ಟಿ-20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ಗೆ ಮತ್ತೆ ಅದೃಷ್ಟ ಒಲಿದಿದೆ. ದೇಶಿಯ ಟೂರ್ನಿಗಳಲ್ಲಿ ನಾಯಕರಾಗಿ ಕಂಬ್ಯಾಕ್ ಮಾಡಿದ್ದು, ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ನೀಡಲು ಸುವರ್ಣ ಅವಕಾಶ ಸಿಕ್ಕಿದೆ.
ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಟಿ-20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ಗೆ ಮತ್ತೆ ಅದೃಷ್ಟ ಒಲಿದು ಬಂದಿದೆ. ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿರುವ ಅವರಿಗೆ ದೇಸಿಯ ಟೂರ್ನಿಗಳಲ್ಲಿ ಮಿಂಚಲು ಒಂದೊಳ್ಳೆ ಅವಕಾಶ ಸಿಕ್ಕಿದೆ.
ದೇಸಿಯ ಟೂರ್ನಿಗೆ ಮತ್ತೆ ನಾಯಕನಾಗಿ ಸೂರ್ಯ ಎಂಟ್ರಿ ಕೊಟ್ಟಿದ್ದು, ಸೈಯದ್ ಮುಷ್ತಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗೆ ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಈ ಟೂರ್ನಿಗಳಲ್ಲಿ ಸೂರ್ಯಕುಮಾರ್, ತಂಡದ ನಾಯಕರಾಗಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ ಆಯ್ಕೆ ಸಮಿತಿ ತಿಳಿಸಿದೆ.
ಎರಡು ಟೂರ್ನಿಗೆ ನಾಯಕತ್ವ
ಮಾಹಿತಿಗಳ ಪ್ರಕಾರ ಸೂರ್ಯಕುಮಾರ್ ಯಾದವ್ ಅವರು, ಈ ಋತುವಿನ ಎರಡು ವೈಟ್ಬಾಲ್ ಪಂದ್ಯಾವಳಿಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನೊಂದು ಅಚ್ಚರಿಯ ವಿಚಾರ ಏನೆಂದರೆ, ಇದೇ ಸೂರ್ಯ ಅವರನ್ನು ಕಳೆದ ತಿಂಗಳಿನಲ್ಲಿ ಮುಂಬೈ ರಣಜಿ ತಂಡದಿಂದ ಹೊರಗೆ ಇಡಲಾಗಿತ್ತು. ಇದು ಚರ್ಚೆಗೆ ಕಾರಣವಾಗಿತ್ತು. ಆಗ ಮುಂಬೈ ತಂಡದ ಮ್ಯಾನೇಜ್ಮೆಂಟ್ ಸೂರ್ಯಕುಮಾರ್ ಯಾದವ್ ಅವರು ಸಾಕಷ್ಟು ರೆಡ್ಬಾಲ್ ಪಂದ್ಯಗಳನ್ನ ಆಡಿರಲಿಲ್ಲ. ಅವರಿಗೆ ಅನುಭವದ ಕೊರತೆ ಇದೆ ಎಂದಿದ್ದರು.
ಮುಂಬೈ ತಂಡವು ಸೈಯದ್ ಮುಸ್ತಾಕ್ ಅಲಿ ಟ್ರೋಫಿ ಅಭಿಯಾನವನ್ನು ನವೆಂಬರ್ 14 ರಿಂದ ಕೋಲ್ಕತ್ತಾದಲ್ಲಿ ಆರಂಭಿಸಲಿದೆ. ಎಲೈಟ್ ಗ್ರೂಪ್ ಡಿನಲ್ಲಿ ಮುಂಬೈ, ಹೈದರಾಬಾದ್, ಛತ್ತೀಸ್ಗಢ, ಗೋವಾ, ಗುಜರಾತ್, ಒಡಿಶಾ, ಉತ್ತರಾಖಂಡ್ ಮತ್ತು ವಿದರ್ಭ ತಂಡಗಳು ಸೇರಿವೆ. ಮುಂಬೈ ತಂಡವು ನವೆಂಬರ್ 7 ಮತ್ತು 9 ರಂದು ಅಭ್ಯಾಸ ಪಂದ್ಯ ನಡೆಸಲಿದೆ. ನವೆಂಬರ್ 11 ಎಂದು ಮುಂಬೈ ತಂಡ ಕೋಲ್ಕತ್ತಾಗೆ ತೆರಳಲಿದೆ.
ಟೀಂ ಇಂಡಿಯಾದ ಟಿ-20 ತಂಡದ ನಾಯಕತ್ವ ಕಳೆದುಕೊಂಡ ಬಳಿಕ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ತುಂಬಾನೇ ಮುಖ್ಯವಾದ ಟೂರ್ನಿ ಆಗಿರಲಿದೆ. ಸೂರ್ಯ ಅವರ ಕ್ರಿಕೆಟ್ ಭವಿಷ್ಯ ಕೂಡ ಈ ಎರಡು ಟೂರ್ನಿಗಳಲ್ಲಿ ನಿಂತಿರಲಿದೆ. ಸೂರ್ಯ ಅವರು ಅದ್ಭುತವಾಗಿ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಕೊಟ್ಟರೆ, ಅವರಿಗೆ ಮತ್ತೆ ಭಾರತ ತಂಡದ ಡೋರ್ ತೆರೆದರೂ ಅಚ್ಚರಿ ಇಲ್ಲ.
ಸೂರ್ಯ ಕುಮಾರ್ ಯಾದವ್ ಅವರಿಗೆ ಸಿಕ್ಕಿರುವ ವೈಟ್ ಬಾಲ್ ನಾಯಕತ್ವವು ಹೊಸ ಆರಂಭವನ್ನು ಸೂಚಿಸುತ್ತದೆ. ಮುಂಬೈ ತಂಡವು ಅವರಿಂದ ಸೈಯದ್ ಮುಷ್ತಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿಯನ್ನ ಎತ್ತಿ ಹಿಡಿಯುವ ಕನಸು ಕಾಣ್ತಿದೆ. ಈ ದೊಡ್ಡ ಜವಾಬ್ದಾರಿ ಸೂರ್ಯಕುಮಾರ್ ಯಾದವ್ ಹೆಗಲ ಮೇಲಿದೆ.
ಟೀಂ ಇಂಡಿಯಾದ ನಾಯಕರಾಗಿ ಸೂರ್ಯ ಅವರು ಒಟ್ಟು 52 ಪಂದ್ಯಗಳನ್ನ ಮುನ್ನಡೆಸಿದ್ದಾರೆ. ಅದರಲ್ಲಿ 40 ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. 8 ಪಂದ್ಯಗಳಲ್ಲಿ ಸೋಲನ್ನು ಕಂಡರೆ, ನಾಲ್ಕು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಇನ್ನು ಸೂರ್ಯ ಅವರು ಟೀಂ ಇಂಡಿಯಾ ಪರ ಒಂದು ಟೆಸ್ಟ್ ಪಂದ್ಯವನ್ನ ಮಾತ್ರ ಆಡಿದ್ದಾರೆ. ಕೇವಲ ಒಂದು ಇನ್ನಿಂಗ್ಸ್ ಆಡಿ 8 ರನ್ಗಳಿಇದ್ದಾರೆ. ಇನ್ನು, 37 ಏಕದಿನ ಪಂದ್ಯಗಳನ್ನ ಆಡಿರುವ ಅವರು, 773 ರನ್ಗಳಿಸಿದ್ದಾರೆ. ಇನ್ನು 113 ಟಿ20 ಪಂದ್ಯಗಳನ್ನ ಆಡಿ 3272 ರನ್ಗಳಿಸಿದ್ದಾರೆ.






