Asia Cup 2023 'ಟೀಂ ಇಂಡಿಯಾ ಮ್ಯಾಚ್ ಫಿಕ್ಸ್ ಮಾಡಿದೆ' ಎಂದ ಪಾಕ್ ಫ್ಯಾನ್ಸ್; ಅಖ್ತರ್ ಕೊಟ್ರು ಅಲ್ಟಿಮೇಟ್ ರಿಪ್ಲೇ..!
ಶ್ರೀಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ, ಶ್ರೀಲಂಕಾ ಎದುರು ಕೇವಲ 213 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಿದ್ದೂ ಈ ಸಾಧಾರಣ ಗುರಿ ಬೆನ್ನತ್ತಲು ಶ್ರೀಲಂಕಾ ತಂಡವು ವಿಫಲವಾಯಿತು. ಇದರ ಬೆನ್ನಲ್ಲೇ ಪಾಕಿಸ್ತಾನದ ಹಲವು ಕ್ರಿಕೆಟ್ ಅಭಿಮಾನಿಗಳು, ಭಾರತ ಈ ಪಂದ್ಯವನ್ನು ಮ್ಯಾಚ್ ಫಿಕ್ಸಿಂಗ್ ಮಾಡಿ ಗೆದ್ದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ರೋಧನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಸೆ.14): ಭಾರತ ಕ್ರಿಕೆಟ್ ತಂಡ 2023ರ ಏಷ್ಯಾಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಸೂಪರ್ 4 ಹಂತದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಎದುರು ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸುವ ಮೂಲಕ ಏಷ್ಯಾಕಪ್ ಫೈನಲ್‌ಗೆ ಪ್ರವೇಶ ಪಡೆದಿದೆ.
ಶ್ರೀಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ, ಶ್ರೀಲಂಕಾ ಎದುರು ಕೇವಲ 213 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಿದ್ದೂ ಈ ಸಾಧಾರಣ ಗುರಿ ಬೆನ್ನತ್ತಲು ಶ್ರೀಲಂಕಾ ತಂಡವು ವಿಫಲವಾಯಿತು. ಇದರ ಬೆನ್ನಲ್ಲೇ ಪಾಕಿಸ್ತಾನದ ಹಲವು ಕ್ರಿಕೆಟ್ ಅಭಿಮಾನಿಗಳು, ಭಾರತ ಈ ಪಂದ್ಯವನ್ನು ಮ್ಯಾಚ್ ಫಿಕ್ಸಿಂಗ್ ಮಾಡಿ ಗೆದ್ದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ರೋಧನೆ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ಎದುರು ಭಾರತ ಬೇಕಂತಲೇ ಸೋಲುವ ಯತ್ನ ನಡೆಸಿತು ಎನ್ನುವ ಪಾಕ್ ಫ್ಯಾನ್ಸ್ ಆರೋಪಕ್ಕೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.
ನಿವೃತ್ತಿ ಹಿಂಪಡೆದು 182 ರನ್ ಸಿಡಿಸಿ ಅಬ್ಬರಿಸಿದ ಬೆನ್ ಸ್ಟೋಕ್ಸ್..! ವಿಶ್ವಕಪ್ ಹೀರೋನಿಂದ ಖಡಕ್ ವಾರ್ನಿಂಗ್
"ನೀವು ಏನು ಮಾಡುತ್ತಿದ್ದೀರೋ ಗೊತ್ತಿಲ್ಲ. ಭಾರತ ಕ್ರಿಕೆಟ್ ತಂಡವು ಮ್ಯಾಚ್ ಫಿಕ್ಸ್ ಮಾಡಿದೆ ಎನ್ನುವ ಮೀಮ್ಸ್ ಹಾಗೂ ಮೆಸೇಜ್‌ಗಳು ಸಾಕಷ್ಟು ಹರಿದಾಡುತ್ತಿವೆ. ಪಾಕಿಸ್ತಾನವನ್ನು ಏಷ್ಯಾಕಪ್ ಫೈನಲ್ ರೇಸ್‌ನಿಂದ ಹೊರದಬ್ಬಲು ಶ್ರೀಲಂಕಾ ತಂಡದ ಎದುರು ಭಾರತ ಉದ್ದೇಶಪೂರ್ವಕವಾಗಿಯೇ ಸೋಲು ಅನುಭವಿಸಲು ಪ್ರಯತ್ನಿಸುತ್ತಿದೆ ಎನ್ನುವ ನಿಮ್ಮ ಮಾತು ಸರಿನಾ? ಶ್ರೀಲಂಕಾದವರು ಅದ್ಭುತವಾಗಿ ಬೌಲಿಂಗ್ ಮಾಡಿದರು. ವೆಲ್ಲಾಲಗೆ ಮತ್ತು ಅಸಲಂಕಾ ಮಿಂಚಿನ ದಾಳಿ ನಡೆಸಿದರು. ನೀವೇ ನೋಡಿ 20 ವರ್ಷದ ಹುಡುಗ 5 ವಿಕೆಟ್ ಕಬಳಿಸಿದ್ದು ಮಾತ್ರವಲ್ಲದೇ 43 ರನ್ ಬಾರಿಸಿದ. ನನಗೆ ಭಾರತ ಸೇರಿದಂತೆ ವಿವಿಧ ದೇಶಗಳಿಂದ ಫೋನ್ ಕರೆಗಳು ಬಂದವು, ಅವರೆಲ್ಲರೂ ಕೇಳಿದ್ದೂ ಭಾರತ ಬೇಕಂತಲೇ ಸೋಲಲು ಪ್ರಯತ್ನಿಸಿತು ಎಂದು ಹೇಳಿದ್ದಾರೆ.
"ಅಷ್ಟಕ್ಕೂ ಭಾರತ ಯಾಕೆ ಸೋಲಲು ಇಷ್ಟಪಡುತ್ತದೇ ನೀವೇ ಹೇಳಿ?. ಗೆದ್ದರೇ ಫೈನಲ್ ಪ್ರವೇಶಿಸುವ ಅವಕಾಶವಿದ್ದಾಗ ಸೋಲಲು ಯಾರು ತಯಾರಿರುವುದಿಲ್ಲ. ಸುಮ್ಮನೇ ಯಾವುದೇ ಕಾರಣವಿಲ್ಲದೇ ಮೀಮ್ಸ್ ಮಾಡುವುದರಲ್ಲಿ ಅರ್ಥವಿಲ್ಲ. ಭಾರತ ತಂಡವು ಲಂಕಾ ಎದುರು ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿತು. ಕುಲ್ದೀಪ್ ಯಾದವ್ ಚೆನ್ನಾಗಿ ಆಡಿದರು. ಸಣ್ಣ ಮೊತ್ತವನ್ನು ರಕ್ಷಿಸಿಕೊಳ್ಳಲು ಬುಮ್ರಾ ಸೇರಿದಂತೆ ಬೌಲರ್‌ಗಳ ಪ್ರಯತ್ನ ಶ್ಲಾಘನೀಯ ಎಂದು ಅಖ್ತರ್ ಹೇಳಿದ್ದಾರೆ.
ಟೀಂ ಇಂಡಿಯಾ ಎದುರು ಸೋಲಿನ ಬೆನ್ನಲ್ಲೇ ಪಾಕ್‌ಗೆ ಡಬಲ್ ಶಾಕ್..! ಸ್ಟಾರ್ ಕ್ರಿಕೆಟಿಗ ಏಷ್ಯಾಕಪ್‌ನಿಂದ ಔಟ್
ಮಳೆಗೆ ರದ್ದಾದರೆ ಲಂಕಾ ಫೈನಲ್‌ಗೆ
ಗುರುವಾರದ ಲಂಕಾ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ ಇದೆ. ಆದರೆ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದುಗೊಂಡರೆ ನೆಟ್ ರನ್‌ರೇಟ್ ಆಧಾರದಲ್ಲಿ ಲಂಕಾ ಫೈನಲ್‌ಗೇರಲಿದ್ದು, ಭಾರತ ವಿರುದ್ಧ ಸೆಣಸಾಡಲಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಲಂಕಾ ಸದ್ಯ -0.200 ರನ್‌ರೇಟ್ ಹೊಂದಿದ್ದು, ಪಾಕಿಸ್ತಾನ(-1.892)ಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ. ಫೈನಲ್ ಪಂದ್ಯ ಭಾನುವಾರ ನಿಗದಿಯಾಗಿದೆ.