ಅದು ನಿಮ್ಮ ಸಾಮರ್ಥ್ಯದ ಬಗ್ಗೆ ಮತ್ತು ಪಿಚ್‌ನಲ್ಲಿ ನೀವು ಏನು ಮಾಡಬಹುದು ಎಂಬುದರ ಬಗ್ಗೆಯಷ್ಟೇ. ಪಿಚ್ ಬಗ್ಗೆ ಏಕೆ ಹೆಚ್ಚು ಮಾತನಾಡುತ್ತಿದ್ದಾರೆ ಎಂಬುದು ನನ್ನ ತಿಳುವಳಿಕೆಗೆ ಮೀರಿದೆ ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ. 

ನಾಗ್ಪುರ (ಫೆಬ್ರವರಿ 12, 2023): ಭಾರತ - ಆಸ್ಟ್ರೇಲಿಯ ನಡುವಿನ ಬಾರ್ಡರ್‌ - ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಮುಗಿದರೂ ಆ ಕ್ರೀಡಾಂಗಣದ ಪಿಚ್‌ ಬಗ್ಗೆ ಚರ್ಚೆ ಮಾತ್ರ ನಿಂತಿಲ್ಲ. ಪಂದ್ಯ ಆರಂಭವಾಗುವ ಕೆಲ ದಿನಗಳ ಮುಂಚಿನಿಂದ ನಾಗ್ಪುರ ಪಿಚ್‌ ಬಗ್ಗೆ ಹೆಚ್ಚು ಚರ್ಚೆಯಾಯಿತು. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ದೃಶ್ಯಗಳು. ಪಿಚ್‌ ಅನ್ನು ಬದಲಾಯಿಸುವ ಯತ್ನ ನಡೆದಿದೆ ಎಂದು ಆಸ್ಟ್ರೇಲಿಯದ ಮಾಧ್ಯಮಗಳು ಆರೋಪಿಸಿದ್ದವು. ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್‌ ಗಳಿಸಿದ್ದು, ಆಸ್ಟ್ರೇಲಿಯ ಎರಡೂ ಇನ್ನಿಂಗ್ಸ್‌ನಲ್ಲಿ ರನ್‌ ಗಳಿಸಲು ಹೆಣಗಾಡಿತು. ಕೊನೆಗೆ, ಶನಿವಾರ ಇನ್ನಿಂಗ್ಸ್ ಮತ್ತು 123 ರನ್‌ಗಳಿಂದ ಸೋತರು ಮತ್ತು ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿದೆ. 

ಇಡೀ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೇವಲ ಮೂರು ಸೆಷನ್‌ಗಳವರೆಗೆ ಬ್ಯಾಟಿಂಗ್ ಮಾಡಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 177 ರನ್‌ಗಳಿಗೆ ಆಲೌಟ್‌ ಆದರೆ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 91 ರನ್‌ಗಳಿಗೆ ಎಲ್ಲಾ 10 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆದರೆ, ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸಿದರೆ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಕೂಡ ಅರ್ಧಶತಕ ಗಳಿಸಿದರು. ಮೊಹಮ್ಮದ್ ಶಮಿ ಕೂಡ ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡಂತೆ 37 ರನ್ ಸಿಡಿಸಿದ್ದರು.

ಇದನ್ನು ಓದಿ: Delhi Test ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಗೆ ಗುಡ್ ನ್ಯೂಸ್‌; ಮಾರಕ ವೇಗಿ ತಂಡ ಸೇರ್ಪಡೆ..?

ಈ ದೊಡ್ಡ ಗೆಲುವಿನ ನಂತರ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ರವಿಚಂದ್ರನ್‌ ಅಶ್ವಿನ್‌ ಆಸೀಸ್‌ ತಂಡವನ್ನು ಕಾಲೆಳೆದಿದ್ದಾರೆ. ಅಲ್ಲದೆ, ಪಂದ್ಯದ ಪಿಚ್‌ ಕುರಿತಂತೆ ಸಾಕ್ಟು ಚರ್ಚೆ ನಡೆದಿದ್ದಕ್ಕೆ ಅಶ್ವಿನ್‌ ತೀವ್ರವಾಗಿ ಕಾಲೆಳೆದಿದ್ದಾರೆ. ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ದಾಖಲೆಯೊಂದಿಗೆ ಆಸೀಸ್‌ ಪಾಲಿಗೆ ವಿಲನ್‌ ಆದ ಆರ್‌. ಅಶ್ವಿನ್‌, BCCI.tv ನಲ್ಲಿ ರೋಹಿತ್ ಶರ್ಮಾರೊಂದಿಗಿನ ಸಂಭಾಷಣೆಯ ಸಮಯದಲ್ಲಿ ಆಸ್ಟ್ರೇಲಿಯಾವನ್ನು ಕ್ರೂರವಾಗಿ ಕೆಣಕಿದರು. 

ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಪ್ರವಾಸಿ ತಂಡಗಳಿಗೆ ಪಿಚ್ ಟಾಕ್ ನೆಚ್ಚಿನ ವಿಷಯವಾಗಿದೆ. ನೀವು ಬ್ಯಾಟಿಂಗ್ ಮಾಡುವಾಗ, ಒಂದು ಚೆಂಡು ಕೂಡ ಸಿಲ್ಲಿ ಪಾಯಿಂಟ್‌ಗೆ ಹೋಗಲಿಲ್ಲ. ನಿಮ್ಮ ಹುಡುಗರಿಗೆ ತೊಂದರೆ ಕಾಣಿಸಲಿಲ್ಲ. ರಹಸ್ಯವೇನು? ಇದು ಉತ್ತಮ ಬ್ಯಾಟ್ಸ್‌ಮನ್‌ಶಿಪ್ ಅಥವಾ ನಾವು ಬೇರೆ ಪಿಚ್‌ನಲ್ಲಿ ಆಡುತ್ತೇವೆಯೇ? ಎಂದು ಆರ್‌. ಅಶ್ವಿನ್ ರೋಹಿತ್‌ ಶರ್ಮಾಗೆ ಕೇಳಿದ್ದು, ಪರೋಕ್ಷವಾಗಿ ಆಸೀಸ್‌ ಕಾಲೆಳೆದಿದ್ದಾರೆ.

ಇದನ್ನೂ ಓದಿ: Nagpur Test ಕಮ್‌ಬ್ಯಾಕ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ರವೀಂದ್ರ ಜಡೇಜಾ ಹೇಳಿದ್ದೇನು..?

Scroll to load tweet…

ಇದಕ್ಕೆ ಉತ್ತರ ನೀಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, "ಅದೇ ಪಿಚ್. ನಾನು ಹೇಳಿದಂತೆ, ನಾವು ಚೇಂಜಿಂಗ್‌ ರೂಮ್‌ನಲ್ಲಿ ಮಾತನಾಡಿದಂತೆ, ಅದು ನಿಮ್ಮ ಸಾಮರ್ಥ್ಯದ ಬಗ್ಗೆ ಮತ್ತು ಪಿಚ್‌ನಲ್ಲಿ ನೀವು ಏನು ಮಾಡಬಹುದು ಎಂಬುದರ ಬಗ್ಗೆಯಷ್ಟೇ. ಪಿಚ್ ಬಗ್ಗೆ ಏಕೆ ಹೆಚ್ಚು ಮಾತನಾಡುತ್ತಿದ್ದಾರೆ ಎಂಬುದು ನನ್ನ ತಿಳುವಳಿಕೆಗೆ ಮೀರಿದೆ. ಕೌಶಲ್ಯದ ಬಗ್ಗೆ ಸಾಕಷ್ಟು ಮಾತನಾಡುತ್ತಿಲ್ಲ ಎಂದು ಸಾಕಷ್ಟು ಬೇಸರವಾಗಿದೆ’’ ಎಂದೂ ರೋಹಿತ್ ಶರ್ಮಾ ಉತ್ತರಿಸಿದ್ದು, ಇವರು ಸಹ ಪರೋಕ್ಷವಾಗಿ ಆಸ್ಟ್ರೇಲಿಯದ ಕಾಲೆಳೆದಿದ್ದಾರೆ.

ಫೆಬ್ರವರಿ 17 ರಂದು ನವದೆಹಲಿಯಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ಈ ಪಂದ್ಯದ ಕುರಿತು ಯಾವ ರೀತಿ ಚರ್ಚೆಯಾಗುತ್ತೋ ಕಾದು ನೋಡಬೇಕಿದೆ. 

Nagpur Test: ಅಶ್ವಿನ್‌ ಸ್ಪಿನ್‌ ಬಿರುಗಾಳಿಗೆ ಆಸೀಸ್ ಧೂಳೀಪಟ, ಮೊದಲ ಟೆಸ್ಟ್‌ ಭಾರತದ ಪಾಲು