ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಘೋಷಿಸಿದ ಬಳಿಕ ಐಪಿಎಲ್‌ ವೇಳಾಪಟ್ಟಿ ಸಿದ್ಧಪಡಿಸಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಅವರು ಮಾಧ್ಯಮವೊಂದಕ್ಕೆ ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ(ಅ.22): ಲೋಕಸಭೆ ಚುನಾವಣೆ ಹೊರತಾಗಿಯೂ 2024ರ ಐಪಿಎಲ್‌ ಭಾರತದಲ್ಲೇ ನಡೆಯಲಿದೆ ಎಂದು ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಳ್‌ ಸ್ಪಷ್ಟಪಡಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಚುನಾವಣೆ ಕಾರಣಕ್ಕೆ 2009ರಲ್ಲಿ ದ.ಆಫ್ರಿಕಾದಲ್ಲಿ ಐಪಿಎಲ್‌ ಆಯೋಜಿಸಿದಂತೆ ಮುಂದಿನ ಬಾರಿಯೂ ಭಾರತದ ಹೊರಗಡೆ ಟೂರ್ನಿ ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿತ್ತು. 

ಆದರೆ ಅದನ್ನು ಅರಣ್‌ ಅಲ್ಲಗಳೆದಿದ್ದಾರೆ ಎನ್ನಲಾಗಿದೆ. ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಘೋಷಿಸಿದ ಬಳಿಕ ಐಪಿಎಲ್‌ ವೇಳಾಪಟ್ಟಿ ಸಿದ್ಧಪಡಿಸಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಅವರು ಮಾಧ್ಯಮವೊಂದಕ್ಕೆ ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.

ICC World Cup 2023: ಅಗ್ರಸ್ಥಾನಕ್ಕೆ ಭಾರತ vs ನ್ಯೂಜಿಲೆಂಡ್ ಸೆಣಸು..!

ಮುಷ್ತಾಕ್‌ ಅಲಿ ಟಿ20 ಟೂರ್ನಿ: ಡೆಲ್ಲಿಗೆ ಶರಣಾದ ಕರ್ನಾಟಕ!

ಡೆಹ್ರಾಡೂನ್‌: 2023-24ರ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ 2 ಬಾರಿ ಚಾಂಪಿಯನ್‌ ಕರ್ನಾಟಕಕ್ಕೆ ಶನಿವಾರ ಡೆಲ್ಲಿ ವಿರುದ್ಧ 8 ವಿಕೆಟ್‌ ಹೀನಾಯ ಸೋಲು ಎದುರಾಯಿತು. ಇದರೊಂದಿಗೆ ರಾಜ್ಯ ತಂಡ ‘ಇ’ ಗುಂಪಿನಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದು, ನಾಕೌಟ್‌ ಹಾದಿ ಕಠಿಣಗೊಂಡಿದೆ. 3ನೇ ಜಯ ದಾಖಲಿಸಿದ ಡೆಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 5 ವಿಕೆಟ್‌ಗೆ 136 ರನ್‌ ಗಳಿಸಲಷ್ಟೇ ಶಕ್ತವಾಯಿತು. ಅಭಿನವ್ ಮನೋಹರ್‌ 44, ಕೃಷ್ಣನ್‌ ಶ್ರೀಜಿತ್‌ 24 ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಹೋರಾಟ ಕಂಡು ಬರಲಿಲ್ಲ. ಪವರ್‌-ಪ್ಲೇನಲ್ಲೇ ಮುಗ್ಗರಿಸಿದ ರಾಜ್ಯ ತಂಡ ಅದರಿಂದ ಚೇತರಿಸಿಕೊಂಡು ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ವಿಫಲವಾಯಿತು.

World Cup 2023: ಹಾಲಿ ವಿಶ್ವಕಪ್‌ನ ಅತೀದೊಡ್ಡ ಗೆಲುವು ಕಂಡ ದಕ್ಷಿಣ ಆಫ್ರಿಕಾ, ವಿಶ್ವಚಾಂಪಿಯನ್‌ಗೆ ಮತ್ತೊಂದು ಸೋಲು!

ಸುಲಭ ಗುರಿಯನ್ನು ಡೆಲ್ಲಿ 16.5 ಓವರಲ್ಲೇ ಬೆನ್ನತ್ತಿ ಜಯಿಸಿತು. ಪ್ರಿಯಾನ್ಶ್‌ ಆರ್ಯ 51, ಅನುಜ್‌ ರಾವತ್‌ 38, ನಾಯಕ ಯಶ್‌ ಧುಳ್‌ 26 ರನ್‌ ಗಳಿಸಿದರು. 3 ಪಂದ್ಯದಲ್ಲಿ 1 ಪಂದ್ಯ ಮಾತ್ರ ಗೆದ್ದಿರುವ ರಾಜ್ಯ ತಂಡಕ್ಕೆ ಸೋಮವಾರ ನಾಗಲ್ಯಾಂಡ್‌ ಸವಾಲು ಎದುರಾಗಲಿದೆ.

ಕೊನೆಗೂ ಲಂಕಾಕ್ಕೆ ಗೆಲುವಿನ ಸಿಹಿ

ಲಖನೌ: ಹ್ಯಾಟ್ರಿಕ್‌ ಸೋಲಿನೊಂದಿಗೆ ಈ ಬಾರಿ ವಿಶ್ವಕಪ್‌ ಅಭಿಯಾನ ಆರಂಭಿಸಿದ್ದ ಶ್ರೀಲಂಕಾ ಕೊನೆಗೂ ಗೆಲುವಿನ ಸಿಹಿ ಕಂಡಿದೆ. ನಿರ್ಣಾಯಕ ಪಂದ್ಯದಲ್ಲಿ ಮಾಜಿ ಚಾಂಪಿಯನ್ನರಿಗೆ ಶನಿವಾರ ನೆದರ್‌ಲೆಂಡ್ಸ್‌ ವಿರುದ್ಧ 5 ವಿಕೆಟ್‌ ಜಯ ಲಭಿಸಿತು. ದ.ಆಫ್ರಿಕಾ ಬಳಿಕ ಲಂಕಾಕ್ಕೂ ಶಾಕ್‌ ನೀಡುವ ಡಚ್ ಪಡೆಯ ಕನಸು ನನಸಾಗಲಿಲ್ಲ. ಟೂರ್ನಿಯಲ್ಲಿ ತಂಡಕ್ಕೆ 3ನೇ ಸೋಲು ಎದುರಾಯಿತು.

ಇಸ್ಲಾಮಿಕ್ ದೇಶವಾದರೆ, ಮೋದಿ ಕೆಳಗಿಳಿದರೆ ಭಾರತ ತಂಡಕ್ಕೆ ಬೆಂಬಲ, ಉದ್ಧಟತನ ತೋರಿದ ಪಾಕ್ ನಟಿ!

ಮೊದಲು ಬ್ಯಾಟ್‌ ಮಾಡಿದ ಡಚ್‌ ಆರಂಭಿಕ ಆಘಾತದ ಹೊರತಾಗಿಯೂ 49.4 ಓವರ್‌ಗಳಲ್ಲಿ 262ಕ್ಕೆ ಆಲೌಟಾಯಿತು. ಸ್ಪರ್ಧಾತ್ಮಕ ಗುರಿಯನ್ನು ಲಂಕಾ 48.2 ಓವರ್‌ಗಳಲ್ಲಿ ಬೆನ್ನತ್ತಿತು. ಪವರ್‌ ಪ್ಲೇನಲ್ಲೇ 2 ವಿಕೆಟ್‌ ಕಳೆದುಕೊಂಡರೂ ಬಳಿಕ ಎಚ್ಚರಿಕೆ ಆಟವಾಡಿ ಲಂಕಾ ಗೆಲುವು ಒಲಿಸಿಕೊಂಡಿತು. ಸಮರವಿಕ್ರಮ ಔಟಾಗದೆ 91, ಪಥುಮ್‌ ನಿಸ್ಸಾಂಕ 54, ಚರಿತ್ ಅಸಲಂಕ 44 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರ್ಯನ್‌ ದತ್‌ 3 ವಿಕೆಟ್‌ ಕಿತ್ತರು.

ಪುಟಿದೆದ್ದ ಡಚ್‌: ಲಂಕಾ ವೇಗಿಗಳ ದಾಳಿಗೆ ತತ್ತರಿಸಿದ ಡಚ್‌ ಪಡೆ ಆರಂಭಿಕ ಆಘಾತಕ್ಕೊಳಗಾಯಿತು. 91ಕ್ಕೆ 6 ವಿಕೆಟ್‌ ಕಳೆದುಕೊಂಡ ಹೀನಾಯ ಸ್ಥಿತಿಯಲ್ಲಿತ್ತು. ಆದರೆ 7ನೇ ವಿಕೆಟ್‌ಗೆ ಜೊತೆಯಾದ ವ್ಯಾನ್‌ ಬೀಕ್‌-ಸೈಬ್ರಂಡ್‌ 130 ರನ್‌ ಜೊತೆಯಾಟವಾಡಿ, 150 ದಾಟುವುದೂ ಅನುಮಾನವೆನಿಸಿದ್ದ ತಂಡವನ್ನು 260ರ ಗಡಿ ತಲುಪಿಸಿದರು. ಸೈಬ್ರಂಡ್‌ 70, ಬೀಕ್‌ 59ಕ್ಕೆ ವಿಕೆಟ್‌ ಒಪ್ಪಿಸಿದರು. ಮಧುಶಂಕ ಹಾಗೂ ರಜಿತಾ ತಲಾ 4 ವಿಕೆಟ್‌ ಪಡೆದರು.

ಸ್ಕೋರ್‌: 
ನೆದರ್‌ಲೆಂಡ್ಸ್‌ 49.4 ಓವರಲ್ಲಿ 262/10(ಸೈಬ್ರಂಡ್ 70, ಬೀಕ್‌ 59, ಮಧುಶಂಕ 4-49, ರಜಿತಾ 4-50) 
ಶ್ರೀಲಂಕಾ48.2 ಓವರಲ್ಲಿ 263/5 (ಸಮರವಿಕ್ರಮ 91, ನಿಸ್ಸಾಂಕ 54, ಆರ್ಯನ್‌ 3-44) ಪಂದ್ಯಶ್ರೇಷ್ಠ: ಸಮರವಿಕ್ರಮ

ಶ್ರೀಲಂಕಾಕ್ಕೆ ಮುಂದಿನ ಪಂದ್ಯ

ಅ.26ಕ್ಕೆ ಇಂಗ್ಲೆಂಡ್‌ ವಿರುದ್ಧ, ಬೆಂಗಳೂರು

ನೆದರ್‌ಲೆಂಡ್ಸ್‌ಗೆ ಮುಂದಿನ ಪಂದ್ಯ

ಅ.25ಕ್ಕೆ ಆಸ್ಟ್ರೇಲಿಯಾ ವಿರುದ್ಧ, ನವದೆಹಲಿ