ವಿಶ್ವಕಪ್‌ ಫೈನಲ್‌ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡದ ರಣತಂತ್ರವನ್ನು ಮಿಡ್‌ ಇನ್ನಿಂಗ್ಸ್‌ನ ವೇಳೆ ಕೇಳಿ ನನಗೆ ಶಾಕ್‌ ಆಗಿತ್ತು ಎಂದು ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ದ ಭಾರತದ ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಹೇಳಿದ್ದಾರೆ.

ನವದೆಹಲಿ (ನ.23): ಕಳೆದ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆಟಡಿದ ಚಾಣಾಕ್ಷ ಆಟಕ್ಕೆ ಟೀಮ್‌ ಇಂಡಿಯಾದ ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡವು ಮೆಗಾ ಫೈನಲ್‌ ಪಂದ್ಯಕ್ಕಾಗಿ ತಮ್ಮ ಅತ್ಯಂತ ಪಕ್ಕಾ ಯೋಜನೆಯೊಂದಿಗೆ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಯಿತು ಎಂದಿದ್ದಾರೆ. ಪ್ಯಾಟ್‌ ಕಮಿನ್ಸ್‌ ಅವರ ಮ್ಯಾಚ್‌ ವಿನ್ನಿಂಗ್‌ ಬೌಲಿಂಗ್‌ ಸ್ಪೆಲ್‌ ಬಗ್ಗೆಯೂ ಅಶ್ವಿನ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ಪ್ಯಾಟ್‌ ಕಮಿನ್ಸ್‌ ನಿರ್ಣಾಯಕವಾಗಿದ್ದ ಬೌಲಿಂಗ್‌ ಸ್ಪೆಲ್‌ ಮಾಡಿದರು. ಈ ಅವಧಿಯಲ್ಲಿ ಅವರು ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಅವರ ವಿಕೆಟ್‌ ಉರುಳಿಸಿದ್ದರು. ಈ ಪಂದ್ಯಕ್ಕೂ ಮುನ್ನ ಹಾಗೂ ಫೈನಲ್‌ಗೂ ಮುನ್ನ ಆಡಿದ ನಾಲ್ಕು ಪಂದ್ಯಗಳಲ್ಲಿ ಅವರೇನೂ ಉತ್ತಮ ಫಾರ್ಮ್‌ನಲ್ಲಿ ಇದ್ದಿರಲಿಲ್ಲ. ಆದರೆ, ಫೈನಲ್‌ನಲ್ಲಿ ಸಾಕಷ್ಟು ಆಫ್‌ ಕಟರ್‌ಅನ್ನು ಅವರು ಎಸೆದರು. ಫೈನಲ್‌ ಪಂದ್ಯದಲ್ಲಿ ಕೂಡ ಡ್ರೈವ್‌ ಮಾಡಲು ಸಾಧ್ಯವಾಗುವಂಥ ಯಾವುದೇ ಕಡೆಯೂ ಅವರು ಚೆಂಡನ್ನು ಎಸೆಯಲಿಲ್ಲ' ಎಂದು ಅಶ್ವಿನ್‌ ಹೇಳಿದ್ದಾರೆ.

ಹಿರಿಯ ಆಫ್‌ ಸ್ಪಿನ್ನರ್ ಅವರು ಆಸ್ಟ್ರೇಲಿಯಾ ತಂಡದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಅವರೊಂದಿಗಿನ ಸಂಭಾಷಣೆಯನ್ನು ಈ ವೇಳೆ ಹೈಲೈಟ್‌ ಮಾಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ಫೈನಲ್‌ ಪಂದ್ಯಕ್ಕೂ ಮುನ್ನ ಮಾಡುವಂಥ ಸಿದ್ಧತೆಯಗಳನ್ನು, ರಣತಂತ್ರಗಳನ್ನು ಶ್ಲಾಘಿಸಿದ್ದಾರೆ.

'ಆಸ್ಟ್ರೇಲಿಯಾ ತಂಡ ವೈಯಕ್ತಿಕವಾಗಿ ಸಂಪೂರ್ಣವಾಗಿ ನನ್ನನ್ನು ವಂಚಿಸಿತು. ಮಿಡ್ ಇನ್ನಿಂಗ್ಸ್‌ನಲ್ಲಿ ನಾನು ಜಾರ್ಜ್ ಬೈಲಿ ಅವರೊಂದಿಗೆ ಚಾಟ್ ಮಾಡುತ್ತಿದ್ದೆ. ಈ ವೇಳೆ ನಾನು, ಸಾಮಾನ್ಯವಾಗಿ ನೂವು ಯಾವಾಗಲೂ ಟಾಸ್‌ ಗೆದ್ದಾಗ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುತ್ತೀರಿ. ಈ ಬಾರಿ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದೆ. ಇದಕ್ಕೆ ಉತ್ತರಿಸಿದ್ದ ಜಾರ್ಜ್‌ ಬೈಲಿ, ನಾವು ಇಲ್ಲಿ ಸಾಕಷ್ಟು ಐಪಿಎಲ್‌ ಹಾಗೂ ದ್ವಿಪಕ್ಷೀಯ ಸರಣಿಯನ್ನು ಆಡಿದ್ದೇವೆ. ಸಾಮಾನ್ಯವಾಗಿ ಕೆಂಪು ಮಣ್ಣಿನ ಪಿಚ್‌ಗಳು ವಿಘಟನೆಯಾಗುತ್ತದೆ (ಪುಡಿಪುಡಿಯಾಗುವುದು). ಆದರೆ, ಕಪ್ಪು ಮಣ್ಣು ಆ ರೀತಿ ಆಗೋದಿಲ್ಲ. ಅದರಲ್ಲೂ ಹಗಲು ರಾತ್ರಿ ಪಂದ್ಯಗಳಲ್ಲಿ ಕಪ್ಪು ಮಣ್ಣಿನ ಪಿಚ್‌ ಇನ್ನಷ್ಟು ಬ್ಯಾಟಿಂಗ್‌ ಸ್ನೇಹಿ ಆಗುತ್ತದೆ. ಕೆಂಪು ಮಣ್ಣಿನಲ್ಲಿ ಇಬ್ಬನಿಯ ಪ್ರಭಾವ ಇರೋದಿಲ್ಲ. ಆದರೆ ಕಪ್ಪು ಮಣ್ಣು ಮಧ್ಯಾಹ್ನ ಉತ್ತಮ ತಿರುವು ನೀಡುತ್ತದೆ ಮತ್ತು ನಂತರ ರಾತ್ರಿಯಲ್ಲಿ ಕಾಂಕ್ರೀಟ್ ಆಗುತ್ತದೆ. ಇದು ನಮ್ಮ ಅನುಭವ ಎಂದು ಹೇಳಿದ್ದರು' ಎಂದು ಅಶ್ವಿನ್‌ ತಿಳಿಸಿದ್ದಾರೆ.

ರಾಹುಲ್‌ ಗಾಂಧಿಯ 'ಪನೌತಿ ಮೋದಿ' ಟೀಕೆಗೆ ತಿರುಗೇಟು ನೀಡಿದ ಮೊಹಮದ್‌ ಶಮಿ!

ಆಸ್ಟ್ರೇಲಿಯಾ ತಂಡವು ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿ ಆರನೇ ಏಕದಿನ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತು. ರೋಹಿತ್ ತಂಡ 240 ರನ್‌ಗಳಿಗೆ ಆಲೌಟ್ ಆದರೆ, ಭಾರತ ತಂಡದ ಯಾವುದೇ ಬ್ಯಾಟ್ಸ್‌ಮನ್‌ ಕೂಡ ದೊಡ್ಡ ಇನ್ನಿಂಗ್ಸ್‌ ಆಡಲು ವಿಫಲರಾದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ ಅಮೋಘ ಪ್ರದರ್ಶನ ನೀಡಿದರು. ಆಕರ್ಷಕ ಶತಕ ಬಾರಿಸುವ ಮೂಲಕ ಆಸೀಸ್‌ಗೆ ಗೆಲುವು ತಂದಿದ್ದರು.

'ಉರ್ಫಿ ನೋಡೋಕೆ ಇದಕ್ಕಿಂತ ಜಾಸ್ತಿ ಜನ ಸೇರ್ತಾರೆ..' ಪ್ಯಾಟ್‌ ಕಮಿನ್ಸ್‌ಗೆ ಆಸೀಸ್‌ನಲ್ಲಿ ನೀರಸ ಸ್ವಾಗತಕ್ಕೆ ಭಾರತೀಯರ ಬೇಸರ!

World Cup 2023: A Reflection | R Ashwin