Asianet Suvarna News Asianet Suvarna News

ಅಯೋಧ್ಯೆಯಲ್ಲಿ ನಟಿ ಹೇಮಾಮಾಲಿನಿ: 75ನೇ ವಯಸ್ಸಲ್ಲೂ ಭರತನಾಟ್ಯ ಕಂಡು ಮೂಕವಿಸ್ಮಿತರಾದ ಪ್ರೇಕ್ಷಕರು

75ನೇ ವಯಸ್ಸಲ್ಲೂ ಅಯೋಧ್ಯೆಯಲ್ಲಿ ನಟಿ ಹೇಮಾಮಾಲಿನಿ ಅದ್ಭುತ ಭರತನಾಟ್ಯ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. 
 

Decked in traditional jewelry Hema Malini performed inside Ram temple in Ayodhya suc
Author
First Published Feb 18, 2024, 1:02 PM IST

ವಯಸ್ಸೆನ್ನುವುದು ಒಂದು ಲೆಕ್ಕವಷ್ಟೇ ಎನ್ನುವ ಮಾತಿದ್ದರೂ ಅದನ್ನು ಸಾಧಿಸಿ ತೋರಿಸುವವರು ಬೆರಳೆಣಿಕೆಯಷ್ಟು ಮಂದಿ. ಕೆಲವೇ ಕೆಲವು ಜನರು ಮಾತ್ರ ವಯಸ್ಸನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಅವಿತರವಾಗಿ ದುಡಿಯುತ್ತಾರೆ. ಅವರ ದಿನನಿತ್ಯ ಕಾರ್ಯವೈಖರಿ, ದಿನಚರಿ ನೋಡಿದರೆ ಉಳಿದವರು ಹುಬ್ಬೇರಿಸಬೇಕಷ್ಟೇ. ನಿಜವಾಗಿಯೂ ಇವರಿಗೆ ವಯಸ್ಸಾಗಿದ್ದು ಹೌದಾ ಎನ್ನುವ ಹಾಗೆ ಅಚ್ಚರಿ ಪಡುವಷ್ಟು ರೀತಿಯಲ್ಲಿ ನಡೆದುಕೊಳ್ಳುವ ಕೆಲವೇ ಕೆಲವು ಜನರಿದ್ದಾರೆ. ಅದರಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ಸೆಲೆಬ್ರಿಟಿಗಳನ್ನು ನೋಡಿದಾಗ ಯುವಕ-ಯುವತಿಯರೂ ನಾಚಿಕೊಳ್ಳಬೇಕು, ಹಾಗಿರುತ್ತದೆ ಅವರ ಕಾರ್ಯ ಚಟುವಟಿಕೆ. ಅಂಥ ಅಪರೂಪದ ಕಲಾವಿದರಲ್ಲಿ ಒಬ್ಬರು ಬಾಲಿವುಡ್​ ನಟಿ, ರಾಜಕಾರಣಿ ಹೇಮಾ ಮಾಲಿನಿ.

ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದ ವೇಳೆಯಿಂದಲೂ ಬಿ-ಟೌನ್​ ಆಳಿ, ಕನಸಿನ ಕನ್ಯೆ (Dream Girl) ಎಂದೇ ಬಿರುದು ಪಡೆದಿರುವ, ಇಂದಿಗೂ ಅದೇ ಬಿರುದನ್ನು ಉಳಿಸಿಕೊಂಡಿರುವ ನಟಿ ಹೇಮಾ ಮಾಲಿನಿ. ಕಳೆದ ಅಕ್ಟೋಬರ್​ 16 ರಂದು  75 ವಸಂತಗಳನ್ನು ಪೂರೈಸಿದ್ದಾರೆ ನಟಿ. ವಯಸ್ಸು ದೇಹಕ್ಕೆ ಮಾತ್ರ ಎನ್ನುವ ಮಾತಿಗೆ ಅನ್ವರ್ಥರಾಗಿರುವವರಲ್ಲಿ 1948ರ ಅಕ್ಟೋಬರ್‌ 16ರಂದು ಜನಿಸಿರುವ ಹೇಮಾ ಮಾಲಿನಿ ಕೂಡ ಒಬ್ಬರು. ಈ ವಯಸ್ಸಿನಲ್ಲಿಯೂ ಅವರು ಅದ್ಭುತವಾಗಿ ಶಾಸ್ತ್ರೀಯ ನೃತ್ಯ ಮಾಡಬಲ್ಲರು. ಬಣ್ಣ ಹಚ್ಚಿ ವೇದಿಕೆಯ ಮೇಲಿಳಿದರೆ ಇವರಿಗೆ ನಿಜಕ್ಕೂ ಇಷ್ಟು ವಯಸ್ಸಾಗಿದ್ದು ಹೌದಾ ಎನ್ನುವಂಥ ಸೌಂದರ್ಯ.  ಹೇಮಾ ಮಾಲಿನಿ ಅವರು ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇವರು ರಾಜಕಾರಣಿಯೂ ಹೌದು. 2014ರಿಂದ ಮಥುರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಬಿಜೆಪಿ ಆಡಳಿತದಲ್ಲಿ ಲೋಕಸಭೆ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2011ರಿಂದ 2012ರವರೆಗೆ ಕರ್ನಾಟಕ ರಾಜ್ಯಸಭೆಯ ಸದಸ್ಯೆಯಾಗಿದ್ದರು.

ಬೇರೆಯವ್ರ ಜೊತೆ ಲಿಪ್​ಲಾಕ್​ ಸೀನ್​ಗೆ ಹೇಮಾ ಮಾಲಿನಿ ರೆಡಿ ಇದ್ದಾರಾ? ನಟಿ ಹೇಳಿದ್ದೇನು?

ಕಳೆದ ಜನವರಿ 22ರಂದು ಎಲ್ಲರಿಗೂ ತಿಳಿದಿರುವಂತೆ ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇಡೀ ವಿಶ್ವವೇ ನಿಬ್ಬೆರಗಾಗುವ ರೀತಿಯಲ್ಲಿ, ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿತು. ಈ ಸಂತಸದ ಕ್ಷಣದಲ್ಲಿ ಭಾಗಿಯಾಗಲು ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು ಆಗಮಿಸಿದ್ದರು. ಸಿನಿಮಾ ಕ್ಷೇತ್ರದಿಂದಲೂ ಹಲವಾರು ತಾರೆಯರು ಹೋಗಿದ್ದರು. ಅವರಲ್ಲಿ ಒಬ್ಬರು ನಟಿ ಹೇಮಾ ಮಾಲಿನಿ. ಅಂದಹಾಗೆ ಹೇಮಾ ಮಾಲಿನಿಯವರ ಭರತನಾಟ್ಯ ಪ್ರದರ್ಶನ ಅಂದು ನಡೆದಿತ್ತು. ಅದರ ವಿಡಿಯೋ ಇದೀಗ ವೈರಲ್​ ಆಗಿದೆ. ನಟಿ ಹೇಮಾ ಮಾಲಿನಿ ಅವರ 75ನೇ ವಯಸ್ಸಿನಲ್ಲಿಯೂ ನಡೆದ ಭರತನಾಟ್ಯ ಪ್ರದರ್ಶನಕ್ಕೆ ಪ್ರೇಕ್ಷಕರು ಮೂಕ ವಿಸ್ಮಿತರಾಗಿದ್ದಂತೂ ದಿಟ. 

ಇನ್ನು ಹೇಮಾ ಮಾಲಿನಿಯವರ ಸಿನಿ ಕರಿಯರ್​ ಕುರಿತು ಹೇಳುವುದಾದರೆ,  1963ರಲ್ಲಿ ತಮಿಳು ಚಿತ್ರ ಇಧು ಸತ್ಯಂ ಮೂಲಕ ಇವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 1968ರಲ್ಲಿ ಬಿಡುಗಡೆಗೊಂಡ ಸಪ್ನೋ ಕಾ ಸೌದಾಗರ್ ಚಿತ್ರದಿಂದ ಬಾಲಿವುಡ್​ನಲ್ಲಿ ಕಾಣಿಸಿಕೊಂಡರು.  ಧರ್ಮೇಂದ್ರ ಅವರ ಜೊತೆ 1980ರಲ್ಲಿ ವಿವಾಹವಾಯಿತು. ಇವರಿಗೆ  ಹಲವು ಫಿಲ್ಮ್‌ಫೇರ್‌ ಪ್ರಶಸ್ತಿಗಳು ದೊರಕಿವೆ. 2000ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅಯೋಧ್ಯೆಯಲ್ಲಿ ಭರತನಾಟ್ಯದ ಕುರಿತು ಮಾತನಾಡಿದ ಹೇಮಾ ಮಾಲಿನಿ ಅವರು,  ನಾನು ರಾಮ್ ಲಲ್ಲಾ ಅವರ ದೇವಸ್ಥಾನದಲ್ಲಿ ಭರತ ನಾಟ್ಯ ಪ್ರದರ್ಶನವನ್ನು ನೀಡಿದ್ದೇನೆ. ಇದು ಒಂದು ಸಂಭ್ರಮದ ಅನುಭವವಾಗಿತ್ತು ಮತ್ತು ನಾನು ಉತ್ಸಾಹದಿಂದ ನೃತ್ಯ ಮಾಡಿದ್ದೇನೆ ಅದು ಸಾರ್ವಜನಿಕರಿಂದ ಮೆಚ್ಚುಗೆ ಪಡೆಯಿತು. ನನ್ನ ನೃತ್ಯದ ಕೆಲವು ಕ್ಷಣಗಳ ಕೆಲವು ಫೋಟೋಗಳನ್ನು ನಿಮಗಾಗಿ ಸೆರೆಹಿಡಿಯಲಾಗಿದೆ ಎಂದು ಬರೆದುಕೊಂಡಿದ್ದು, ವಿಡಿಯೋ ಮತ್ತು ಫೋಟೋಗಳನ್ನು ಶೇರ್​ ಮಾಡಿದ್ದಾರೆ. 
 

ಹೇಮಾಮಾಲಿನಿ @75: ಶಾರುಖ್​ ಖಾನ್​ರನ್ನು ರಿಜೆಕ್ಟ್​ ಮಾಡಿದ್ದ ಕನಸಿನ ಕನ್ಯೆಯ ಇಂಟರೆಸ್ಟಿಂಗ್​ ವಿಷ್ಯ ರಿವೀಲ್​!

Follow Us:
Download App:
  • android
  • ios