ಇಂದಿನಿಂದ ಏಕದಿನ ವಿಶ್ವಕಪ್ ಸೆಮಿ, ಫೈನಲ್ ಟಿಕೆಟ್ ಮಾರಾಟ..!
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 05ರಿಂದ ಆರಂಭ
ಇಂದು ಸೆಮಿಫೈನಲ್, ಫೈನಲ್ ಪಂದ್ಯದ ಟಿಕೆಟ್ ಮಾರಾಟ
ನವೆಂಬರ್ 19ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ
ಅಹಮದಾಬಾದ್(ಸೆ.15): ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 2 ಸೆಮಿಫೈನಲ್ ಪಂದ್ಯಗಳು ಹಾಗೂ ಫೈನಲ್ ಪಂದ್ಯದ ಟಿಕೆಟ್ ಮಾರಾಟ ಶುಕ್ರವಾರ ಆರಂಭಗೊಳ್ಳಲಿದ್ದು, ಕೆಲವೇ ಗಂಟೆಗಳಲ್ಲಿ ಸೋಲ್ಡೌಟ್ ಆಗುವ ಸಾಧ್ಯತೆಯಿದೆ. ಟೂರ್ನಿಯ ಮೊದಲ ಸೆಮೀಸ್ ನ.15ರಂದು ಮುಂಬೈನ ವಾಂಖೇಡೆ ಹಾಗೂ 2ನೇ ಸೆಮೀಸ್ ನ.16ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಿಗದಿಯಾಗಿದೆ. ಫೈನಲ್ ಪಂದ್ಯ ನ.19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈಗಾಗಲೇ ಟೂರ್ನಿಯ ಲೀಗ್ ಹಂತದ ಪಂದ್ಯಗಳ ಟಿಕೆಟ್ ಮಾರಾಟ ಬಹುತೇಕ ಪೂರ್ಣಗೊಂಡಿದೆ. ಕೆಲ ಪಂದ್ಯಗಳ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಆದರೆ ಎಲ್ಲಾ ಪಂದ್ಯಗಳ ಟಿಕೆಟ್ ಪಡೆದುಕೊಳ್ಳಲೂ ಪ್ರೇಕ್ಷಕರು ಹರಸಾಹಸ ಪಟ್ಟಿದ್ದು, ಟಿಕೆಟ್ ಮಾರಾಟ ಅವ್ಯವಸ್ಥೆಗೆ ಬಿಸಿಸಿಐ ಹಾಗೂ ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಮೀಸ್, ಫೈನಲ್ ಪಂದ್ಯದ ಟಿಕೆಟ್‌ಗೂ ಇದೇ ಸಮಸ್ಯೆ ಮುಂದುವರಿದರೆ ಅಚ್ಚರಿಯಿಲ್ಲ.
Asia Cup 2023 'ಟೀಂ ಇಂಡಿಯಾ ಮ್ಯಾಚ್ ಫಿಕ್ಸ್ ಮಾಡಿದೆ' ಎಂದ ಪಾಕ್ ಫ್ಯಾನ್ಸ್; ಅಖ್ತರ್ ಕೊಟ್ರು ಅಲ್ಟಿಮೇಟ್ ರಿಪ್ಲೇ..!
ಏಷ್ಯಾಕಪ್ 2023: ಪಾಕಿಸ್ತಾನ-ಶ್ರೀಲಂಕಾ ಪಂದ್ಯಕ್ಕೂ ಮಳೆ ಕಾಟ!
ಕೊಲಂಬೊ: ಈ ಬಾರಿ ಏಷ್ಯಾಕಪ್‌ನ ಬಹುತೇಕ ಪಂದ್ಯಗಳಿಗೆ ಅಡ್ಡಿಪಡಿಸುತ್ತಿರುವ ಮಳೆ, ಗುರುವಾರ ಸೂಪರ್-4ನ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಮಹತ್ವದ ಹಣಾಹಣಿಗೂ ಕಾಟ ಕೊಟ್ಟಿತು. ಗುರುವಾರ ಬೆಳಗ್ಗಿನಿಂದಲೇ ಮಳೆ ಸುರಿದ ಕಾರಣ, ಟಾಸ್ ಕೂಡಾ ಬರೋಬ್ಬರಿ ಎರಡೂವರೆ ಗಂಟೆ ವಿಳಂಬವಾಯಿತು. ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಸಂಜೆ 5.15ಕ್ಕೆ ಶುರುವಾಯಿತು. ಹೀಗಾಗಿ ತಲಾ 5 ಓವರ್ ಕಡಿತ ಮಾಡಿ, 45 ಓವರ್‌ಗಳ ಆಟ ನಿಗದಿಪಡಿಸಲಾಯಿತು. ಬಳಿಕ ಪಾಕ್ ಇನ್ನಿಂಗ್ಸ್‌ನ 28ನೇ ಓವರ್ ವೇಳೆ ಮತ್ತೆ ಮಳೆ ಸುರಿದ ಕಾರಣ ಕೆಲ ಕಾಲ ಆಟ ಸ್ಥಗಿತಗೊಂಡಿತು. 20 ನಿಮಿಷಗಳ ಬಳಿಕ ಆಟ ಪುನಾರಂಭವಾದಾಗ ಪಂದ್ಯವನ್ನು ತಲಾ 42 ಓವರ್‌ಗಳಿಗೆ ಇಳಿಸಲಾಯಿತು.
Asia Cup 2023 ಪಾಕ್ ಹೃದಯ ಭಗ್ನ, ರೋಚಕವಾಗಿ ಫೈನಲ್‌ಗೆ ಲಗ್ಗೆಯಿಟ್ಟ ಲಂಕಾ..!
ಕೊಲಂಬೊದಲ್ಲಿ ಮಳೆ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣವಿಲ್ಲ. ಭಾನುವಾರದ ಫೈನಲ್‌ಗೂ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾ ಬ್ಯಾಟರ್ಸ್‌ಗೆ ಇನ್ನು ನೆಕ್ ಗಾರ್ಡ್ ಕಡ್ಡಾಯ
ಸಿಡ್ನಿ: ಸುರಕ್ಷತೆ ದೃಷ್ಟಿಯಿಂದ ಇನ್ನು ಮುಂದೆ ಅಂತಾರಾಷ್ಟ್ರೀಯ ಮತ್ತು ದೇಸಿ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಎಲ್ಲಾ ಬ್ಯಾಟರ್‌ಗಳಿಗೆ ನೆಕ್ ಗಾರ್ಡ್ (ಕುತ್ತಿಗೆಗೆ ರಕ್ಷಣೆ ಒದಗಿಸುವ ಪರಿಕರ) ಇರುವ ಹೆಲ್ಮೆಟ್ ಕಡ್ಡಾಯಗೊಳಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಆದೇಶಿಸಿದೆ. ಅ.1ರಿಂದ ನಡೆಯಲಿರುವ ಎಲ್ಲಾ ಅಂ.ರಾ. ಹಾಗೂ ದೇಸಿ ಪಂದ್ಯಗಳಲ್ಲಿ ವೇಗಿಗಳನ್ನು ಎದುರಿಸುವಾಗ ಬ್ಯಾಟರ್‌ಗಳು ಕಡ್ಡಾಯವಾಗಿ ನೆಕ್ ಗಾರ್ಡ್ ಇರುವ ಹೆಟ್ಮೆಟ್ ಧರಿಸಬೇಕೆಂದು ನಿರ್ದೇಶಿಸಿದೆ. ಈ ಮೊದಲು 2014ರಲ್ಲಿ ತಲೆಗೆ ಬೌನ್ಸರ್ ಬಡಿದು ಆಸೀಸ್ ಬ್ಯಾಟರ್ ಫಿಲ್ ಹ್ಯೂಸ್ ಮೃತಪಟ್ಟಿದ್ದರು. ಅಲ್ಲದೆ ಇತ್ತೀಚೆಗೆ ದ.ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಕ್ಯಾಮರೂನ್ ಗ್ರೀನ್ ತಲೆಗೆ ಬಾಲ್ ಬಡಿದಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಈ ನಿಯಮ ಜಾರಿಗೊಳಿಸಿದೆ.