ಧೋನಿ ನಿವೃತ್ತಿಯ ಬಗ್ಗೆ ಮತ್ತೆ ವದಂತಿ..!
ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಇದೀಗ ಬಹು ಚರ್ಚಿತ ವಿಷಯ. ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್'ನಿಂದ ದೂರವೇ ಉಳಿದಿರುವ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಲಿದ್ದಾರೆ ಎನ್ನುವ ಗಾಳಿಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಅ.30): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮತ್ತೆ ವದಂತಿ ಹಬ್ಬಿದೆ. ಮಂಗಳವಾರ ಟ್ವೀಟರ್‌ನಲ್ಲಿ ‘ಧೋನಿ ರಿಟೈರ್ಸ್’ ಹ್ಯಾಷ್‌ಟ್ಯಾಗ್ ಭಾರೀ ಟ್ರೆಂಡ್ ಆಯಿತು. ಸಿಟ್ಟಿಗೆದ್ದ ಧೋನಿ ಅಭಿಮಾನಿಗಳು ‘ನೆವರ್ ರಿಟೈರ್ ಧೋನಿ’ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಿದರು.
ಗುಡ್ ನ್ಯೂಸ್ ಕೊಟ್ಟ ಟೀಂ ಇಂಡಿಯಾ ಮಾರಕ ವೇಗಿ ಬುಮ್ರಾ...!
ಇತ್ತೀಚೆಗಷ್ಟೇ ಧೋನಿ ನಿವೃತ್ತಿ ವದಂತಿ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಸದ್ಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ, 2020ರ ಜನವರಿಯಲ್ಲಿ ತಂಡಕ್ಕೆ ವಾಪಸಾಗಲಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್ ವರೆಗೂ ಅವರು ನಿವೃತ್ತಿ ಘೋಷಿಸುವುದಿಲ್ಲ ಎಂದು ಹೇಳಲಾಗಿದೆ.
ಟೇಬಲ್ ಟೆನಿಸ್‌ನಲ್ಲೂ ಧೋನಿಯೇ ಕಿಂಗ್; CSK ವಿಡಿಯೋ ವೈರಲ್!
ಈ ಮೊದಲು ಧೋನಿ ಐಸಿಸಿ ಏಕದಿನ ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಧೋನಿ ವಿಚಾರದ ಬಗ್ಗೆ ತುಟಿ ಬಿಚ್ಚಿಲ್ಲ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಾಗ ಧೋನಿ ತಂಡದಿಂದ ದೂರವೇ ಉಳಿದಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದಲೂ ಧೋನಿ ವಿಶ್ರಾಂತಿ ಬಯಸಿದ್ದರು. ಬಾಂಗ್ಲಾದೇಶ ವಿರುದ್ಧದ ಸೀಮಿತ ಓವರ್'ಗಳ ಸರಣಿಗೂ ಧೋನಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದರ ಬೆನ್ನಲ್ಲೇ ಧೋನಿ ಕ್ರಿಕೆಟ್ ಕರಿಯರ್ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.