ ದುಬಾರಿ ಬೌಲರ್ ಎನ್ನುವ ದಾಖಲೆ ಬರೆದಿರುವ ಮಿಚೆಲ್ ಸ್ಟಾರ್ಕ್ ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಆದರೆ ಸನ್‌ರೈಸರ್ಸ್ ಹೈದರಾಬಾದ್‌ ಎದುರಿನ ಫೈನಲ್‌ ಪಂದ್ಯದಲ್ಲಿ ಮಾರಕ ದಾಳಿ ನಡೆಸುವ ಮೂಲಕ ಕೆಕೆಅರ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಸ್ಟಾರ್ಕ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಮತ್ತೆ ಹರಾಜಿನಲ್ಲಿ ಲಭ್ಯವಿರುವ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸಲು ಹಲವು ಫ್ರಾಂಚೈಸಿಗಳ ನಡುವೆ ಮತ್ತೊಮ್ಮೆ ಜಿದ್ದಾಜಿದ್ದಿನ ಪೈಪೋಟಿ ವ್ಯಕ್ತವಾಗುವ ಸಾಧ್ಯತೆಯಿದೆ.
 

Latest Videos
Follow Us:
Download App:
  • android
  • ios