ಶೇನ್ ವಾರ್ನ್ ‘ಬ್ಯಾಗಿ ಗ್ರೀನ್’ ಕ್ಯಾಪ್‌ಗೆ ಸಿಕ್ಕಾಪಟ್ಟೆ ಬೇಡಿಕೆ!
ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆ ನೆರವಾಗಲು ಶೇನ್ ವಾರ್ನ್ ತಮ್ಮ ’ಬ್ಯಾಗಿ ಗ್ರೀನ್’ ಕ್ಯಾಪ್ ಹರಾಜಿಗಿಟ್ಟಿದ್ದಾರೆ. ಈ ಕ್ಯಾಪ್ ಖರೀದಿಸಲು ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಹರಾಜು ಪ್ರಕ್ರಿಯೆ ಡಿಸೆಂಬರ್ 10ರವರೆಗೆ ನಡೆಯಲಿದ್ದು, ನೀವೂ ಒಂದು ಕೈ ನೋಡಬಹುದು.
ಮೆಲ್ಬರ್ನ್[ಜ.09]: ಆಸ್ಪ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್‌ರ ‘ಬ್ಯಾಗಿ ಗ್ರೀನ್’ (ಟೆಸ್ಟ್‌ಗೆ ಪಾದಾರ್ಪಣೆ ಮಾಡುವಾಗ ನೀಡುವ ಕ್ಯಾಪ್) ಖರೀದಿಸಲು ಭಾರೀ ಬೇಡಿಕೆ ಶುರುವಾಗಿದೆ.
ಆಸ್ಪ್ರೇಲಿಯಾದಲ್ಲಿ ಕಾಡ್ಗಿಚ್ಚಿನಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಒದಗಿಸುವ ಪ್ರಯತ್ನದಲ್ಲಿರುವ ವಾರ್ನ್ ತಮ್ಮ ಟೆಸ್ಟ್ ಕ್ಯಾಪ್ ಅನ್ನು ಹರಾಜಿಗಿಟ್ಟಿದ್ದಾರೆ. ಸೋಮವಾರ (ಜ.6) ಆರಂಭಗೊಂಡ ಹರಾಜು ಪ್ರಕ್ರಿಯೆ ಜ.10ರ ವರೆಗೂ ನಡೆಯಲಿದ್ದು, ಕ್ಯಾಪ್‌ನ ಬೆಲೆ ಈಗಾಗಲೇ 5,00,000 ಆಸ್ಪ್ರೇಲಿಯನ್ ಡಾಲರ್ (ಅಂದಾಜು 2.46 ಕೋಟಿ ರು.) ತಲುಪಿದೆ. ಇನ್ನೆರಡು ದಿನಗಳಲ್ಲಿ ಈ ಮೊತ್ತ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಹೀಗಿದ್ದ ಆಸಿಸ್ ಹೀಗಾಯ್ತು: ಕಾಡ್ಗಿಚ್ಚಿಗೆ ಬದುಕೇ ಸರ್ವನಾಶವಾಯ್ತು!
ಹರಾಜಿನಲ್ಲಿ ಭಾರೀ ಬೇಡಿಕೆ ಕಂಡುಬಂದಿರುವ ವಿಷಯವನ್ನು ಸ್ವತಃ ವಾರ್ನ್ ತಮ್ಮ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಜತೆಗೆ ಖರೀದಿಸಲು ಆಸಕ್ತಿ ತೋರಿದವರಿಗೆ ಧನ್ಯವಾದ ಹೇಳಿದ್ದಾರೆ. ವಾರ್ನ್ ತಾವಾಡಿದ 145 ಟೆಸ್ಟ್‌ಗಳಲ್ಲಿ ಈ ಕ್ಯಾಪ್ ಧರಿಸಿದ್ದರು. 708 ವಿಕೆಟ್ ಕಬಳಿಸಿದ್ದ ವಾರ್ನ್, ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಆಸೀಸ್ ಅಗ್ನಿ ದುರಂತಕ್ಕೆ ಮಿಡಿದ ವಾರ್ನ್; ಕ್ಯಾಪ್ ಹರಾಜಿಗಿಟ್ಟ ಸ್ಪಿನ್ ದಿಗ್ಗಜ
ಆಸ್ಪ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚು ವಿಶ್ವವನ್ನೇ ನಡುಗಿಸಿದ್ದು, ಆಸ್ಪ್ರೇಲಿಯಾದ ಟೆನಿಸಿಗರು, ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಆಸ್ಪ್ರೇಲಿಯಾದ ದಿಗ್ಗಜ ವೇಗದ ಬೌಲರ್ ಜೆಫ್ ಥಾಮ್ಸನ್ ಸಹ ತಮ್ಮ ಟೆಸ್ಟ್ ಕ್ಯಾಪ್ ಹಾಗೂ ಜೆರ್ಸಿಯನ್ನು ಹರಾಜಿಗಿಟ್ಟು ಅದರಿಂದ ಬರುವ ಹಣವನ್ನು ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದಾರೆ.