Asianet Suvarna News Asianet Suvarna News

Asia Cup ಪಾಕಿಸ್ತಾನಕ್ಕೆ ಸುಲಭ ಗುರಿ ನೀಡಿದ ಆಫ್ಘಾನಿಸ್ತಾನ, ಕ್ಷೀಣಿಸುತ್ತಿದೆ ಭಾರತದ ಫೈನಲ್ ಕನಸು!

ಭಾರತದ ಏಷ್ಯಾಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಕಾರಣ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆಫ್ಘಾನಿಸ್ತಾನ ಸಾಧಾರಣ ಮೊತ್ತ ಸಿಡಿಸಿದೆ.

Asia Cup 2022 t20 Pakistan restrict Afghanistan by 129 runs in super 4 clash India qualify opportunity become narrow ckm
Author
First Published Sep 7, 2022, 9:04 PM IST

ದುಬೈ(ಸೆ.07):  ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಹೋರಾಟ ತೀವ್ರ ಕುತೂಹಲ ಕೆರಳಿಸುತ್ತಿದೆ. ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ಇಂದಿನ ಹೋರಾಟ ಭಾರತದ ಪಾಲಿಗೂ ಅತ್ಯಂತ ಪ್ರಮುಖವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಆಫ್ಘಾನಿಸ್ತಾನ 6 ವಿಕೆಟ್ ನಷ್ಟಕ್ಕೆ 129 ರನ್ ಸಿಡಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಸುಲಭ ಟಾರ್ಗೆಟ್ ನೀಡಿದೆ. ಈಗಾಗಲೇ ಭಾರತ ವಿರುದ್ಧ ಗೆಲುವು ಸಾಧಿಸಿರುವ ಪಾಕಿಸ್ತಾನ ಇದೀಗ ಆಫ್ಘಾನಿಸ್ತಾನ ಮಣಿಸಿ ಏಷ್ಯಾಕಪ್ ಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳಲು ತುದಿಗಾಲ್ಲಿ ನಿಂತಿದೆ. ಇತ್ತ ಆಫ್ಘಾನಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ಮಣಿಸಿ ಜೀವಂತವಾಗಿರಲು ಯತ್ನಿಸುತ್ತಿದೆ. ಈ ರೋಚಕ ಹೋರಾಟ ಭಾರತದ ಎದೆಬಡೆತ ಹೆಚ್ಚಿಸಿದೆ.

ಟಾಸ್ ಸೋತು(Asia Cup match) ಬ್ಯಾಟಿಂಗ್ ಇಳಿದ ಆಫ್ಘಾನಿಸ್ತಾನ(Afghanistan vs Pakistan) ದಿಟ್ಟ ಆರಂಭ ಪಡೆಯಿತು. ಆದರೆ ಆರಂಭಿಕರ ಜೊತೆಯಾಟ 36 ರನ್‌ಗಳಿಗೆ ಅಂತ್ಯವಾಯಿತು. ರೆಹಮಾನುಲ್ಲಾ ಗುರ್ಬಾಜ್ 17 ರನ್ ಸಿಡಿಸಿ ಔಟಾದರು. ಹಜ್ರತುಲ್ಲಾ ಝೈಜೈ 21 ರನ್ ಕಾಣಿಕೆ ನೀಡಿದರು. ಇತ್ತ ಇಬ್ಹಾಹಿಂ ಜರ್ದಾನ್ ಹೋರಾಟ ನೀಡಿದರು. ಆದರೆ ಕರೀಮ್ ಜನತ್ 15 ರನ್ ಸಿಡಿಸಿ ಔಟಾದರು.

Asia cup 2022 ಪಾಕ್ ವಿರುದ್ಧ ಆಫ್ಘಾನ್ ಗೆದ್ದರೆ ಭಾರತಕ್ಕಿದೆಯಾ ಫೈನಲ್ ಅವಕಾಶ?

ನಜೀಬುಲ್ಲಾ ಜರ್ದಾನ್ 10 ರನ್ ಸಿಡಿಸಿ ಔಟಾದರು.  ನಾಯಕ ಮೊಹಮ್ಮದ್ ನಬಿ ಖಾತೆ ತೆರೆಯುವ ಮುನ್ನವೇ ಔಟಾದರು ಇಬ್ರಾಹಿಂ ಜರ್ದಾನ್ 35 ರನ್ ಸಿಡಿಸಿ ಔಟಾದರು.   ಅಂತಿಮ ಹಂತದಲ್ಲಿ ಅಜ್ಮತುಲ್ಹಾ ಒಮರ್ಜೈ ಹಾಗೂ ರಶೀದ್ ಖಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ಪ್ರಯತ್ನಿಸಿದರು. ಆದರೆ ಪಾಕಿಸ್ತಾನ ಬೌಲಿಂಗ್ ಮುಂದೆ ಸಾಧ್ಯವಾಗಲಿಲ್ಲ. 

ಅಜ್ಮತುಲ್ಹಾ ಒಮರ್ಜೈ ಅಜೇಯ 10 ರನ್ ಹಾಗೂ ರಶೀದ್ ಖಾನ್ ಅಜೇಯ18 ರನ್ ಸಿಡಿಸಿದರು. ಈ ಮೂಲಕ ಆಫ್ಘಾನಿಸ್ತಾನ 6 ವಿಕೆಟ್ ನಷ್ಟಕ್ಕೆ 129 ರನ್ ಸಿಡಿಸಿತು.  

Asia Cup 2022: ಭಾರತದ ಆಟಗಾರರು ವಿಮಾನದ ವಿಂಡೋಸೀಟ್‌ಗಾಗಿ ಫೈಟ್‌ ಮಾಡ್ತಿದ್ದಾರೆ!

ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಭಾರತಕ್ಕೂ(Team India) ಪ್ರಮುಖವಾಗಿದೆ. ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಭಾರತ ಎರಡು ಪಂದ್ಯ ಸೋತಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಸೋತ ಟೀಂ ಇಂಡಿಯಾ ಇದೀಗ ಆಫ್ಘಾನಿಸ್ತಾನ ಗೆಲುವಿಗಾಗಿ ಪಾರ್ಥಿಸುತ್ತಿದೆ. ಪಾಕಿಸ್ತಾನ ವಿರುದ್ದ ಅಫ್ಘಾನಿಸ್ತಾನ ಗೆಲುವು ಸಾಧಿಸಿದರೆ ಭಾರತಕ್ಕೆ ಫೈನಲ್(Asia Cup Final) ಪ್ರವೇಶಕ್ಕೆ ಕೊನೆಯ ಅವಕಾಶದ ಬಾಗಿಲು ತೆರಯಲಿದೆ. ಆದರೆ ಇಷ್ಟಕ್ಕೆ ಭಾರತ ಫೈನಲ್ ಪ್ರವೇಶಿಸುವುದಿಲ್ಲ. ಇದರ ಜೊತೆ ಶ್ರೀಲಂಕಾ ಗೆಲುವು, ಭಾರತದ ರನ್ ರೇಟ್ ಕೂಡ ಮುಖ್ಯವಾಗಲಿದೆ. ಆದರೆ ಆಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸದರೆ ಭಾರತ ಏಷ್ಯಾಕಪ್ ಟೂರ್ನಿಯಿಂದ ಹೊರಬೀಳಲಿದೆ.

 ಏಷ್ಯಾಕಪ್‌: ಆವೇಶ್‌ ಬದಲಿಗೆ ದೀಪಕ್‌ ಚಹರ್‌
ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತೀಯ ವೇಗಿ ಆವೇಶ್‌ ಖಾನ್‌ ಏಷ್ಯಾಕಪ್‌ ಟಿ20 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ದೀಪಕ್‌ ಚಹರ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ 6 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿದಿದ್ದ ಚಹರ್‌ ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದಲ್ಲಿ ತಂಡಕ್ಕೆ ವಾಪಸ್ಸಾಗಿ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಅವರನ್ನು ಏಷ್ಯಾಕಪ್‌ ಮೀಸಲು ಪಡೆಗೆ ಆಯ್ಕೆ ಮಾಡಲಾಗಿತ್ತು.

Follow Us:
Download App:
  • android
  • ios