ಮುಂಬೈ(ಅ.30): ಗಾಯದಿಂದ ಗುಣಮುಖರಾಗುತ್ತಿರುವ ವೇಗಿ ಜಸ್ಪ್ರೀತ್‌ ಬುಮ್ರಾ ಶೀಘ್ರ ಭಾರತ ತಂಡಕ್ಕೆ ಮರಳಲಿದ್ದಾರೆ. ಹಾಗೆಂದು ಸ್ವತಃ ಬುಮ್ರಾ ತಾವು ಜಿಮ್‌ನಲ್ಲಿರುವ ಫೋಟೋ​ವೊಂದ​ನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಘೋಷಿ​ಸಿದ್ದಾರೆ.

ವಿದಾಯದ ಬೆನ್ನಲ್ಲೇ ಹೊಸ ತಂಡ ಸೇರಿದ ಆಮ್ಲಾ

ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿದ್ದ ಕಾರಣ ಅವರು ವಿಶ್ರಾಂತಿ​ಯ​ಲ್ಲಿ​ದ್ದರು. ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿ ಮಿಂಚಿದ್ದ ಬುಮ್ರಾ, ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಅಲಭ್ಯರಾಗಿದ್ದರು. ಡಿಸೆಂಬರ್‌ನಲ್ಲಿ ಬುಮ್ರಾ ತಂಡಕ್ಕೆ ವಾಪ​ಸಾ​ಗುವ ನಿರೀಕ್ಷೆ ಇದೆ.

RCB ಸೇರಿಕೊಳ್ತಾರಾ ಬುಮ್ರಾ? ಅಭಿಮಾನಿ ಪ್ರಶ್ನೆಗೆ ಮುಂಬೈ ಇಂಡಿಯನ್ಸ್ ಉತ್ತರ!

ಬುಮ್ರಾ ಈ ಪೋಸ್ಟ್ ಮಾಡುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಅಲ್ಲದೇ ಹಿಂದೆಂದಿಗಿಂತ ಬಲಿಷ್ಠರಾಗಿ ಕಮ್ ಬ್ಯಾಕ್ ಮಾಡಿ ಎಂದು ಶುಭ ಹಾರೈಸಿದ್ದಾರೆ.

 

2016ರ ಜನವರಿಯಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಬುಮ್ರಾ, ಆ ಬಳಿಕ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ ವಿದೇಶದಲ್ಲೇ ಟೆಸ್ಟ್ ಪಂದ್ಯವನ್ನಾಡಿರುವ ಬುಮ್ರಾ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಲು ಕಾತುರರಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿಯಬೇಕಾಯಿತು. ಇನ್ನು ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಗೆ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

ಬುಮ್ರಾ ಅನುಪಸ್ಥಿತಿಯಲ್ಲೂ ಟೀಂ ಇಂಡಿಯಾ ವೇಗಿಗಳು ಅದ್ಭುತ ಪ್ರದರ್ಶನ ತೋರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತ್ತು. ಟೀಂ ಇಂಡಿಯಾ ವರ್ಷಾಂತ್ಯದ ವೇಳೆಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಆ ವೇಳೆಗೆ ಬುಮ್ರಾ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.