ಸತತ ಸೋಲುಗಳ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೋಟಕ್ ನೇಮಕಗೊಂಡಿದ್ದಾರೆ. ಎನ್‌ಸಿಎಯಲ್ಲಿ ಬ್ಯಾಟಿಂಗ್ ಕೋಚ್ ಆಗಿದ್ದ 52 ವರ್ಷದ ಕೋಟಕ್, ಜನವರಿ 22ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತಂಡ ಸೇರಿಕೊಳ್ಳಲಿದ್ದಾರೆ. ಅಭಿಷೇಕ್ ನಾಯರ್ ಬದಲಿಗೆ ಅನುಭವಿ ಕೋಟಕ್ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಇನ್ನಷ್ಟು ಬದಲಾವಣೆಗಳ ಸಾಧ್ಯತೆ ಇದೆ.

ನವದೆಹಲಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡದಲ್ಲಿ ಮಹತ್ತರ ಬದಲಾವಣೆ ತರಲು ನಿರ್ಧರಿಸಿರುವ ಬಿಸಿಸಿಐ, ಹೊಸ ಬ್ಯಾಟಿಂಗ್ ಕೋಚ್ ಆಗಿ ಸೌರಾಷ್ಟ್ರದ ಮಾಜಿ ಬ್ಯಾಟರ್ ಸಿತಾನು ಕೋಟಕ್‌ರನ್ನು ನೇಮಿಸಿದೆ.

 ಜನವರಿ 22ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧ ತವರಿನ ಟಿ20 ಸರಣಿಗೂ ಮುನ್ನ ಸಿತಾನು ಅವರನ್ನು ತಂಡದ ಬ್ಯಾಟಿಂಗ್ ಕೋಚ್ ಹುದ್ದೆ ಅಲಂಕರಿಸಲಿದ್ದಾರೆ. 52 ವರ್ಷದ ಸಿತಾನ್ನು 2019ರಿಂದಲೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಕೋಚ್ ಆಗಿದ್ದರು. ಅವರು ಭಾರತ ತಂಡದ ಜೊತೆ ಕೆಲ ಸರಣಿಗಳಲ್ಲೂಕಾರ್ಯನಿರ್ವಹಿಸಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 130 ಪಂದ್ಯ ಗಳಲ್ಲಿ 8000ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. 

ಟೀಂ ಇಂಡಿಯಾ ಆಯ್ಕೆಗೆ ಇನ್ನು ದೇಸಿ ಕ್ರಿಕೆಟ್‌ನಲ್ಲಿ ಆಟ ಕಡ್ಡಾಯ!

ನಾಯರ್ ತಲೆದಂಡ?: 

ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ಬಳಿಕ ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ನೇಮಕಗೊಂಡಿದ್ದರು. ಆದರೆ ತಂಡದ ಆಟಗಾರರಿಗೆ ನಾಯರ್ ಅನುಭವ, ಮಾರ್ಗದರ್ಶನ ನೆರವಾಗುತ್ತಿಲ್ಲ. ಹೀಗಾಗಿ ನಾಯ‌ರ್ ಬದಲು ಅನುಭವಿ ಸೀತಾಂಶುರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ ಎನ್ನಲಾಗುತ್ತಿದೆ. ಆದರೆ ನಾಯ‌ರ್ ಕೋಚ್ ಆಗಿ ಮುಂದುವರಿಯಲಿದ್ದಾರೋ ಇಲ್ಲವೋ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಪಾಕಿಸ್ತಾನಕ್ಕೆ ರೋಹಿತ್‌ ಶರ್ಮಾ ಭೇಟಿ?

ಇನ್ನಷ್ಟು ಬದಲಾವಣೆ?: ಗಂಭೀರ್ ಕೋಚ್ ಆದ ಬಳಿಕ ಅವರು ಹೇಳಿದಂತೆ ಟ್ಯಾನ್ ಡೆನ್ ಡೊಶ್ಯಾಟ್‌ರನ್ನು ಫೀಲ್ಡಿಂಗ್ ಕೋಚ್, ಮೋರ್ನೆ ಮೊರ್ಕೆಲ್‌ನ್ನು ಬೌಲಿಂಗ್ ಆಗಿ ನೇಮಿಸ ಲಾಗಿತ್ತು. ಆದರೆ ತಂಡ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಮತ್ತಷ್ಟು ಬದಲಾವಣೆಗೆ ಬಿಸಿಸಿಐ ನಿರ್ಧರಿಸಿದೆ ಎನ್ನಲಾಗುತ್ತಿದೆ.