ಆರ್‌ಸಿಬಿ ತಂಡದ ಸಹ ಮಾಲಕಿ ಅನನ್ಯಾ ಬಿರ್ಲಾ ಮನೆ ಐಷಾರಾಮಿ ಅರಮನೆಯನ್ನೇ ಮೀರಿಸುವಂತಿದೆ. ಈ ಬಂಗಲೆ ಮೌಲ್ಯ ಬರೋಬ್ಬರಿ 425 ಕೋಟಿ ರೂಪಾಯಿ. ಈ ಐಷಾರಾಮಿ ಮನೆಯಲ್ಲಿ ಏನಿದೆ? ಇಲ್ಲಿದೆ ಹೋಮ್ ಟೂರ್.

ಮುಂಬೈ (ನ.17) ಆರ್‌ಸಿಬಿ ತಂಡವನ್ನು ಬರೋಬ್ಬರಿ 16,600 ಕೋಟಿ ರೂಪಾಯಿಗೆ ಖರೀದಿಸಿದ ಮಾಲಕರ ಪೈಕಿ ಅನನ್ಯ ಬಿರ್ಲಾ ಪ್ರಮುಖ ಪಾಲುದಾರರಾಗಿದ್ದಾರೆ. ಭಾರತದ ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಪುತ್ರಿ ಅನನ್ಯಾ ಬಿರ್ಲಾ ಹಲವು ಉದ್ಯಮ ನಡೆಸುತ್ತಿದ್ದಾರೆ. ಉದ್ಯಮ, ಸಿನಿಮಾ, ಮ್ಯೂಸಿಕ್ ಹೀಗೆ ಹಲವು ಕ್ಷೇತ್ರದಲ್ಲಿ ಅನನ್ಯಾ ಬಿರ್ಲಾ ಆರ್‌ಸಿಬಿ ಖರೀದಿಯೊಂದಿಗೆ ಕ್ರಿಕೆಟ್ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ವಿಶೇಷ ಅಂದರೆ ಅನನ್ಯಾ ಬಿರ್ಲಾ ಮುಂಬೈನ ಬಂಗಲೆ ಅರಮನೆಯನ್ನೇ ಮೀರಿಸುವಂತಿದೆ. ಇದರ ಮೌಲ್ಯ ಬರೋಬ್ಬರಿ 425 ಕೋಟಿ ರೂಪಾಯಿ ಅಲ್ಲ.

2018ರಲ್ಲಿ ಖರೀದಿಸಿದ ಮನೆ

ಅನನ್ಯಾ ಬಿರ್ಲಾ ತಂದೆ ಕುಮಾರ ಮಂಗಲಂ ಬಿರ್ಲಾ 2018ರಲ್ಲಿ ಈ ಮನೆಯನ್ನು ಖರೀದಿಸಿದ್ದಾರೆ. 2018ರಲ್ಲಿ ಈ ಮನೆಗೆ ಬರೋಬ್ಬರಿ 425 ಕೋಟಿ ರೂಪಾಯಿ ನೀಡಿದ್ದಾರೆ. ಸದ್ಯ ರಿಯಲ್ ಎಸ್ಟೇಟ್ ವರದಿ ಪ್ರಕಾರ ಈ ಮನೆಯ ಬೆಲೆ ಸರಿಸುಮಾರು 800 ರಿಂದ 900 ಕೋಟಿ ರೂಪಾಯಿ. ಮುಂಬೈನಲ್ಲಿರುವ ಅತ್ಯಂತ ದುಬಾರಿ ಮನೆಗಳಲ್ಲಿ ಇದು ಒಂದು. ಈ ಮನೆಯಲ್ಲಿ ಅನನ್ಯಾ ಬಿರ್ಲಾ ತಮ್ಮ ಪೋಷಕರು ಹಾಗೂ ಕುಟುಂಬಸ್ಥರ ಜೊತೆಗಿದ್ದಾರೆ.

ಬ್ರಿಟಿಷ್ ಅರಮನೆ ನೆನಪಿಸುವ ಸೌಂದರ್ಯ

ಅನನ್ಯ ಬಿರ್ಲಾ ಮುಂಬೈನಲ್ಲಿರುವ ಮನೆ ಬಹುಮಡಿ ಮನೆಯಾಗಿದೆ. ಇದು ಅಕ್ಷರಶಃ ಬಂಗಲೆ. ಬಾಲಿವುಡ್ ನಿರ್ದೇಶಕ ಫರಾ ಖಾನ್ ಹೋಮ್ ಮಾಡಿದ ಹೋಮ್ ಟೂರ್‌ನಲ್ಲಿ ಅನನ್ಯಾ ಬಿರ್ಲಾ ಮನೆ ತೋರಿಸಲಾಗಿದೆ. ಆಕರ್ಷಕ ಐವೊರಿ ಬಣ್ಣದಿಂದ ಕಂಗೊಳಿಸುವ ಈ ಬಂಗಲೆಗೆ ಪ್ರವೇಶಿಸುವಾಗ ಸುತ್ತ ಮುತ್ತ ಹಸಿರು ತೋಟಗಳು ಕಂಗೊಳಿಸುತ್ತಿದೆ. ಮರ ಗಿಡಿಗಳು ಬಂಗಲೆ ಮೆರುಗು ಮತ್ತಷ್ಟು ಹೆಚ್ಚಿಸಿದೆ.

ಬಂಗಲೆಯ ಪ್ರವೇಶ ದ್ವಾರ, ನೆಲಮಹಡಿ, ಪ್ರತಿ ಕೋಣೆಯಲ್ಲೂ ಐಷಾರಾಮಿತನ ಎದ್ದು ಕಾಣುತ್ತದೆ. ವಿಶಾಲವಾದ ಲಾಬಿ, ಮಾರ್ಬಲ್‌ನಿಂದ ಅಲಂಕೃತಗೊಂಡಿರುವ ಕಂಬಗಳು, ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವ ಫರ್ನೀಚರ್, ಕಾರ್ಪೆಟ್, ಪ್ರವೇಶ ದ್ವಾರದಲ್ಲಿರುವ ಗಣೇಶನ ವಿಗ್ರಹ ಮನೆಯ ಒಳಾಂಗಣದ ಶ್ರೀಮಂತಿಕೆ ಹೆಚ್ಚಿಸಿದೆ. ಈ ಮನೆ ಸಿನಿಮಾ ಸೆಟ್‌ನಂತೆ ಕಾಣುತ್ತದೆ. ಅತೀ ದುಬಾರಿ ಹಾಗೂ ಅತ್ಯಂತ ವಿಶೇಷ ಇಂಟಿಯರ್ ಇರುವ ಬಂಗಲೆ ಮೊದಲ ನೋಟದಲ್ಲಿ ಎಲ್ಲರನ್ನು ಆಕರ್ಷಿಸುತ್ತದೆ.

ಬ್ರಿಟಿಷ್ ಬಂಗಲೆ ಶೈಲಿಯ ಗಾರ್ಡನ್

ಮನೆಯ ಸುತ್ತ ಮುತ್ತ ಗಾರ್ಡನ್ ಇದೆ. ವಿಶೇಷ ಅಂದರೆ ವಿಕ್ಟೋರಿಯನ್ ಶೈಲಿಯಲ್ಲಿ ಈ ಗಾರ್ಡನ್ ನಿರ್ವಹಣೆ ಮಾಡಲಾಗಿದೆ. ಗಾರ್ಡನ್‌ನಲ್ಲಿ ಹಲವು ಕೆತ್ತನೆಗಳು, ವಿಶ್ರಾಂತಿ ಸ್ಥಳಗಳು, ಕಮಾನುಗಳಿವೆ. ಇನ್ನು ಕುಟುಂಬದ ಕಾರ್ಯಕ್ರಮ ಸೇರಿದಂತೆ ಹಲವು ಸಮಾರಂಭಗಳಿಗೆ ಗಾರ್ಡನ್‌ ಉತ್ತಮ ಆಯ್ಕೆಯಾಗಿದೆ. ಕುಮಾರ ಮಂಗಲಂ ಬಿರ್ಲಾ ಮನೆಯಲ್ಲಿ ಹಬ್ಬವನ್ನು ಇಲ್ಲೇ ಆಚರಿಸುತ್ತದೆ. ಬಿಡುವಿನ ವೇಳೆಯಲ್ಲಿ ಗಾರ್ಡನ್‌ನಲ್ಲಿ ಕಾಲ ಕಳೆಯುತ್ತದೆ.

ಅನನ್ಯಾ ಬಿರ್ಲಾ ಭಾರತದ ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕುಮಾರ ಮಂಗಲಂ ಬಿರ್ಲಾ ಪುತ್ರಿಯಾಗಿರುವ ಅನನ್ಯಾ, ಬಿರ್ಲಾ ಕುಟುಂಬದ ಆರನೇ ತಲೆಮಾರಿನ ಕುಡಿಯಾಗಿದ್ದಾರೆ.