Asianet Suvarna News Asianet Suvarna News

Team India:ಕ್ರಿಕೆಟಿಗರಿಗೆ ಬೀಫ್, ಪೋರ್ಕ್ ನಿಷೇಧ,ವಿವಾದಕ್ಕೆ ಕಾರಣವಾಯ್ತು BCCI ಹಲಾಲ್ ಮಾಂಸ ಕಡ್ಡಾಯ!

  • ಕ್ರಿಕೆಟಿಗರ ಆಹಾರ ಕುರಿತು ಬಿಸಿಸಿಐ ಮಹತ್ವದ ನಿರ್ಧಾರ
  • ಬೀಫ್, ಪೋರ್ಕ್ ಮಾಂಸಾಹಾರಕ್ಕೆ ನಿಷೇಧ ಹೇರಿದ ಬಿಸಿಸಿಐ
  • ಕ್ರಿಕೆಟಿಗರಿಗೆ ಹಲಾಲ್ ಮಾಂಸಾಹಾರ ಕಡ್ಡಾಯ, ಮತ್ತೆ ವಿವಾದ
BCCI ban pork beef to Team India cricketers Halal meat made compulsory netizens questions new diet plan ckm
Author
Bengaluru, First Published Nov 23, 2021, 6:41 PM IST
  • Facebook
  • Twitter
  • Whatsapp

ಮುಂಬೈ(ನ.23): ಟೀಂ ಇಂಡಿಯಾ(Team India) ಸದ್ಯ ನ್ಯೂಜಿಲೆಂಡ್(New zealand) ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಈಗಾಗಲೇ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ವಿಶ್ವಾಸದಲ್ಲಿದೆ. ತಂಡದ  ಪ್ರದರ್ಶನ ಅಭಿಮಾನಿಗಳಿಗೂ ಸಂತಸ ತಂದಿದೆ. ಇದರ ನಡುವೆ ಬಿಸಿಸಿಐ ವಿವಾದ(Bcci controversy) ಸೃಷ್ಟಿಸಿದೆ. ಟೀಂ ಇಂಡಿಯಾ ಕ್ರಿಕೆಟಿಗರ ಆಹಾರ ಪದ್ಧತಿ ಕುರಿತು ಬಿಸಿಸಿಐ ಮಹತ್ವದ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರ ಆಹಾರ ಪದ್ಧತಿಯಲ್ಲಿ(Food diet) ಬಿಸಿಸಿಐ, ಗೋಮಾಂಸ(Beef) ಹಾಗೂ ಹಂದಿ ಮಾಂಸ(Pork) ನಿಷೇಧಿಸಿದೆ. ಆದರೆ ಹಲಾಲ್ ಮಾಂಸಾಹಾರ ಕಡ್ಡಾಯ ಮಾಡಿದೆ.

ಸರಣಿ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐ ಆಹಾರ ನೀಡಲಿದೆ. ಈ ಆಹಾರ ಮೆನುವಿನಲ್ಲಿ(food menu card) ಕೆಲ ನಿಬಂಧನೆಗಳನ್ನು ಹಾಕಲಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರ ಆಹಾರ ಪದ್ಧತಿಯಲ್ಲಿ ಬೀಫ್ ಹಾಗೂ ಪೋರ್ಕ್ ನಿಷೇಧಿಸಲಾಗಿದೆ. ಆದರೆ ಕ್ರಿಕೆಟಿಗರು ಹಲಾಲ್ ಮಾಂಸಾಹಾರವನ್ನೇ ಸೇವಿಸಬೇಕು. ಇದು ಕಡ್ಡಾಯ ಮಾಡಿದೆ. ಬಿಸಿಸಿಐ ಹಲಾಲ್ ಮಾಂಸಾಹಾರ(Halal meat) ಕಡ್ಡಾಯ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

Sabarimala Prasadam:ಅಯ್ಯಪ್ಪನ ಪ್ರಸಾದದಲ್ಲಿ ಹಲಾಲ್ ಬೆಲ್ಲ, ಕೋರ್ಟ್‌ ಮುಂದೆ TDB ಸ್ಪಷ್ಟನೆ

ಹಲಾಲ್ ಮಾಂಸಾಹಾರ ಕಡ್ಡಾ ಏಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಹಲವು ಧರ್ಮದ(Religion) ಕ್ರಿಕೆಟಿಗರಿದ್ದಾರೆ. ಹಲಾಲ್ ಮಾಂಸ ಮುಸ್ಲಿಮರಗೆ(Islam) ಕಡ್ಡಾಯ. ಆದರೆ ಹಿಂದೂಗಳು ಸೇರಿದಂತೆ ಇತರ ಆಟಗಾರರಿಗೆ ಹಲಾಲ್ ಮಾಂಸ ಕಡ್ಡಾಯ ಮಾಡಿರುವುದೇಕೆ? ಇದು ಇತರ ಧರ್ಮದ ಆಟಗಾರರ ಮೇಲೆ ಮತ್ತೊಂದು ಧರ್ಮದ ಆಹಾರ ಪದ್ಧತಿಯನ್ನು ಒತ್ತಾಯ ಪೂರ್ವಕವಾಗಿ ಹೇರಲಾಗಿದೆ. ಮುಸ್ಲಿಂ ಧರ್ಮದ ಹಲಾಲ್ ಮಾಂಸಾಹಾರವನ್ನು ಟೀಂ ಇಂಡಿಯಾದಲ್ಲಿ ಕಡ್ಡಾಯ ಮಾಡುವ ಯಾವುದೇ ಅಗತ್ಯವಿರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸದ್ಯ ಟೀಂ ಇಂಡಿಯಾ,  ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕಾನ್ಪುರದಲ್ಲಿದೆ. ಪಂದ್ಯದ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಹಾರವನ್ನು ಬಿಸಿಸಿಐ ನೀಡಲಿದೆ. ಟೀಂ ಇಂಡಿಯಾ ಕ್ರಿಕೆಟಿರಿಗೆ ಯಾವ ಆಹಾರ ನೀಡಬೇಕು ಅನ್ನೋ ಮೆನು ಬಿಸಿಸಿಐ ಹೇಳಲಿದೆ. ಬೆಳಗಿನ ಉಪಹಾರ, ಮಧ್ಯಾಹ್ನ ಊಟ, ಸಂಜೆ ತಿಂಡಿ ಹಾಗೂ ರಾತ್ರಿ ಭೋಜನ ಸೇರಿದಂತೆ ಎಲ್ಲಾ ಆಹಾರದ ಮೇಲೆ ಬಿಸಿಸಿಐ ಅತ್ಯಂತ ನಿಗಾವಹಿಸಲಿದೆ. ಇದೀಗ ನೂತನ ಮೆನುವಿನಲ್ಲಿ ಬಿಸಿಸಿಐ ಪೋರ್ಕ್, ಬೀಫ್ ತೆಗೆದುಹಾಕಿದೆ. ಆದರೆ ಕ್ರಿಕೆಟಿಗರು ಸೇವಿಸುವ ಪ್ರತಿ ಮಾಂಸ ಹಲಾಲ್ ಪ್ರಮಾಣೀಕೃತವಾಗಿರಬೇಕು ಎಂದಿದೆ.

IPL 2022: ಅಭಿಮಾನಿಗಳಿಗೆ ಗುಡ್ ನ್ಯೂಸ್, ಭಾರತದಲ್ಲಿ ಮುಂದಿನ ಐಪಿಎಲ್ ಖಚಿತಪಡಿಸಿದ BCCI!

ಇಸ್ಲಾಂನಲ್ಲಿ ಮುಸಲ್ಮಾನರು ಹಲಾಲ್ ಮಾಂಸ ಹೊರತು ಪಡಿಸಿ ಇತರ ಮಾಂಸಗಳನ್ನು ಸೇವಿಸುವಂತಿಲ್ಲ. ಹಂದಿ ಸೇರಿದಂತೆ ಕೆಲ ಪ್ರಾಣಿಗಳ ಆಹಾರ ಸೇವಿಸುವಂತಿಲ್ಲ. ಇನ್ನು ಭೀಪ್, ಚಿಕನ್, ಮಟನ್ ಹಾಗೂ ಒಂಟೆ ಮಾಂಸವನ್ನು ಇಸ್ಲಾಂನಲ್ಲಿ ಸೇವಿಸಲು ಅವಕಾಶವಿದೆ. ಆದರೆ ಈ ಮಾಂಸಗಳನ್ನು ಸೇವಿಸಲು ಹಲಾಲ್ ಪ್ರಮಾಣೀಕೃಗೊಂಡಿರಬೇಕು. ಪ್ರಾಣಿಗಳನ್ನು ವಧಿಸುವಾಗ ಹಲಾಲ್ ವಿಧಾನದಲ್ಲಿ ವಧಿಸಬೇಕು. ಇದನ್ನು ಮಾತ್ರ ಮುಸ್ಲಿಂಮರು ಸೇವಿಸಬೇಕು ಅನ್ನೋದು ಇಸ್ಲಾಂ ಧರ್ಮದ ಪ್ರತೀತಿ. ಆದರೆ ಇದೇ ಪ್ರತೀತಿಯನ್ನು ಟೀಂ ಇಂಡಿಯಾದಲ್ಲಿ ಕಡ್ಡಾಯ ಮಾಡಿರುವುದು ಏಕೆ ಅನ್ನೋದು ಇದೀಗ  ಪ್ರಶ್ನೆಯಾಗಿದೆ. 

ಪ್ರಾಣಿಗಳನ್ನು ಹಲಾಲ್ ವಿಧಾನದಲ್ಲಿ ವಿಧಿಸುವುದು ಎಂದರೆ ವಧಿಸುವಾಗ ನಿಧಾನವಾಗಿ ರಕ್ತಸ್ರಾವವಾಗುವಂತೆ ಮಾಡಲಾಗುತ್ತದೆ. ಇನ್ನೊಂದು ಅಥವಾ ಸಾಮಾನ್ಯ ವಿಧಾನದಲ್ಲಿ ಒಂದೇ ಭಾರಿಗೆ ವಧೆ ಮಾಡಲಾಗುತ್ತದೆ. ಹಿಂದೂ ಹಾಗೂ ಸಿಖ್ ಧರ್ಮದಲ್ಲಿ ಹಲಾಲ್ ಮಾಂಸಾಹಾರ ಸೇವನೆ ನಿಷಿದ್ಧವಾಗಿದೆ. ಮುಸ್ಲಿಮರು ಹಲಾಲ್ ಹೊರತು ಪಡಿಸಿ ಇತರ ಆಹಾರ ತಿನ್ನುವಂತಿಲ್ಲ. 

ಮುಸ್ಲಿಂಮರ ಹಲಾಲ್ ಮಾಂಸಾಹಾರವನ್ನು ಟೀಂ ಇಂಡಿಯಾದಲ್ಲಿರುವ ಹಿಂದೂಗಳಿಗೆ ಏಕೆ ನೀಡಲಾಗುತ್ತಿದೆ. ಟೀಂ ಇಂಡಿಯಾವನ್ನು ಬಿಸಿಸಿಐ ಏನು ಮಾಡಲು ಹೊರಟಿದೆ ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದಲ್ಲಿರುವ ಹೆಚ್ಚಿನ ಆಟಗಾರರು ಮುಸ್ಲಿಮೇತರರಾಗಿದ್ದಾರೆ. ಹೀಗಾಗಿ ಬಿಸಿಸಿಐ ಯಾವ ಅರ್ಥದಲ್ಲಿ ಈ ಹಲಾಲ್ ಮಾಂಸ ಕಡ್ಡಾಯ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Follow Us:
Download App:
  • android
  • ios