2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ15 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಮಾಡಲು ಟೀಂ ಇಂಡಿಯಾ ಒಲವು2008ರಲ್ಲಿ ಕೊನೆಯ ಬಾರಿಗೆ ಪಾಕ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ

ನವದೆಹಲಿ(ಅ.15): ಎಲ್ಲವೂ ಯೋಜನೆಯಂತೆ ನಡೆದರೆ 2008ರ ಬಳಿಕ ಮೊದಲ ಬಾರಿ ಟೀಂ ಇಂಡಿಯಾ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಡಲಿದೆ. 2023ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಅಜೆಂಡಾದಲ್ಲಿ ಉಲ್ಲೇಖಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಎದುರು ನೋಡುತ್ತಿದೆ. 

ಬಿಸಿಸಿಐ ಟೀಂ ಇಂಡಿಯಾದ 2023ರ ಕ್ರಿಕೆಟ್‌ ಟೂರ್ನಿಗಳ ಪಟ್ಟಿಯನ್ನು ಗುರುವಾರ ಎಲ್ಲಾ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳಿಗೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ ಕೂಡಾ ಇದರಲ್ಲಿ ಒಳಗೊಂಡಿದೆ. ಒಂದು ವೇಳೆ ಸರ್ಕಾರ ಅನುಮತಿ ನೀಡಿದರೆ 15 ವರ್ಷಗಳ ಬಳಿಕ ಭಾರತ ತಂಡ ಪಾಕ್‌ಗೆ ಪ್ರಯಾಣಿಸಲಿದೆ. 2008ರಲ್ಲಿ ಭಾರತ ಕೊನೆ ಬಾರಿ ಪಾಕಿಸ್ತಾನದಲ್ಲಿ ಆಡಿತ್ತು.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಸದ್ಯ ಕೇವಲ ಏಷ್ಯಾಕಪ್ ಹಾಗೂ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿದ್ದು, ಕಳೆದೊಂದ ದಶಕದಿಂದ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಇದೀಗ ಎಲ್ಲವೂ ಅಂದುಕೊಂಡಂತೆ ಆದರೆ 2008ರ ಬಳಿಕ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್ ಆಡಲಿದೆ. 

ಟಿ20 ವಿಶ್ವಕಪ್‌: ಬಿಸಿಸಿಐಗೆ 955 ಕೋಟಿ ರುಪಾಯಿ ನಷ್ಟ?

ನವದೆಹಲಿ: ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ ಆಯೋಜನೆಗಾಗಿ ಐಸಿಸಿಗೆ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡದಿದ್ದರೆ ಬಿಸಿಸಿಐ 955 ಕೋಟಿ ರು. ನಷ್ಟಅನುಭವಿಸುವ ಸಾಧ್ಯತೆ ಇದೆ. ಸರ್ಕಾರ ಐಸಿಸಿಯ ಪ್ರಸಾರದ ಆದಾಯದ ಮೇಲೆ ಶೇ.21.84ರಷ್ಟುಹೆಚ್ಚುವರಿ ತೆರಿಗೆ ಶುಲ್ಕ ವಿಧಿಸುವ ನಿರ್ಧಾರ ಕೈಬಿಡದಿದ್ದರೆ ಬಿಸಿಸಿಐಗೆ ನಷ್ಟ ಖಚಿತ.

ಮಾಡಿದ ಕರ್ಮ ಎಲ್ಲಿಗೆ ಹೋಗುತ್ತೆ..? ಗಂಗೂಲಿಯನ್ನು ಟ್ರೋಲ್ ಮಾಡಿದ ಕೊಹ್ಲಿ ಫ್ಯಾನ್ಸ್‌..!

ಐಸಿಸಿ ಆಯೋಜಿಸುವ ಟೂರ್ನಿಗಳಿಗೆ ಸ್ಥಳೀಯ ಸರ್ಕಾರ ತೆರಿಗೆ ವಿನಾಯಿತಿ ನೀಡುವ ರೂಢಿ ಮೊದಲಿನಿಂದಲೂ ಇದೆ. ಭಾರತದ ತೆರಿಗೆ ಕಾಯ್ದೆಯಂತೆ 2016ರ ಟಿ20 ವಿಶ್ವಕಪ್‌ ಆಯೋಜನೆಯಿಂದ ಈಗಾಗಲೇ 193 ಕೋಟಿ ರು. ನಷ್ಟಅನುಭವಿಸಿರುವ ಬಿಸಿಸಿಐ ಅದಕ್ಕಾಗಿ ಐಸಿಸಿ ಜೊತೆ ಹೋರಾಟ ನಡೆಸುತ್ತಿದೆ. ಮುಂಬರುವ ಟೂರ್ನಿಯ ಪ್ರಸಾರ ಆದಾಯದ ಮೇಲೆ ಐಸಿಸಿ ಶೇ.20ರಷ್ಟು ತೆರಿಗೆಗೆ ಒಪ್ಪಿದೆ. ತೆರಿಗೆ ವಿನಾಯಿತಿ ದೊರೆತಲ್ಲಿ ನಷ್ಟಪ್ರಮಾಣ 430 ಕೋಟಿ ರು.ಗೆ ತಗ್ಗಲಿದ್ದು ಈ ನಿಟ್ಟಿನಲ್ಲಿ ಬಿಸಿಸಿಐ ಕೇಂದ್ರ ಸರ್ಕಾರ ಹಾಗೂ ಹಣಕಾಸು ಸಚಿವಾಲಯದೊಂದಿಗೆ ಮಾತುಕತೆ ನಡೆಸುತ್ತಿದೆ. 2023ರ ಏಕದಿನ ವಿಶ್ವಕಪ್‌ ಪ್ರಸಾರದಿಂದ ಐಸಿಸಿಯು 4400 ಕೋಟಿ ರು. ಆದಾಯ ನಿರೀಕ್ಷೆಯಲ್ಲಿದೆ.

ದಾದಾ ವಿರುದ್ಧ ಬಿಸಿಸಿಐ ಸಭೆಯಲ್ಲಿ ಯಾರೂ ಮಾತಾಡಿಲ್ಲ: ಧುಮಾಲ್‌

ನವದೆಹಲಿ: ಭಾವಿ ಐಪಿಎಲ್‌ ಅಧ್ಯಕ್ಷ, ಬಿಸಿಸಿಐನ ನಿರ್ಗಮಿತ ಖಜಾಂಚಿ ಅರುಣ್‌ ಧುಮಾಲ್‌, ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿಗೆ ಸಂಬಂಧಿಸಿದ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ನಡೆದ ಬಿಸಿಸಿಐ ಸಭೆಯಲ್ಲಿ ಗಂಗೂಲಿ ವಿರುದ್ಧ ಯಾರೂ ಮಾತನಾಡಿಲ್ಲ. ಅವರ ಕಾರ‍್ಯನಿರ್ವಹಣೆ ಬಗ್ಗೆ ಯಾರಿಗೂ ಅಸಮಾಧಾನ ಇಲ್ಲ. ಇವೆಲ್ಲಾ ಮಾಧ್ಯಮಗಳ ಸೃಷ್ಟಿ’ ಎಂದು ಧುಮಾಲ್‌ ಹೇಳಿದ್ದಾರೆ. 

ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗುವ ವಿಚಾರದಲ್ಲಿ ಬಿಸಿಸಿಐ ಹಾಗೂ ಗಂಗೂಲಿ ನಡುವೆ ಮನಸ್ತಾಪ ಶುರುವಾಗಿದೆ. ಸಭೆಯಲ್ಲಿ ಗಂಗೂಲಿಗೆ ಮುಜುಗರ ಉಂಟಾಯಿತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.