Asianet Suvarna News Asianet Suvarna News

ಬ್ಲಡ್‌ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ಭಾರತದ ಮಾಜಿ ಕ್ರಿಕೆಟಿಗ ಅನ್ಶುಮನ್‌ ಗಾಯಕ್ವಾಡ್‌..!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಮಾಜಿ ಕೋಚ್ ಅನ್ಶುಮನ್‌ ಗಾಯಕ್ವಾಡ್‌ ಬ್ಲಡ್ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Former India Cricketer Anshuman Gaekwad Dies After Long Battle With Cancer kvn
Author
First Published Aug 1, 2024, 9:40 AM IST | Last Updated Aug 1, 2024, 11:07 AM IST

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ, ಭಾರತ ತಂಡದ ಮಾಜಿ ಕೋಚ್‌ ಅನ್ಶುಮನ್‌ ಗಾಯಕ್ವಾಡ್‌ ಬುಧವಾರ ಬರೋಡಾದಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಬಹಳ ದಿನಗಳಿಂದ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅನ್ಶುಮನ್‌, ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ಕಳೆದ ತಿಂಗಳಷ್ಟೇ ಅವರು ತಮ್ಮ ತವರೂರು ಬರೋಡಾಕ್ಕೆ ವಾಪಸಾಗಿ, ಚಿಕಿತ್ಸೆ ಮುಂದುವರಿಸಿದ್ದರು. ಗಾಯಕ್ವಾಡ್‌ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಮಾಜಿ ಕ್ರಿಕೆಟಿಗರು ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಬಿಸಿಸಿಐ 1 ಕೋಟಿ ರು. ನೆರವು ಬಿಡುಗಡೆ ಮಾಡಿತ್ತು.

ಭಾರತ ಪರ 40 ಟೆಸ್ಟ್‌, 15 ಏಕದಿನ ಪಂದ್ಯಗಳನ್ನು ಆಡಿದ್ದ ಗಾಯಕ್ವಾಡ್‌, ಒಟ್ಟಾರೆ 22 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 205 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 12,136 ರನ್‌ ಕಲೆಹಾಕಿದ್ದರು. ಸಾಕ್ಷಷ್ಟು ರಕ್ಷಣಾತ್ಮಕ ಆಟಕ್ಕೆ ಹೆಸರು ವಾಸಿಯಾಗಿದ್ದ ಅನ್ಶುಮನ್‌ ಗಾಯಕ್ವಾಡ್‌ 1974-75ರ ಅವಧಿಯಲ್ಲಿ ಹಲವಾರು ಬಾರಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಜತೆ ಇನಿಂಗ್ಸ್‌ ಆರಂಭಿಸಿದ್ದಾರೆ. ಜಲಂದರ್‌ನಲ್ಲಿ ನಡೆದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಅನ್ಶುಮನ್‌ ಗಾಯಕ್ವಾಡ್‌ ದ್ವಿಶತಕ ಸಿಡಿಸಿದ್ದರು. ಇದು ಆ ಕಾಲದಲ್ಲಿ ದಾಖಲಾದ ಅತಿ ಮಂದಗತಿಯ ಟೆಸ್ಟ್ ದ್ವಿಶತಕ ಎನಿಸಿತ್ತು.

ಟಿ20 ಸರಣಿ: ಶ್ರೀಲಂಕಾ ವಿರುದ್ಧ ಭಾರತ ‘ಸೂಪರ್‌’ ಕ್ಲೀನ್‌ಸ್ವೀಪ್

1998ರಲ್ಲಿ ಶಾರ್ಜಾದಲ್ಲಿ ಸಚಿನ್‌ ತೆಂಡುಲ್ಕರ್‌ ಅವಿಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದಾಗ, 1999ರಲ್ಲಿ ದೆಹಲಿಯ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಅನಿಲ್‌ ಕುಂಬ್ಳೆ ಪಾಕಿಸ್ತಾನ ವಿರುದ್ಧ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಕಬಳಿಸಿದಾಗ, ಗಾಯಕ್ವಾಡ್‌ ಅವರು ಭಾರತ ತಂಡದ ಕೋಚ್‌ ಆಗಿದ್ದರು. ಇನ್ನು ಭಾರತದ ಮತ್ತೋರ್ವ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದು ಕೂಡಾ ಇದೇ ಗಾಯಕ್ವಾಡ್‌ ಟೀಂ ಇಂಡಿಯಾ ಕೋಚ್ ಆಗಿದ್ದಾಗ. 

ಗಾಯಕ್ವಾಡ್‌ ಅವರ ನಿಧನಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು, ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ ಪದಕ ವಿಜೇತರಿಗೆ ನೀಡುತ್ತಿರುವ ನಿಗೂಢ ಗಿಫ್ಟ್‌ ಬಾಕ್ಸ್‌ನಲ್ಲಿ ಅಂತದ್ದೇನಿದೆ?

ಏಕದಿನ ಸರಣಿಗೆ ಕೊಹ್ಲಿ, ರೋಹಿತ್‌ ಕಠಿಣ ಅಭ್ಯಾಸ

ಕೊಲಂಬೊ: ಶ್ರೀಲಂಕಾ ವಿರುದ್ಧ ಶುಕ್ರವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಅಭ್ಯಾಸ ಆರಂಭಿಸಿದೆ. 3 ದಿನಗಳ ಹಿಂದೆ ಕೊಲಂಬೊ ತಲುಪಿದ ನಾಯಕ ರೋಹಿತ್‌ ಶರ್ಮಾ ಹಾಗೂ ಹಿರಿಯ ಆಟಗಾರ ವಿರಾಟ್‌ ಕೊಹ್ಲಿ, ನೆಟ್ಸ್‌ನಲ್ಲಿ ಬೆವರಿಳಿಸಿದ್ದು ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.

ಮಂಗಳವಾರ ಟಿ20 ಸರಣಿ ಗೆದ್ದ ಬಳಿಕ ಬುಧವಾರ ಪಲ್ಲೆಕೆಲ್ಲೆಯಿಂದ ಕೊಲಂಬೊಗೆ ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಜೊತೆ ಏಕದಿನ ಸರಣಿಯಲ್ಲಿ ಆಡಲಿರುವ ಕೆಲ ಆಟಗಾರರು ಬಂದಿಳಿದರು. ಕೋಚ್‌ ಆದ ಬಳಿಕ ಮೊದಲ ಬಾರಿಗೆ ರೋಹಿತ್‌, ಕೊಹ್ಲಿಯನ್ನು ಭೇಟಿಯಾದ ಗಂಭೀರ್‌, ತಂಡದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.

Latest Videos
Follow Us:
Download App:
  • android
  • ios