ಕರಾಚಿ(ಫೆ.23): ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಡ್ಯಾರೆನ್ ಸ್ಯಾಮಿಗೆ ‘ಗೌರವ ಪೌರತ್ವ’ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ತಿಳಿಸಿದೆ. 

ಪಾಕಿಸ್ತಾನ ಪೌರತ್ವಕ್ಕೆ ಅರ್ಜಿ ಹಾಕಿದ 2 ವಿಶ್ವಕಪ್ ಗೆದ್ದುಕೊಟ್ಟ ನಾಯಕ..!

ಶನಿವಾರ ಈ ಬಗ್ಗೆ ಮಾಹಿತಿ ನೀಡಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ‘ಪಾಕಿಸ್ತಾನ ಸರ್ಕಾರ ನೀಡುವ ಪ್ರತಿಷ್ಠಿತ ಪುರಸ್ಕಾರವಾದ 'ನಿಶಾನ್-ಇ-ಪಾಕಿಸ್ತಾನ್'ಪ್ರಶಸ್ತಿಯನ್ನು ಮಾರ್ಚ್ 23ರಂದು ರಾಷ್ಟ್ರಪತಿ ಅರೀಫ್‌ ಅಲ್ವಿ ಅವರು ಪ್ರದಾನ ಮಾಡಲಿದ್ದಾರೆ’ ಎಂದು ತಿಳಿಸಿದೆ.

ಈ ಐವರು RCB ತಂಡದಲ್ಲಿದ್ದರು ಎಂದರೆ ನೀವು ನಂಬಲೇಬೇಕು..!

ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರೆನ್ ಸ್ಯಾಮಿ ಪ್ರಸ್ತುತ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ  ಪೇಶಾವರ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪೇಶಾವರ್ ತಂಡದ ಮಾಲಿಕ ಜಾವೇದ್ ಅಫ್ರಿದಿ ಪಾಕ್ ಅಧ್ಯಕ್ಷರ ಬಳಿ ಸ್ಯಾಮಿಗೆ ಪೌರತ್ವ ನೀಡಲು ಮನವಿ ಮಾಡಿಕೊಂಡಿದ್ದರು.