ವೆಸ್ಟ್ ಇಂಡೀಸ್‌ಗೆ ಎರಡು ಬಾರಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಡ್ಯಾರನ್ ಸ್ಯಾಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬಾರ್ಬಡೋಸ್(ಆ.15): ಆ ಬಾಗಿಲು ಇನ್ನೂ ಮುಚ್ಚಿಲ್ಲ ಎನ್ನುವ ಮೂಲಕ ಡ್ಯಾರನ್ ಸ್ಯಾಮಿ ಮತ್ತೆ ವೆಸ್ಟ್ ಇಂಡೀಸ್ ಟಿ20 ತಂಡದಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ತಂಡಕ್ಕೆ ಎರಡು ಬಾರಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸ್ಯಾಮಿ, 2021ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡುವ ಕನವರಿಕೆಯಲ್ಲಿದ್ದಾರೆ.
ನಾನಿನ್ನು ಕ್ರಿಕೆಟ್‌ಗೆ ವಿದಾಯ ಹೇಳಿಲ್ಲ. ಸೇಂಟ್ ಲೂಸಿಯಾ ಪರ ನಾನು ಉತ್ತಮ ಪ್ರದರ್ಶನ ತೋರುವ ಲೆಕ್ಕಾಚಾರದಲ್ಲಿದ್ದೇನೆ. ನನ್ನ ಉತ್ತಮ ಪ್ರದರ್ಶನದ ಮೂಲಕ ಸೇಂಟ್ ಲೂಸಿಯಾ ತಂಡವನ್ನು ಪ್ಲೇ ಆಫ್ ಹಂತಕ್ಕೆ ಕೊಂಡೊಯ್ಯಬೇಕು. ಈ ಮೂಲಕ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆಯಬೇಕು ಎಂದಿದ್ದೇನೆ. ಇದು ಡ್ಯಾರನ್ ಸ್ಯಾಮಿ ಭವಿಷ್ಯದ ಲೆಕ್ಕಾಚಾರವಾಗಿದೆ.
ಡ್ಯಾರನ್ ಸ್ಯಾಮಿ 2016ರ ಏಪ್ರಿಲ್ 16ರಂದು ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಪರ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಟೀಂ ಇಂಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಡ್ಯಾರನ್ ಸ್ಯಾಮಿ ಪಡೆ ದಿಗ್ವಿಜಯ ಸಾಧಿಸುವ ಮೂಲಕ ದಾಖಲೆಯ ಎರಡನೇ ಬಾರಿಗೆ ಟಿ20 ವಿಶ್ವಕಪ್ ಜಯಿಸಿತ್ತು. ಆ ಬಳಿಕ ಗಾಯದ ಸಮಸ್ಯೆ, ವಿಂಡೀಸ್ ಕ್ರಿಕೆಟ್ ಮಂಡಳಿ ಜತೆಗೆ ತಿಕ್ಕಾಟದಿಂದಾಗಿ ತಂಡದಿಂದ ಹೊರಬಿದ್ದಿದ್ದರು.
ಐಪಿಎಲ್ನಲ್ಲಿನ ಆ 'ಕರಾಳ' ಘಟನೆಯನ್ನು ಬಿಚ್ಚಿಟ್ಟ ವಿಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ
ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಬಂಡಾಯ ಹೂಡಿದ್ದ ಡ್ವೇನ್ ಬ್ರಾವೋ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ಅದೇ ಲೆಕ್ಕಾಚಾರವನ್ನು ಬ್ರಾವೋ ಹಾಕಿಕೊಂಡಿದ್ದಾರೆ. ಈಗಾಗಲೇ ಆ್ಯಂಡ್ರೆ ರಸೆಲ್, ಡ್ವೇನ್ ಬ್ರಾವೋ ರಾಷ್ಟ್ರೀಯ ತಂಡದಲ್ಲಿ ಮಿಂಚುತ್ತಿದ್ದಾರೆ. ಆದರೆ ಸಿಪಿಎಲ್ ಟೂರ್ನಿಯಲ್ಲಿ ಸ್ಯಾಮಿ ಅದ್ಭುತ ಪ್ರದರ್ಶನ ತೋರುವ ಮೂಲಕ ರಾಷ್ಟ್ರೀಯ ತಂಡ ಕೂಡಿಕೊಂಡರೂ ಅಚ್ಚರಿ ಪಡಬೇಕಿಲ್ಲ.
