ಯಂಗ್ ಕ್ರಿಕೆಟರ್ಸ್ ಪಾಲಿಗೆ ಕಿಂಗ್ ಕೊಹ್ಲಿಯೇ ಗಾಡ್ ಫಾದರ್..!
ಐಪಿಎಲ್ನಲ್ಲಿ ಫೇಲ್ ಆದಾಗ ಪರಾಗ್, ವಿರಾಟ್ ಕೊಹ್ಲಿ ಹತ್ತಿರ ಸಲಹೆ ಕೇಳಿದ್ರು. ಈ ವೇಳೆ ಕೊಹ್ಲಿ, ಒಂದು ಟೂರ್ನಿಯ ವೈಫಲ್ಯದಿಂದ ನಿನ್ನ ಸಾಮರ್ಥ್ಯವನ್ನ ಅಳೆಯಲು ಸಾಧ್ಯವಿಲ್ಲ. ಸತತ ಪರಿಶ್ರಮಕ್ಕೆ ಬೆಲೆ ಸಿಕ್ಕೇ ಸಿಗುತ್ತೆ ಅಂತ ಹೇಳಿದ್ರು. ಕೊಹ್ಲಿಯ ಈ ಸ್ಫೂರ್ತಿದಾಯಕ ಮಾತುಗಳಿಂದ ಪ್ರೇರಣೆ ಪಡೆದ ಪರಾಗ್ ದೇವದರ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು.
ಬೆಂಗಳೂರು(ಆ.09): ವಿರಾಟ್ ಕೊಹ್ಲಿ..! ಈ ಹೆಸರಿಗೆ ಇಂಟ್ರಡಕ್ಷನ್ನೇ ಬೇಕಿಲ್ಲ. ಕ್ರಿಕೆಟ್ ದುನಿಯಾದಲ್ಲಿ, ಅದರಲ್ಲೂ ಭಾರತೀಯ ಕ್ರಿಕೆಟ್ನಲ್ಲಿ ಕೊಹ್ಲಿ ಬರೀ ಹೆಸರಲ್ಲ. ಅದೊಂದು ಬ್ರ್ಯಾಂಡ್..! ಯುವ ಕ್ರಿಕೆಟಿಗರ ಪಾಲಿಗಂತೂ ಕೊಹ್ಲಿ ಬಿಗ್ ಇನ್ಸಿಪಿರೇಷನ್. ಕೊಹ್ಲಿ ಗ್ರೇಟೆಸ್ಟ್ ಬ್ಯಾಟ್ಸ್ಮನ್ ಆಗಿರೋದಕ್ಕೆ ಆಟದ ಮೇಲಿನ ಅವರ ಡೆಡಿಕೇಷನ್, ಹಾರ್ಡ್ವರ್ಕ್, ಕಮಿಟ್ಮೆಂಟ್, ನೆವರ್ ಗಿವ್ಅಪ್ ಆ್ಯಟಿಟ್ಯುಡೇ ಕಾರಣ. ಇದೇ ಕಾರಣಕ್ಕೆ ಯಂಗ್ ಕ್ರಿಕೆಟರ್ಸ್ ಕೊಹ್ಲಿಯನ್ನ ಫಾಲೋ ಮಾಡ್ತಾರೆ. ನಾವು ಕೊಹ್ಲಿಯಂತೆ ಆಗ್ಬೇಕು ಅಂತ ಕನಸು ಕಾಣ್ತಾರೆ.
ಇನ್ನು ಕೊಹ್ಲಿಯು ತಮ್ಮ ಜೂನಿಯರ್ಗಳಿಗೆ ಅಣ್ಣನ ಸ್ಥಾನದಲ್ಲಿ ನಿಂತು ಗೈಡ್ ಮಾಡ್ತಾರೆ. ವೈಫಲ್ಯದಿಂದ ಮೇಲೆದ್ದು ಬರೋದು ಹೇಗೆ ಅಂತ ಸಲಹೆ ನೀಡ್ತಾರೆ. ಕೊಹ್ಲಿಯ ಸಲಹೆಯಿಂದಲೇ ಈ ಯಂಗ್ಸ್ಟರ್ ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾನೆ. ಆ ಮೂಲಕ ತನ್ನ ವಿರುದ್ಧದ ಟೀಕೆಗಳಿಗೆ ಆಟದ ಮೂಲಕವೇ ಉತ್ತರಿಸಿದ್ದಾನೆ.
ಪರಾಗ್ಗೆ ಅದ್ಭುತ ಯಶಸ್ಸಿಗೆ ಕೊಹ್ಲಿಯ ಆ ಮಾತುಗಳೇ ಕಾರಣ..!
ಯೆಸ್, ರಿಯಾನ್ ಪರಾಗ್ನಷ್ಟು ಟ್ರೋಲ್ಗೊಳಗಾದ ಭಾರತದ ಯುವ ಕ್ರಿಕೆಟರ್ ಮತ್ತೊಬ್ಬರಿಲ್ಲ. ಅದಕ್ಕೆ ಕಾರಣ, ಐಪಿಎಲ್ನಲ್ಲಿನ ರಿಯಾನ್ ಪರಾಗ್ರ ಫ್ಲಾಪ್ ಶೋ. ಈ ಬಾರಿಯ ಐಪಿಎಲ್ನಲ್ಲೂ ಪರಾಗ್ ವೈಫಲ್ಯ ಅನುಭವಿಸಿದ್ರು. ಆದ್ರೆ, ದೇಶಿ ಕ್ರಿಕೆಟ್ನ ದೇವ್ಧರ್ ಟ್ರೋಫಿಯಲ್ಲಿ ಪರಾಗ್ ಅದ್ಭುತ ಬ್ಯಾಟಿಂಗ್ ಮೂಲಕ ಅಬ್ಬರಿಸಿ, ತನ್ನ ಸಾಮರ್ಥ್ಯ ಪ್ರೂವ್ ಮಾಡಿದ್ರು. ಟೂರ್ನಿಯಲ್ಲಿ 5 ಇನ್ನಿಂಗ್ಸ್ಗಳಿಂದ 2 ಶತಕ ಮತ್ತು 1 ಅರ್ಧಶತಕ ಸಹಿತ 354 ರನ್ ಸಿಡಿಸಿದ್ರು. ಟೂರ್ನಿಯಲ್ಲಿ ಅತಿಹೆಚ್ಚು 23 ಸಿಕ್ಸರ್ ಬಾರಿಸಿದ್ರು. ಪರಾಗ್ರ ಈ ಸೂಪರ್ ಸಕ್ಸಸ್ಗೆ ವಿರಾಟ್ ಕೊಹ್ಲಿ ನೀಡಿದ್ದ ಸಲಹೆಗಳೇ ಕಾರಣ.
ಋತುರಾಜ್ ಗಾಯಕ್ವಾಡ್ ಮದುವೆಯಾಗಿದ್ದರಿಂದ ಕ್ರಿಕೆಟ್ ಬದುಕು ಹಾಳಾಗುತ್ತಾ..? ಉತ್ಕರ್ಷ ಪವಾರ್ ಹೇಳಿದ್ದೇನು?
ಐಪಿಎಲ್ನಲ್ಲಿ ಫೇಲ್ ಆದಾಗ ಪರಾಗ್, ವಿರಾಟ್ ಕೊಹ್ಲಿ ಹತ್ತಿರ ಸಲಹೆ ಕೇಳಿದ್ರು. ಈ ವೇಳೆ ಕೊಹ್ಲಿ, ಒಂದು ಟೂರ್ನಿಯ ವೈಫಲ್ಯದಿಂದ ನಿನ್ನ ಸಾಮರ್ಥ್ಯವನ್ನ ಅಳೆಯಲು ಸಾಧ್ಯವಿಲ್ಲ. ಸತತ ಪರಿಶ್ರಮಕ್ಕೆ ಬೆಲೆ ಸಿಕ್ಕೇ ಸಿಗುತ್ತೆ ಅಂತ ಹೇಳಿದ್ರು. ಕೊಹ್ಲಿಯ ಈ ಸ್ಫೂರ್ತಿದಾಯಕ ಮಾತುಗಳಿಂದ ಪ್ರೇರಣೆ ಪಡೆದ ಪರಾಗ್ ದೇವದರ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು.
ಇನ್ನು ಕೇರಳದ ಬ್ಯಾಟ್ಸ್ಮನ್ ರೋಹನ್ ಕುನ್ನುಮಲ್ಗು ಕೊಹ್ಲಿಯೇ ಸ್ಫೂರ್ತಿ. ದೇವದರ್ ಟ್ರೋಪಿ ಫೈನಲ್ನಲ್ಲಿ ಸೌಥ್ ಝೋನ್ನ ರೋಹನ್ ಕುನ್ನುಮಲ್, ಶತಕ ಸಿಡಿಸಿದ ನಂತರ ಕೊಹ್ಲಿಯಂತೆ ನಾನು ಮಾತಾಡಲ್ಲ..ನನ್ನ ಬ್ಯಾಟ್ ಮಾತಾಡುತ್ತೆ ಅನ್ನೋ ಶೈಲಿಯಲ್ಲಿ ಸಂಭ್ರಮಿಸಿದ್ರು. ಪರಾಗ್, ರೋಹನ್ಗಷ್ಟೇ ಅಲ್ಲ. ಭಾರತೀಯ ಕ್ರಿಕೆಟ್ನ ನೆಕ್ಸ್ಟ್ ವಿರಾಟ್ ಕೊಹ್ಲಿ ಅಂತ ಕರೆಸಿಕೊಳ್ಳುತ್ತಿರೋ ಶುಭ್ಮನ್ ಗಿಲ್ಗು ಕೂಡ ಕೊಹ್ಲಿಯ ಬಿಗ್ ಫ್ಯಾನ್.
ಟಿ20 ಕ್ರಿಕೆಟ್‌ಗೆ ನಿವೃತ್ತಿ ಕುರಿತಂತೆ BCCIಗೆ ಸೆಡ್ಡು ಹೊಡೆದ್ರಾ ಕ್ಯಾಪ್ಟನ್ ರೋಹಿತ್ ಶರ್ಮಾ..?
ಅದೇನೆ ಇರಲಿ, ಕೊಹ್ಲಿ ಸ್ಫೂರ್ತಿಯಿಂದ ಭಾರತೀಯ ಕ್ರಿಕೆಟ್‌ಗೆ ಮತ್ತಷ್ಟು ಯಂಗ್ ಟ್ಯಾಲೆಂಟೆಡ್ ಕ್ರಿಕೆಟರ್ಸ್ ಬರಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ.
ಮಹೇಶ್ ಗುರಣ್ಣನವರ್, ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್