Asianet Suvarna News Asianet Suvarna News

IPL 2022: ಅಭಿಮಾನಿಗಳಿಗೆ ಗುಡ್ ನ್ಯೂಸ್, ಭಾರತದಲ್ಲಿ ಮುಂದಿನ ಐಪಿಎಲ್ ಖಚಿತಪಡಿಸಿದ BCCI!

  • IPL ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ
  • ಭಾರತದಲ್ಲಿ ಐಪಿಎಲ್ 2022 ಆಯೋಜನೆ, ಖಚಿತ ಪಡಿಸಿದ ಬಿಸಿಸಿಐ
  • ಭಾರತದಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಬಿಸಿಸಿಐ ತಯಾರಿ
BCCI secretary Jay Shah confirms 2022 season IPL will be held in India ckm
Author
Bengaluru, First Published Nov 20, 2021, 8:19 PM IST
  • Facebook
  • Twitter
  • Whatsapp

ಮುಂಬೈ(ನ.20): IPL 2022 ಟೂರ್ನಿಗೆ ಕಾಯುತ್ತಿರುವ ಅಭಿಮಾನಿಗಳಿಗೆ ಬಿಸಿಸಿಐ(BCCI) ಗುಡ್‌ನ್ಯೂಸ್ ನೀಡಿದೆ. ಈಗಾಗಲೇ ಐಪಿಎಲ್ 2020 ಟೂರ್ನಿಯಲ್ಲಿ ಭಾರತದಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಘೋಷಿಸಿತ್ತು. ಇಂದು ಭಾರತದಲ್ಲಿ ಟೂರ್ನಿ ಆಯೋಜನೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.  ಇದೀಗ ಭಾರತದಲ್ಲಿ(India) ಐಪಿಎಲ್ ಆಯೋಜನೆಗೆ ತಯಾರಿ ಆರಂಭಗೊಂಡಿದೆ.

ಐಪಿಎಲ್ 2021ರ ಫೈನಲ್ ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡಕ್ಕೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಜಯ್ ಶಾ, ಮುಂದಿನ ಐಪಿಎಲ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲಾಗುವುದು ಎಂದಿದ್ದರು. ಇದೀಗ ಜಯ್ ಶಾ(Jay Shah), ಐಪಿಎಲ್ ಆಯೋಜನೆಯನ್ನು ಖಚಿತಪಡಿಸಿದ್ದಾರೆ. ಈ ಹಿಂದಿನಂತೆ ಭಾರತದ ನಗರಗಳಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. ಐಪಿಎಲ್ 2022 ಟೂರ್ನಿ ವಿಶೇಷತೆ ಅಂದರೆ 10 ತಂಡಗಳು ಹೋರಾಟ ನಡಸಲಿದೆ. 10 ನಗರಗಳಲ್ಲಿ ಟೂರ್ನಿ ಆಯೋಜನೆಗೊಳ್ಳಲಿದೆ.

IPLಗೆ ಅಹಮ್ಮದಾಬಾದ್, ಲಕ್ನೌ ಹೊಸ 2 ತಂಡ; ಬಿಡ್ಡಿಂಗ್ ಗೆದ್ದ RPSG ಹಾಗೂ CVC ಕ್ಯಾಪಿಟಲ್!

ಬಿಸಿಸಿಐ ಈಗಾಗಲೇ ಎರಡು ಹೊಸ ತಂಡಗಳ ಬಿಡ್ಡಿಂಗ್ ಮುಗಿಸಿದೆ. ಮುಂದಿನ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ ಮೆಘಾ ಹರಾಜು(IPL Players Auction) ನಡೆಯಲಿದೆ. ತಂಡದಲ್ಲಿ ಆಟಗಾರರು ಅದಲು ಬದಲಾಗಲಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಬಹುತೇಕ ಬದಲಾಗಲಿದೆ. ಹೊಸ ನಾಯಕ, ಹೊಸ ಆಟಗಾರರು ತಂಡ ಸೇರಿಕೊಳ್ಳಲಿದ್ದಾರೆ. 

ಐಪಿಎಲ್ ಟೂರ್ನಿ ಆಯೋಜನೆಗೆ ಎಲ್ಲಾ ಸಿದ್ಧತೆಗಳು ಆರಂಭಗೊಂಡಿದೆ. ಈ ಬಾರಿ ಅಭಿಮಾನಿಗಳು ಪ್ರವೇಶವಿದೆ. ಕೆಲ ಕಂಡೀಷನ್ ಕೂಡ ಇದೆ. ಆದರೆ ಈ ಹಿಂದಿನಂತೆ ಅಭಿಮಾನಿಗಳ ತಮ್ಮ ನೆಚ್ಚಿನ ತಂಡಕ್ಕೆ ಚಿಯರ್ ಅಪ್ ಮಾಡಲು ಅವಕಾಶವಿದೆ ಎಂದು ಜಯ್ ಶಾ ಹೇಳಿದ್ದಾರೆ. 

IPL Auction:ಹಳೆ ತಂಡಕ್ಕೆ ನಾಲ್ವರ ರಿಟೈನ್, ಹೊಸ ತಂಡಕ್ಕೆ ಆರಂಭಿಕ 3 ಖರೀದಿ, ಹರಾಜಿನ ರೂಲ್ಸ್!

2021ರ ಐಪಿಎಲ್ ಟೂರ್ನಿಯ ಮೊದಲ ಭಾಗ ಭಾರತದಲ್ಲಿ ಆಯೋಜನೆಯಾಗಿತ್ತು. ಆದರೆ ಕ್ರೀಡಾಭಿಮಾನಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅದರೂ ಕೊರೋನಾ ತಗುಲಿದ ಕಾರಣ ಟೂರ್ನಿ ಅರ್ಧಕ್ಕೆ ಮೊಟಕು ಗೊಂಡಿತ್ತು. ಬಳಿಕ ಬಿಸಿಸಿಐ ಸತತ ಪ್ರಯತ್ನಗಳಿಂದ ದುಬೈನಲ್ಲಿ ಐಪಿಎಲ್ 2021 ಟೂರ್ನಿಯ ಎರಡನೇ ಭಾಗ ಮುಂದುವರಿಸಲಾಯಿತು. ಕೊರೋನಾ ಸೇರಿದಂತೆ ಹಲವು ಅಡೆ ತಡೆ ನಡುವೆ ಬಿಸಿಸಿಐ ಯಶಸ್ವಿಯಾಗಿ ಟೂರ್ನಿ ಆಯೋಜಿಸಿತು.

ಇತ್ತೀಚೆಗೆ ನಡೆದ ಹೊಸ ತಂಡಗಳ ಬಿಡ್ಡಿಂಗ್‌ನಲ್ಲಿ ಸಂಜೀವ್ ಗೊಯಂಕಾ ಮಾಲೀಕತ್ವದ RPSG ಹಾಗೂ ಲಂಡನ್ ಮೂಲದ ಸಿವಿಸಿ ಕ್ಯಾಪಿಟಲ್ ಹೊಸ ತಂಡಗಳನ್ನು ಖರೀದಿಸಿದೆ. ಅಹಮ್ಮದಾಬಾದ್ ಹಾಗೂ ಲಖ್ನೌ ತಂಡಗಳು ಐಪಿಎಲ್ 2022ರಿಂದ ಹೊಸದಾಗಿ ಅಖಾಡಕ್ಕಿಳಿಯಲಿದೆ. ಗೊಯೆಂಕಾ ಬರೋಬ್ಬರಿ 7,090 ಕೋಟಿ ರೂಪಾಯಿ ನೀಡಿ ತಂಡ ಖರೀದಿಸಿದರೆ, ಸಿವಿಸಿ ಕ್ಯಾಪಿಟಲ್ 5,600 ಕೋಟಿ ರೂಪಾಯಿ ನೀಡಿ ತಂಡ ಖರೀದಿಸಿತ್ತು.

ಹೊಸ ತಂಡ ಸೇರ್ಪೆಡೆಯಿಂದ ಐಪಿಎಲ್ ಹರಾಜಿನಲ್ಲಿ ಭಾರಿ ಪೈಪೋಟಿ ಏರ್ಪಡಲಿದೆ. ಸದ್ಯ ಕಣದಲ್ಲಿರುವ 8 ತಂಡಗಳಿಗೆ ಕೇವಲ ನಾಲ್ವರನ್ನು ರಿಟೈನ್ ಮಾಡಿಕೊಳ್ಳಲು ಮಾತ್ರ ಅವಕಾಶವಿದೆ. ಇನ್ನುಳಿದ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ. ಇತ್ತ ಹೊಸ ಎರಡು ತಂಡಕ್ಕೆ ಆರಂಭದಲ್ಲೇ 3 ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಬಲಿಷ್ಠ ಮೂವರು ಆಟಗಾರರನ್ನು ತಂಡ ಖರೀದಿ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕ ಆಗಮಿಸಲಿದ್ದಾರೆ. ಕೊಹ್ಲಿಯನ್ನು ಆರ್‌ಸಿಬಿ ರಿಟೈನ್ ಮಾಡಿಕೊಳ್ಳಲಿದೆ. ಇತ್ತ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಬೆಂಗಳೂರು ತಂಡದ ಬಹುತೇಕ ಹೊಸ ಮುಖಗಳನ್ನು ಕಾಣಲಿದೆ. ಪ್ರತಿ ಹರಾಜಿನಲ್ಲಿ ಆಟಗಾರರನ್ನು ಉಳಿಸಿಕೊಂಡು ಕೋರ್ ತಂಡವನ್ನೇ ಇಟ್ಟುಕೊಂಡಿದ್ದ ಮುಂಬೈ ಇಂಡಿಯನ್ಸ್ ಕೂಡ ಈ ಬಾರಿ ಬದಲಾಗಲಿದೆ.

Follow Us:
Download App:
  • android
  • ios