India vs Pak: ಗುಜರಾತ್ ತಲುಪಿದ ಡಾ. ಬ್ರೋ ಕ್ರಿಕೆಟ್ನ ಏನೇನ್ ಮಾಹಿತಿ ನೀಡಿದ್ರು ಕೇಳಿ...
ಗುಜರಾತ್ನ ಅಹಮದಾಬಾದ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದ ಪೂರ್ವ ತಯಾರಿ ಹೇಗಿದೆ ಎಂಬ ಬಗ್ಗೆ ಡಾ.ಬ್ರೋ ಮಾಹಿತಿ ನೀಡುತ್ತಿದ್ದಾರೆ.
ನಮಸ್ಕಾರ ದೇವ್ರು ಖ್ಯಾತಿಯ ಡಾ.ಬ್ರೋ ದೇಶ-ವಿದೇಶ ಎಲ್ಲಾ ಸುತ್ತಾಡಿದ ಮೇಲೆ ಈಗ ಸ್ಟಾರ್ಸ್ಪೋರ್ಟ್ಸ್ ಕನ್ನಡ ಚಾನೆಲ್ನ ಕ್ರಿಕೆಟ್ ರಾಯಭಾರಿಯಾಗಿದ್ದಾರೆ. ದೇಶ-ವಿದೇಶಗಳಲ್ಲಿ ಸುತ್ತಾಡುತ್ತಾ, ಹಲವು ಸಮಯದಲ್ಲಿ ಸಾವಿನ ಭಯವನ್ನೂ ಬಿಟ್ಟು ಸಾವಿನ ಬಾಯೊಳಗೇ ಹೋಗುವ ಧೈರ್ಯ ತೋರಿಸುತ್ತಾ ಹೋದ ಕಡೆಗಳಲ್ಲೆಲ್ಲಾ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಕಣ್ಮಣಿಯಾದವರೇ ಡಾ. ಬ್ರೋ ಅರ್ಥಾತ್ 22 ವರ್ಷದ ಗಗನ್ ಈಗ ಕ್ರಿಕೆಟ್ ಕುರಿತು ಅಪ್ಡೇಟ್ ನೀಡುತ್ತಿದ್ದಾರೆ. ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಗಗನ್ ಸಾಕ್ಷಿಯಾಗಿದ್ದಾರೆ. ಕನ್ನಡಿಗರಿಗೆ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.
ಇದೀಗ ಡಾ.ಬ್ರೋ ಗುಜರಾತ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಇಂದು ಮಧ್ಯಾಹ್ನ ನಡೆಯಲಿರುವ India vs Pakistan ಕ್ರಿಕೆಟ್ ಪಂದ್ಯಕ್ಕೆ ಉಭಯ ದೇಶಗಳು ಮಾತ್ರವಲ್ಲದೇ ಬಹುತೇಕ ಎಲ್ಲಾ ದೇಶಗಳ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಾಗಲೇ ಗುಜರಾತ್ನ ಅಹಮದಾಬಾದ್ನಲ್ಲಿರುವ ವಿಶ್ವದ ಅತಿದೊಡ್ಡ ಸ್ಟೇಡಿಯಂಗೆ ಹೋಗಿರುವ ಗಗನ್ ಅವರು ಅಲ್ಲಿಯ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ. 12 ತಾರೀಖಿನಿಂದಲೇ ಗುಜರಾತ್ ಫುಲ್ ಜನಜಂಗುಳಿಯಿಂದ ತುಂಬಿಹೋಗಿದೆ ಎಂದಿರುವ ಅವರು, ಒಂದು ತಿಂಗಳ ಹಿಂದೆಯೇ ಗುಜರಾತ್ಗೆ ಬರುವ ಎಲ್ಲಾ ಟ್ರೇನ್ಗಳೂ ಬುಕ್ ಆಗಿರುವುದಾಗಿ ಹೇಳಿದ್ದಾರೆ. ಮಾತ್ರವಲ್ಲದೇ ಎರಡು ದಿನಗಳ ವಿಮಾನ ಟಿಕೆಟ್ಗಳೂ ಸಂಪೂರ್ಣ ಬುಕ್ ಆಗಿರುವುದು ಮಾತ್ರವಲ್ಲದೇ ಇಡೀ ಸ್ಟೇಡಿಯಂ ಟಿಕೆಟ್ ಸೋಲ್ಡ್ ಔಟ್ ಆಗಿದೆ ಎಂದಿದ್ದಾರೆ.
ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷ್
ಪಾಕಿಸ್ತಾನದ ಜೊತೆಗಿನ ಭಾರತದ ಮ್ಯಾಚ್ ಎಂದರೆ, ಸಹಜವಾಗಿ ಕ್ರಿಕೆಟ್ ಪ್ರೇಮಿಗಳು ಅಲ್ಲದಿದ್ದವರೂ ನೋಡುವುದು ಇದೆ. ಇನ್ನು ಕ್ರಿಕೆಟ್ ಅಭಿಮಾನಿಗಳು ಎಂದ ಮೇಲೆ ಕೇಳಬೇಕೆ? ಈ ಸ್ಟೇಡಿಯಂ ಇದಾಗಲೇ ಹೇಳಿದಂತೆ ಪ್ರಪಂಚದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, ಇಲ್ಲಿ 1.30 ಲಕ್ಷ ಜನರು ಕುಳಿತುಕೊಳ್ಳಬಹುದು. ಅಷ್ಟೂ ಟಿಕೆಟ್ಗಳು ಇದಾಗಲೇ ಸೋಲ್ಡ್ ಔಟ್ ಆಗಿರುವುದಾಗಿ ಡಾ.ಬ್ರೋ ಮಾಹಿತಿ ನೀಡಿದರು. ಇಲ್ಲಿಯ ಆಟೋ, ಓಲಾ, ಟ್ಯಾಕ್ಸಿಗಳವರಂತೂ ಖುಷಿಯಿಂದ ಕುಣಿದಾಡುತ್ತಿದ್ದಾರೆ. ಎಲ್ಲರಿಗೂ ಫುಲ್ ಬಿಜ್ನೆಸ್ ಸಿಕ್ಕಿದ್ದು, ಲಕ್ಷಗಟ್ಟಲೆ ಹೊರಗಿನ ಜನರ ಓಡಾಟ ನಡೆದಿದೆ ಎಂದಿದ್ದಾರೆ.
ತಾಲಿಬಾನ್, ಪಾಕಿಸ್ತಾನದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇವರ ಹೆಸರು ಗಗನ್. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ. ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ. ಮೊನ್ನೆಯಷ್ಟೇ ಸೋಮಾಲಿಯಾಕ್ಕೂ ಹೋಗಿ ಅಲ್ಲಿ ಕಡಲ್ಗಳ್ಳರನ್ನೂ ಮಾತನಾಡಿಸಿ ಬಂದಿದ್ದಾರೆ. ಈಗ ಎಲ್ಲರ ಲಕ್ಷ್ಯ ಗುಜರಾತ್ನತ್ತ ನೆಟ್ಟಿದೆ.
ಸೋಮಾಲಿಯಾ ಕಡಲ್ಗಳ್ಳರ ಮನೆಯಲ್ಲಿ ಡಾ.ಬ್ರೋ! ಇರೋದ್ ಒಂದೇ ಹೃದಯ, ಎಷ್ಟ್ ಅಂತ ಗೆಲ್ತಿಯಾ ದೇವ್ರು ಎಂದ ಫ್ಯಾನ್ಸ್
ಅರ್ಚಕರ ಮಗನಾಗಿ ಕುಟುಂಬದಲ್ಲಿ ಹುಟ್ಟಿ, ಪೌರೋಹಿತ್ಯ ಕಲಿತು, ಪೂಜಾ ಪುನಸ್ಕಾರ ಮಾಡುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಹುಡುಗ ಡಾ.ಬ್ರೋ ಅವರನ್ನು ಸ್ಟಾರ್ಟ್ಸ್ ಸ್ಪೋರ್ಟ್ಸ್ನಂಥ ಚಾನೆಲ್ ಕರೆದು ಇಂಥದ್ದೊಂದು ಅವಕಾಶ ನೀಡಿದೆ ಎಂದರೆ ಅದು ಸಾಧಾರಣ ಮಾತಲ್ಲ. ತಾಲಿಬಾನ್, ಪಾಕಿಸ್ತಾನದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ. ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ. ಮೊನ್ನೆಯಷ್ಟೇ ಸೋಮಾಲಿಯಾಕ್ಕೂ ಹೋಗಿ ಅಲ್ಲಿ ಕಡಲ್ಗಳ್ಳರನ್ನೂ ಮಾತನಾಡಿಸಿ ಬಂದಿದ್ದಾರೆ.