ವಿಜಯ್ ಹಜಾರೆ ಟೂರ್ನಿಯಿಂದ ದೂರ ಉಳಿದ ಸಂಜು ಸ್ಯಾಮ್ಸನ್ ವಿರುದ್ಧ ಬಿಸಿಸಿಐ ತನಿಖೆ ಆರಂಭಿಸಿದೆ. ತರಬೇತಿ ಶಿಬಿರಕ್ಕೆ ಗೈರಾಗಿದ್ದೇ ಕೇರಳ ತಂಡದಿಂದ ಹೊರಗುಳಿಯಲು ಕಾರಣ ಎನ್ನಲಾಗಿದೆ. ಚಾಂಪಿಯನ್ಸ್ ಟ್ರೋಫಿಯಿಂದಲೂ ಸಂಜು ಹೊರಬೀಳುವ ಸಾಧ್ಯತೆ ಇದೆ. ಇಶಾನ್ ಕಿಶನ್‌ಗೆ ಇದೇ ರೀತಿಯ ಘಟನೆ ಸಂಭವಿಸಿತ್ತು.
ನವದೆಹಲಿ: ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಕೇರಳ ತಂಡದ ಆಯ್ಕೆಗೆ ಲಭ್ಯವಿರದ ತಾರಾ ಆಟಗಾರ ಸಂಜು ಸ್ಯಾಮ್ಸನ್ ಬಗ್ಗೆ ಬಿಸಿಸಿಐ ತನಿಖೆಗೆ ಮುಂದಾಗಿದೆ. ರಾಷ್ಟ್ರೀಯ ತಂಡದಿಂದ ಹೊರಗಿರುವ ಪ್ರತಿ ಆಟಗಾರರು ದೇಸಿ ಕ್ರಿಕೆಟ್‌ನಲ್ಲಿ ಆಡಲೇಬೇಕು ಎಂಬುದು ಬಿಸಿಸಿಐ ನಿಯಮ. ಆದರೆ ಸಂಜು ಸ್ಯಾಮ್ಸನ್ ಈ ಬಾರಿ ವಿಜಯ್ ಹಜಾರೆಗೆ ಕೇರಳ ತಂಡದ ಆಯ್ಕೆಗೆ ಲಭ್ಯವಿರಲಿಲ್ಲ. ಹೀಗಾಗಿ ಸಂಜು ಬಗ್ಗೆ ಬಿಸಿಸಿಐ ಅಧಿಕಾರಿಗಳು ಅಸಮಾಧಾನ ಹೊಂದಿದ್ದು, ಈ ಬಗ್ಗೆ ತನಿಖೆಯನ್ನೂ ನಡೆಸಲಿದೆ.
ಸಂಜು ಟೂರ್ನಿಗೂ ಮುನ್ನ ಶಿಬಿರಕ್ಕೆ ಹಾಜರಾಗಿರಲಿಲ್ಲ. ಇದೇ ಕಾರಣಕ್ಕೆ ಅವರನ್ನು ಟೂರ್ನಿಗೆ ಕೇರಳ ಕ್ರಿಕೆಟ್ ಸಂಸ್ಥೆ ಆಯ್ಕೆ ಮಾಡಿಲ್ಲ ಎಂದು ತಿಳಿದುಬಂದಿದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ವಿಜಯ್ ಹಜಾರೆ ಟೂರ್ನಿಗೆ ಸಂಜು ಸ್ಯಾಮ್ಸನ್ ಗೈರಾಗಿದ್ದರೆ ಅವರು ಭಾರತ ತಂಡದಿಂದಲೂ ಹೊರಬೀಳುವ ಆತಂಕ ಎದುರಾಗಿದೆ.
ಇಂದಿನಿಂದ ಅಂಡರ್-19 ಮಹಿಳಾ ಟಿ20 ವಿಶ್ವಕಪ್; ಭಾರತ ತಂಡಕ್ಕೆ ಕನ್ನಡತಿ ನಾಯಕಿ
ಚಾಂಪಿಯನ್ಸ್ ಟ್ರೋಫಿಯಿಂದಲೂ ಸಂಜು ಔಟ್?: ಇನ್ನು ಮುಂಬರುವ ಫೆಬ್ರವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಇಂದು ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಆರಂಭದಲ್ಲಿ ಈ ಮಹತ್ವದ ಕ್ರಿಕೆಟ್ ಟೂರ್ನಿಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆ ಎಲ್ ರಾಹುಲ್ ಜತೆಗೆ ಸಂಜು ಸ್ಯಾಮ್ಸನ್ ಸ್ಥಾನ ಪಡೆಯಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ಇನ್ನು ಕೆಲವು ಕ್ರಿಕೆಟ್ ಪಂಡಿತರೂ ಕೂಡಾ ತಮ್ಮ ಕನಸಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸಂಜುಗೆ ಸ್ಥಾನ ನೀಡಿದ್ದರು. ಆದರೆ ಸಂಜು ಅವರ ಈ ಒಂದು ತಪ್ಪು ನಡೆ ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಕೇರಳ ಕ್ರಿಕೆಟಿಗ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ.
ಇನ್ನು ಕಳೆದ ವರ್ಷ ಇಶಾನ್ ಕಿಶನ್ ಕೂಡಾ ಇದೇ ರೀತಿಯ ಉದ್ದಟತನ ತೋರಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದು, ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಈಗಲೂ ಪರದಾಡುವ ಪರಿಸ್ಥಿತಿ ತಂದುಕೊಂಡಿದ್ದಾರೆ. ರಾಷ್ಟ್ರೀಯ ತಂಡದಿಂದ ಹೊರಗಿದ್ದಾಗ ದೇಶಿ ಕ್ರಿಕೆಟ್‌ನಲ್ಲಿ ಆಡಿ ಎಂದು ಬಿಸಿಸಿಐ ಸೂಚಿಸಿತ್ತು. ಹೀಗಿದ್ದೂ ಇಶಾನ್ ಕಿಶನ್, ಬಿಸಿಸಿಐ ಮಾತನ್ನು ದಿಕ್ಕರಿಸಿ ಐಪಿಎಲ್‌ಗಾಗಿ ತಯಾರಿ ನಡೆಸಲು ಮುಂದಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ, ಎಲ್ಲಾ ಆಟಗಾರರಿಗೂ ಖಡಕ್ ಸೂಚನೆ ನೀಡಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ನೂತನ ಬ್ಯಾಟಿಂಗ್ ಕೋಚ್ ನೇಮಕ!
ರಣಜಿ: ಡೆಲ್ಲಿ ಸಂಭಾವ್ಯರ ತಂಡದಲ್ಲಿ ಕೊಹ್ಲಿ. ಆದರೆ ಪಂದ್ಯ ಆಡುವುದು ಡೌಟ್
ನವದೆಹಲಿ: ಜ.23ರಿಂದ ಆರಂಭಗೊಳ್ಳಲಿರುವ ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಪಂದ್ಯಕ್ಕೆ ಶುಕ್ರವಾರ 22 ಆಟಗಾರರ ಡೆಲ್ಲಿ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ವಿರಾಟ್ ಕೊಹ್ಲಿ ಕೂಡಾ ಇದ್ದಾರೆ. ಆದರೆ ಕುತ್ತಿಗೆ ನೋವಿನಿಂದ ಬಳಲುತ್ತಿರುವ ವಿರಾಟ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ ಎಂದು ತಿಳಿದುಬಂದಿದೆ.
ಇನ್ನು, ಡೆಲ್ಲಿ ತಂಡಕ್ಕೆ ರಿಷಬ್ ಪಂತ್ ಕೂಡಾ ಆಯ್ಕೆಯಾಗಿದ್ದಾರೆ. ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದರೂ, ನಾಯಕನಾಗಿ ಆಯುಶ್ ಬದೋನಿ ಮು೦ದುವರಿಯುವ ಸಾಧ್ಯತೆಯಿದೆ. ಇನ್ನು ಸೌರಾಷ್ಟ್ರ ಪರ ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಕಣಕ್ಕಿಳಿಯಲು ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ.
