ಕ್ರೀಡಾ ಪ್ಲಾಟ್‌ಫಾರಂ Fun88   ಬ್ರಾಂಡ್ ಅಂಬಾಸಿಡರ್‌ ನೇಮಕ ಭಾರತದ ಕ್ರೀಡಾ ಫ್ಲಾಟ್‌ಫಾರ್ಮ್‌ಗೆ ಡರೆನ್ ಸಾಮಿ ಅಂಬಾಸಿಡರ್  

ನವದೆಹಲಿ(ಜು.11): ಪ್ರಮುಖ ಕ್ರೀಡಾ ಪ್ಲಾಟ್‌ಫಾರಂ Fun88 ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸಾಮಿ ನೇಮಕ ಮಾಡಿದೆ. ಸಾಮಿ ವೆಸ್ಟ್‌ ಇಂಡೀಸ್‌ನ ಎರಡು ಬಾರಿ ಟಿ20 ವರ್ಲ್ಡ್‌ ಕಪ್‌ ವಿಜೇತ ಕ್ಯಾಪ್ಟನ್ ಆಗಿದ್ದು, ಭಾರತದಲ್ಲಿ ಅಸಂಖ್ಯಾತ ಬೆಂಬಲಿಗರನ್ನು ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೂ ಆಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ್ತೆ ಟಿ20 ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದಾರೆ ಡ್ಯಾರನ್ ಸ್ಯಾಮಿ..!

ಜಾಗತಿಕ ಮತ್ತು ಭಾರತೀಯ ಕ್ರೀಡಾ ವಿಭಾಗದಲ್ಲಿ Fun88 ಜನಪ್ರಿಯ ಬ್ರಾಂಡ್ ಆಗಿದ್ದು, ಕ್ರಿಕೆಟ್, ಟೆನಿಸ್, ಫುಟ್‌ಬಾಲ್‌, ಕಬಡ್ಡಿ ಮತ್ತು ಇತರೆ ಕ್ರೀಡಾ ಚಟುವಟಿಕೆಯಲ್ಲಿ ನೈಜ ಸಮಯದ ಸುದ್ದಿ ಮತ್ತು ವಿಶ್ಲೇಷಣೆಯನ್ನು ಒದಗಿಸುತ್ತದೆ. ಈ ಪಾಲುದಾರಿಕೆಯ ಆರಂಭವಾಗಿ ಭಾರತದಲ್ಲಿ ಕ್ರೀಡಾ ಅಭಿಮಾನಿಗಳಿಗೆ ಉದ್ದೇಶಿಸಿ ಪ್ರಸಾರ ಮಾಡಲಾಗುವ ಹಲವು ಬ್ರಾಂಡ್ ಸಿನಿಮಾಗಳಲ್ಲಿ ಸಾಮಿ ಭಾಗವಹಿಸಲಿದ್ದಾರೆ.

ಖಚಿತವಾಯ್ತು ವಿಂಡೀಸ್‌ ಕ್ರಿಕೆಟಿಗ ಸ್ಯಾಮಿಗೆ ಪಾಕ್‌ ಪೌರತ್ವ..!

ಡರೇನ್‌ ನಾಯಕರು ಮತ್ತು ಎಲ್ಲರಿಗೂ ಸ್ಫೂರ್ತಿ ನೀಡುವ ವ್ಯಕ್ತಿಯಾಗಿದ್ದಾರೆ. ಕೆರಿಬಿಯನ್ ಕ್ರಿಕೆಟ್‌ನಲ್ಲಿ ಅವರ ಯಶಸ್ಸು ಮತ್ತು ಕೊಡುಗೆ ಅದ್ಭುತವಾಗಿದೆ. ಭಾರತದಲ್ಲಿ ಡರೇನ್‌ನ ಹಿಂಬಾಲಕರು ವ್ಯಾಪಕವಾಗಿದ್ದಾರೆ ಮತ್ತು ಅವರೊಂದಿಗೆ ನಮ್ಮ ಪಾಲುದಾರಿಕೆಯು ಅತ್ಯಂತ ಮಹತ್ವದ್ದಾಗಿದ್ದು, ಭಾರತದಲ್ಲಿ ಕ್ರೀಡಾ ಕಂಟೆಂಟ್‌ಗೆ ಮಹತ್ವದ ಸ್ಥಳವಾಗಿ Fun88 ಅನ್ನು ರೂಪಿಸುವ ನಮ್ಮ ಧ್ಯೇಯಕ್ಕೆ ಪೂರಕವಾಗಿದೆ. ಈ ಸಂಬಂಧದ ಬಗ್ಗೆ ನಾವು ಅತ್ಯಂತ ಉತ್ಸುಕರಾಗಿದ್ದೇವೆ ಮತ್ತು ಡರೇನ್ ಅವರ ಅಭಿಮಾನಿಗಳ ಮೂಲಕ ನಾವು Fun88 ಅನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಬಹುದು ಎಂದು Fun88 ಹೇಳಿದೆ.