ಐಪಿಎಲ್ 2027ರ ಟೂರ್ನಿಗೆ ಮಹತ್ವದ ಘೋಷಣೆಯಾಗಿದೆ. ಜೇಕಬ್ ಬೆಥೆಲ್ ಸೇರಿದಂತೆ 6 ಕ್ರಿಕೆಟಿಗರನ್ನು ತಂಡದಿಂದ ಕೈಬಿಡಲಾಗಿದೆ. ಹಾಗಾದರೆ ತಂಡದಲ್ಲಿ ಉಳಿದುಕೊಂಡ ಆರ್‌ಸಿಬಿ ಪ್ಲೇಯರ್ಸ್ ಯಾರೆಲ್ಲಾ?

ಬೆಂಗಳೂರು (ನ.17) ಐಪಿಎಲ್ 2027ರ ಐಪಿಎಲ್ ಟೂರ್ನಿ ಹರಾಜಿಗೂ ಮುನ್ನ ಆರ್‌ಸಿಬಿ ರಿಟೇನ್ ಹಾಗೂ ರಿಲೀಸ್ ಆಟಗಾರರ ಪಟ್ಟಿ ಪ್ರಕಟಿಸಿದೆ. ಮೂರನೇ ಬಾರಿ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ ಒಟ್ಟು 6 ಕ್ರಿಕೆಟಿಗರನ್ನು ತಂಡದಿಂದ ಕೈಬಿಟ್ಟಿದೆ. ಒಂದು ಬಾರಿ ಆರ್‌ಸಿಬಿಯನ್ ಆದರೆ ಎಂದೆಂದಿಗೂ ಆರ್‌ಸಿಬಿಯನ್ ಎಂದು ಫ್ರಾಂಚೈಸಿ 6 ಕ್ರಿಕೆಟಿಗರಿಗೆ ಗೌರವ ನೀಡಿದೆ. ಇತ್ತ ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಸೇರಿದಂತೆ 20 ಕ್ರಿಕೆಟಿಗರ ರಿಟೇನ್ ಮಾಡಿಕೊಳ್ಳಲಾಗಿದೆ.

ಆರ್‌‍ಸಿಬಿ ತಂಡದಿಂದ ರಿಲೀಸ್ ಆದ ಕ್ರಿಕೆಟಿಗರ ಪಟ್ಟಿ

  • ಜೇಕಬ್ ಬೆಥಲ್
  • ಸ್ಪಪ್ನಿಲ್ ಸಿಂಗ್
  • ವಿಹಾನ್ ಮಲ್ಹೋತ್ರ
  • ಮಂಗೇಶ್ ಯಾದವ್
  • ಸಾತ್ವಿಕ್ ದೆಸ್ವಾಲ್
  • ರಿಚರ್ಡ್ ಗ್ಲೀಸನ್

14.15 ಕೋಟಿ ರೂಪಾಯಿಯಲ್ಲಿ ಹರಾಜು

ಆರ್‌ಸಿಬಿ ಒಟ್ಟು 6 ಕ್ರಿಕೆಟಿಗರ ರಿಲೀಸ್ ಮಾಡಿದೆ. ಈ ಮೂಲಕ ಆರ್‌ಸಿಬಿ ಬಳಿಕ ಇದೀಗ 14.15 ಕೋಟಿ ರೂಪಾಯಿ ಉಳಿದಿಕೊಂಡಿದೆ. ಮುಂಬರುವ ಹರಾಜಿನಲ್ಲಿ ಆರ್‌ಸಿಬಿ ಈ ಮೊತ್ತದಲ್ಲಿ ಆಟಗಾರರ ಖರೀದಿಸಬೇಕಿದೆ. ಈ ಪೈಕಿ ಒಬ್ಬ ವಿದೇಶಿ ಆಟಗಾರನ ಖರೀದಿಗೆ ಮಾತ್ರ ಅವಕಾಶವಿದೆ. ರಿಲೀಸ್ ಮಾಡಿದ ಕ್ರಿಕೆಟಿಗರ ಪೈಕಿ ಗರಿಷ್ಠ ಮೊತ್ತದ ಕ್ರಿಕೆಟಿಗ ಮಂಗೇಶ್ ಯಾದವ್. ಕಳೆದ ಹರಾಜಿನಲ್ಲಿ ಮಂಗೇಶ್ ಯಾದವ್ ಅವರನ್ನು 5.2 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿತ್ತು.

ಆರ್‌ಸಿಬಿ ತಂಡದಲ್ಲಿ ಉಳಿದುಕೊಂಡ ಕ್ರಿಕೆಟಿಗರು

ರಜತ್ ಪಾಟೀದಾರ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಜಿತೇಶ್ ಶರ್ಮಾ, ಕ್ರುನಾಲ್ ಪಾಂಡ್ಯ, ಜೋಶ್ ಹೇಜಲ್‌ವುಡ್, ಫಿಲ್ ಸಾಲ್ಟ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ದೇವತದ್ ಪಡಿಕ್ಕಲ್ ನುವಾನ್ ತುಷಾರ, ವೆಂಕಟೇಶ್ ಅಯ್ಯರ್, ಜೇಕಬ್ ಡುಫಿ, ಜೋರ್ಡನ್ ಕಾಕ್ಸ್, ರಸಿಕ್ ಸಲಾಮ್ ಧರ್, ಸುಯೇಶ್ ಶರ್ಮಾ, ವಿಕಿ ಒಟ್ಸಾವಾಲ್, ಅಭಿನಂದನ್ ಸಿಂಗ್, ಕಾನಿಶ್ಕ್ ಚೌಹ್ವಾಣ್, ಯಶ್ ದಯಾಳ್

ಕೋರ್ ಟೀಂ ಉಳಿಸಿಕೊಂಡ ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ವಿನ್ನಿಂಗ್ ಕೋರ್ ಟೀಂ ಉಳಿಸಿ ಕೊಂಡಿದೆ. ನಾಯಕ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್ ಸೇರಿದಂತೆ ಆರ್‌ಸಿಬಿ ವಿನ್ನಿಂಗ್ ಟೀಂ ಉಳಿಸಿಕೊಂಡಿದೆ. ಇತ್ತ ಐಪಿಎಲ್ ಟ್ರೇಡ್‌ನಿಂದಲೂ ಆರ್‌ಸಿಬಿ ದೂರ ಉಳಿದಿಕೊಂಡಿದೆ. ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಸೇರಿದಂತೆ ಪ್ರಮುಖ ತಂಡಗಳು ಟ್ರೇಡ್ ಮೂಲಕ ಆಟಗಾರರ ಸೇರಿಸಿಕೊಂಡಿತ್ತು.