Asianet Suvarna News Asianet Suvarna News

2024ರ ಐಪಿಎಲ್‌ನಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್‌..!

ಆಟಗಾರರ ರೀಟೈನ್ ಹಾಗೂ ರಿಲೀಸ್ ಮಾಡಲು ಐಪಿಎಲ್ ಆಡಳಿತ ಮಂಡಳಿಯು ನವೆಂಬರ್ 26ರವರೆಗೆ ಗಡುವು ನೀಡಿದೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ರೀಟೈನ್ ಆಟಗಾರರ ಹೆಸರನ್ನು ಅಂತಿಮಗೊಳಿಸಬೇಕಿದೆ. 2024ರ ಐಪಿಎಲ್ ಆಟಗಾರರ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ.

Ben Stokes opts out of IPL 2024 to manage workload and fitness kvn
Author
First Published Nov 24, 2023, 11:34 AM IST

ಚೆನ್ನೈ(ನ.24): ಫಿಟ್ನೆಸ್‌ ಹಾಗೂ ನಿರಂತರ ಕ್ರಿಕೆಟ್‌ನ ಒತ್ತಡ ತಪ್ಪಿಸುವ ನಿಟ್ಟಿನಲ್ಲಿ ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ 2024ರ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಚೆನ್ನೈ ಫ್ರಾಂಚೈಸಿ ಕೂಡಾ ಸ್ಟೋಕ್ಸ್‌ ಅಲಭ್ಯತೆಯನ್ನು ಖಚಿತಪಡಿಸಿದೆ. 2023ರ ಹರಾಜಿನಲ್ಲಿ ಸ್ಟೋಕ್ಸ್‌ರನ್ನು ಚೆನ್ನೈ ₹16.5 ಕೋಟಿ ನೀಡಿ ಖರೀದಿಸಿತ್ತು. ಆದರೆ ಸ್ಟೋಕ್ಸ್ ಕೇವಲ 2 ಪಂದ್ಯಗಳನ್ನಾಡಿದ್ದರು. ಮುಂದಿನ ತಿಂಗಳ ಹರಾಜಿಗೂ ಮುನ್ನ ಬೆನ್ ಸ್ಟೋಕ್ಸ್‌ರನ್ನು ಸಿಎಸ್‌ಕೆ ಕೈಬಿಡುವ ಸಾಧ್ಯತೆ ಇದೆ.

ಆಟಗಾರರ ರೀಟೈನ್ ಹಾಗೂ ರಿಲೀಸ್ ಮಾಡಲು ಐಪಿಎಲ್ ಆಡಳಿತ ಮಂಡಳಿಯು ನವೆಂಬರ್ 26ರವರೆಗೆ ಗಡುವು ನೀಡಿದೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ರೀಟೈನ್ ಆಟಗಾರರ ಹೆಸರನ್ನು ಅಂತಿಮಗೊಳಿಸಬೇಕಿದೆ. 2024ರ ಐಪಿಎಲ್ ಆಟಗಾರರ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ.

ಟೀಂ ಇಂಡಿಯಾ ಕೋಚ್‌ ಆಗಿ ಮುಂದುವರಿಯಲು ರಾಹುಲ್‌ ದ್ರಾವಿಡ್‌ ನಿರಾಸಕ್ತಿ?

ಐಪಿಎಲ್‌: ರಾಜಸ್ಥಾನ ಬಿಟ್ಟು ಲಖನೌ ತಂಡಕ್ಕೆ ಪಡಿಕ್ಕಲ್‌

ನವದೆಹಲಿ: ಕರ್ನಾಟಕದ ಬ್ಯಾಟರ್‌ ದೇವದತ್‌ ಪಡಿಕ್ಕಲ್‌ 2024ರ ಐಪಿಎಲ್‌ನಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಪರ ಆಡಲಿದ್ದಾರೆ. ಕಳೆದ 2 ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಪಡಿಕ್ಕಲ್‌, ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾಗಿದ್ದರು. ಮುಂದಿನ ತಿಂಗಳು ನಡೆಯಲಿರುವ ಆಟಗಾರರ ಹರಾಜಿಗೂ ಮುನ್ನ ಪಡಿಕ್ಕಲ್‌ರನ್ನು ಲಖನೌ ತಂಡಕ್ಕೆ ಬಿಟ್ಟುಕೊಟ್ಟಿರುವ ರಾಜಸ್ಥಾನ, ಲಖನೌ ತಂಡದಲ್ಲಿದ್ದ ವೇಗಿ ಆವೇಶ್‌ ಖಾನ್‌ರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. 2022ರ ಹರಾಜಿನಲ್ಲಿ ಆವೇಶ್‌ರನ್ನು ಲಖನೌ 10 ಕೋಟಿ ರು.ಗೆ ಖರೀದಿಸಿತ್ತು. ಪಡಿಕ್ಕಲ್‌ಗೆ ರಾಜಸ್ಥಾನ 7.75 ಕೋಟಿ ರು. ನೀಡಿತ್ತು.

ಕೆಕೆಆರ್‌ಗೆ ಮರಳಿದ ಗೌತಮ್‌ ಗಂಭೀರ್‌

ಕೋಲ್ಕತಾ: ಗೌತಮ್‌ ಗಂಭೀರ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಮರಳಿದ್ದಾರೆ. 2024ರ ಆವೃತ್ತಿಯಲ್ಲಿ ಅವರು ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. 2011ರಿಂದ 2017ರ ವರೆಗೂ ಕೆಕೆಆರ್‌ ಪರ ಆಡಿದ್ದ ಗಂಭೀರ್‌, 2012 ಹಾಗೂ 2014ರಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಕಳೆದ 2 ಆವೃತ್ತಿಗಳಲ್ಲಿ ಗಂಭೀರ್‌ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸಿದ್ದರು.

ಫೈನಲ್‌ನಲ್ಲಿ ಆಸೀಸ್‌ನ ರಣತಂತ್ರ ಕೇಳಿ ಶಾಕ್‌ ಆಗಿತ್ತು, ವಿಶ್ವಚಾಂಪಿಯನ್‌ಗೆ ಸೆಲ್ಯುಟ್‌ ಹೊಡೆದ ಆರ್‌ ಅಶ್ವಿನ್‌!

ಭ್ರಷ್ಟಾಚಾರ: ವಿಂಡೀಸ್‌ನ ಮರ್ಲಾನ್‌ ಸ್ಯಾಮುಯಲ್ಸ್‌ಗೆ ಐಸಿಸಿ 6 ವರ್ಷಗಳ ನಿಷೇಧ!

ದುಬೈ: 2019ರ ಅಬುಧಾಬಿ ಟಿ10 ಲೀಗ್‌ನಲ್ಲಿ ನಡೆಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಸ್ಟ್‌ಇಂಡೀಸ್‌ನ ಮಾಜಿ ಕ್ರಿಕೆಟಿಗ ಮರ್ಲಾನ್‌ ಸ್ಯಾಮುಯಲ್ಸ್‌ಗೆ ಐಸಿಸಿ ಎಲ್ಲಾ ಮಾದರಿ ಕ್ರಿಕೆಟ್‌ನಿಂದ 6 ವರ್ಷ ನಿಷೇಧ ಹೇರಿದೆ. ತಾವು ಸ್ವೀಕರಿಸಿದ ಉಡುಗೊರೆ, ಆತಿಥ್ಯ, ಹಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡದ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಗೊತ್ತಾಗಿದ್ದು, ಹೀಗಾಗಿ ನಿಷೇಧ ಹೇರಲಾಗಿದೆ ಎಂದು ಐಸಿಸಿ ತಿಳಿಸಿದೆ.

Follow Us:
Download App:
  • android
  • ios