ವಮಿಕಾ ಹುಟ್ಟಿದ ಬಳಿಕ ಮೊದಲ ಬಾರಿ ಒಟ್ಟಾಗಿ ಗಣೇಶ ಹಬ್ಬ ಆಚರಿಸಿದ ವಿರುಷ್ಕಾ ಜೋಡಿ..!
ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಸೆಪ್ಟೆಂಬರ್ 19,2023ರಂದು ತಮ್ಮ ನಿವಾಸದಲ್ಲಿ ಮಾಡಿದ ಗಣೇಶ ಹಬ್ಬದ ಫೋಟೋಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಬಿಳಿ ಕುರ್ತಾ ತೊಟ್ಟು ಪೋಸ್ ಕೊಟ್ಟರೆ, ಅನುಷ್ಕಾ ಶರ್ಮಾ ದೇಶಿ ಶೈಲಿಯಲ್ಲಿ ಸೀರೆ ತೊಟ್ಟು ಮಿಂಚಿದ್ದಾರೆ.
ಮುಂಬೈ(ಸೆ.20): ಇಡೀ ದೇಶವೇ ಸದ್ಯ ಗಣೇಶೋತ್ಸವ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ತಮ್ಮ ಮನೆಯಲ್ಲಿ ವಿಘ್ನನಿವಾರಕ ಏಕದಂತ ಗಜಮುಖನನ್ನು ಪೂಜಿಸಿ ಗಮನ ಸೆಳೆದಿದ್ದಾರೆ. ಈ ಬಾರಿಯ ಗಣೇಶ ಹಬ್ಬ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪಾಲಿಗೆ ತುಂಬಾ ವಿಶೇಷ ಎನಿಸಿಕೊಂಡಿತು. ಯಾಕೆಂದರೆ, ಇದೇ ಮೊದಲ ಬಾರಿಗೆ ವಿರುಷ್ಕಾ ಜೋಡಿ ತಮ್ಮ ಎರಡೂವರೆ ವರ್ಷದ ಮಗಳು ವಮಿಕಾ ಜತೆ ತಮ್ಮ ನಿವಾಸದಲ್ಲಿ ಒಟ್ಟಾಗಿ ಗಣೇಶ ಹಬ್ಬ ಆಚರಿಸಿದ್ದಾರೆ. ಈ ತಾರಾ ಜೋಡಿ ತಮ್ಮ ವೈಯುಕ್ತಿಕ ಜೀವನವನ್ನು ತುಂಬಾ ಖಾಸಗಿಯಾಗಿಟ್ಟಿದ್ದು, ಗಣೇಶ ಹಬ್ಬದ ಸಂಭ್ರಮಾಚರಣೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಸೆಪ್ಟೆಂಬರ್ 19,2023ರಂದು ತಮ್ಮ ನಿವಾಸದಲ್ಲಿ ಮಾಡಿದ ಗಣೇಶ ಹಬ್ಬದ ಫೋಟೋಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಬಿಳಿ ಕುರ್ತಾ ತೊಟ್ಟು ಪೋಸ್ ಕೊಟ್ಟರೆ, ಅನುಷ್ಕಾ ಶರ್ಮಾ ದೇಶಿ ಶೈಲಿಯಲ್ಲಿ ಸೀರೆ ತೊಟ್ಟು ಮಿಂಚಿದ್ದಾರೆ.
ಕ್ರಿಕೆಟಿಗರ ಮನೆಯಲ್ಲಿ ಗಣೇಶೋತ್ಸವ ಸಂಭ್ರಮ
ಭಾರತದ ತಾರಾ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಸೇರಿ ಅನೇಕರು ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಿದರು. ತಮ್ಮ ಕುಟುಂಬಸ್ಥರೊಂದಿಗೆ ಹಬ್ಬದ ಸಂಭ್ರಮದಲ್ಲಿರುವ ಫೋಟೋ, ವಿಡಿಯೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ.
Dil Jashn Bole: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಧಿಕೃತ ಗೀತೆ ರಿಲೀಸ್, ರಣವೀರ್ ಶೈನಿಂಗ್
ಆಸೀಸ್ ಎದುರಿನ ಸರಣಿಗೆ ಸಜ್ಜಾಗುತ್ತಿದೆ ಟೀಂ ಇಂಡಿಯಾ:
ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ನಡೆದ 16ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಲಂಕಾ ಎದುರು 10 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಂತಿಮ ಹಂತದ ಸಿದ್ದತೆಯಲ್ಲಿರುವ ಟೀಂ ಇಂಡಿಯಾ, ತವರಿನಲ್ಲಿ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಪೈಕಿ ಸೆ.22ರಂದು ಮೊಹಾಲಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಸೆ.24ರಂದು ಇಂದೋರ್, ಸೆ.27ರಂದು ರಾಜ್‌ಕೋಟ್ ಕ್ರಮವಾಗಿ 2 ಹಾಗೂ 3ನೇ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ವಿಶ್ವಕಪ್ ಟೂರ್ನಿಗೂ ಮುನ್ನ ತನ್ನ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!
ಆಸ್ಟ್ರೇಲಿಯಾ ಎದುರಿನ ಆರಂಭಿಕ 2 ಪಂದ್ಯಕ್ಕೆ ಟೀಂ ಇಂಡಿಯಾ:
ಕೆ ಎಲ್ ರಾಹುಲ್(ನಾಯಕ), ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ವಾಶಿಂಗ್ಟನ್ ಸುಂದರ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
3ನೇ ಹಾಗೂ ಅಂತಿಮ ಪಂದ್ಯಕ್ಕೆ ಟೀಂ ಇಂಡಿಯಾ
ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ,ಶುಬಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಲ್ ರಾಹುಲ್, ಇಶಾನ್ ಕಿಶನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.