Asianet Suvarna News Asianet Suvarna News

ಟೇಬಲ್ ಟೆನಿಸ್‌ನಲ್ಲೂ ಧೋನಿಯೇ ಕಿಂಗ್; CSK ವಿಡಿಯೋ ವೈರಲ್!

ಎಂ.ಎಸ್.ಧೋನಿ ಕ್ರಿಕೆಟ್ ಹೊರತು ಪಡಿಸಿದರೆ, ಫುಟ್ಬಾಲ್, ಬ್ಯಾಡ್ಮಿಂಟನ್, ಗಾಲ್ಫ್ ಕ್ರೀಡೆಯಲ್ಲೂ ಎತ್ತಿದ ಕೈ. ಇದೀಗ ಟೇಬಲ್ ಟೆನಿಸ್‌ಲ್ಲೂ ಧೋನಿ ಕಿಂಗ್ ಅನ್ನೋದನ್ನು ಸಾಬೀತು ಪಡಿಸಿದ್ದಾರೆ. ಧೋನಿ ಟೇಬಲ್ ಟೆನಿಸ್ ವಿಡಿಯೋ ಇಲ್ಲಿದೆ.

MS Dhoni stun dwayne bravo in table tennis csk share old video during deepavali
Author
Bengaluru, First Published Oct 28, 2019, 1:45 PM IST
  • Facebook
  • Twitter
  • Whatsapp

ಚೆನ್ನೈ(ಅ.28): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಫಿಟ್ನೆಸ್ ವಿಡಿಯೋವೊಂದು ಭಾರಿ ಸದ್ದು ಮಾಡಿತ್ತು. ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯಲ್ಲಿ ಜಿಮ್ ಅಭ್ಯಾಸ ಮಾಡುತ್ತಿರುವ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಧೋನಿ ಹಳೇ ವಿಡಿಯೋವನ್ನು ಶೇರ್ ಮಾಡಿದೆ. ಸಿಎಸ್‌ಕೆ ಆಟಗಾರ, ವಿಂಡೀಸ್ ಕ್ರಿಕೆಟಿಗ  ಡ್ವೇನ್ ಬ್ರಾವೋ ಜೊತೆ ಟೇಬಲ್ ಟೆನಿಸ್ ಆಡುತ್ತಿರುವ ವಿಡಿಯೋ ಕೂಡ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ದೇಶ​-ವಿದೇ​ಶ​ದ​ಲ್ಲಿ ಧೋನಿ ಕ್ರಿಕೆಟ್ ಅಕಾ​ಡೆ​ಮಿ?

ಕ್ರಿಕೆಟಿಗ ಎಂ.ಎಸ್.ಧೋನಿ, ಕ್ರಿಕೆಟ್ ಹೊರತು ಪಡಿಸಿದರೆ, ಫುಟ್ಬಾಲ್, ಬ್ಯಾಡ್ಮಿಂಟನ್‌ಲ್ಲೂ ಕೌಶಲ್ಯ ಹೊಂದಿದ್ದಾರೆ. ಇದೀಗ ಟೇಬಲ್ ಟೆನಿಸ್‌ನಲ್ಲೂ ಧೋನಿ ಕಿಂಗ್ ಅನ್ನೋದನ್ನು ಸಿಎಸ್‌ಕೆ ಹಂಚಿಕೊಂಡಿರುವ ವಿಡಿಯೋ ಹೇಳುತ್ತಿದೆ. ಬ್ರಾವೋ ಜೊತೆ ಟೇಬಲ್ ಟೆನಿಸ್ ಆಡುತ್ತಿರುವ ವಿಡಿಯೋದಲ್ಲಿ ಧೋನಿ ತಿರುಗೇಟಿಗೆ ಬ್ರಾವೋ ಬೆಚ್ಚಿ ಬಿದ್ದಿದ್ದಾರೆ.

 

ಇದನ್ನೂ ಓದಿ: ಕಾರು ತೊಳೆದು ಸುಸ್ತಾದ ಧೋನಿಗೆ ಪುತ್ರಿ ಝಿವಾ ಮಸಾಜ್!.

2019ರ ಐಪಿಎಲ್ ಟೂರ್ನಿ ವೇಳೆ ಖಾಸಗಿ ಉತ್ಪನ್ನಗಳ ಜಾಹೀರಾತು ಶೂಟಿಂಗ್ ನಡೆದಿತ್ತು. ಈ ವೇಳೆ ಧೋನಿ ಹಾಗೂ ಬ್ರಾವೋ ಟೇಬಲ್ ಟೆನಿಸ್ ಆಡೋ ಮೂಲಕ ಗಮನಸೆಳೆದಿದ್ದರು. ಇನ್ನು ರವೀಂದ್ರ ಜಡೇಜಾ ಬಿಲಿಯರ್ಡ್ಸ್ ಆಡಿದ್ದರು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಳೇ ವಿಡಿಯೋ ಶೇರ್ ಮಾಡಿರುವ ಸಿಎಸ್‌ಕೆಗೆ ಅಭಿಮಾನಿಗಳು ಧನ್ಯಾವಾದ  ಹೇಳಿದ್ದಾರೆ.


 

Follow Us:
Download App:
  • android
  • ios