Asianet Suvarna News Asianet Suvarna News

ಮಾಧುರಿ ದೀಕ್ಷಿತ್​ಗೆ ಬಿಗ್​ಬಾಸ್​ ಅಂಕಿತಾ ಸೆಡ್ಡು- ಧಕ್​ ಧಕ್​ ಎಂದು ಕಿಚ್ಚು ಹೊತ್ತಿಸಿದ ಕಾಂಟ್ರವರ್ಸಿ ಕ್ವೀನ್​!

ಮಾಧುರಿ ದೀಕ್ಷಿತ್​ಗೆ ಬಿಗ್​ಬಾಸ್​ ಕಾಂಟ್ರವರ್ಸಿ ಕ್ಷೀನ್​ ಅಂಕಿತಾ ಸೆಡ್ಡು- ಧಕ್​ ಧಕ್​ ಕರನೇ ಲಗಾ ಎಂದು ಕಿಚ್ಚು ಹೊತ್ತಿಸಿದ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ! 
 

Ankita Lokhandes steamy dance on Madhuri Dixits Dhak Dhak Karne Laga is suc
Author
First Published Feb 17, 2024, 1:10 PM IST

 ಹಿಂದಿ ಬಿಗ್​ಬಾಸ್​ ಖ್ಯಾತಿಯ ಅಂಕಿತಾ ಲೋಖಂಡೆ ಕೆಲ ದಿನಗಳಿಂದ ಭಾರಿ ಸದ್ದು ಮಾಡುತ್ತಿದ್ದಾರೆ. ನಟ ಸುಶಾಂತ್​ ಸಿಂಗ್​ ಅವರ ಪ್ರೇಯಸಿಯಾಗಿದ್ದ ಅಂಕಿತಾ ಲೋಖಂಡೆ ಮೊದಲಿನಿಂದಲೂ ಸುದ್ದಿಯಲ್ಲಿ ಇರುವವರೇ. ಇದೀಗ ಬಿಗ್​ಬಾಸ್​ ಮನೆಗೆ ಹೋದ ಮೇಲಂತೂ ಅವರು ಮತ್ತು ಪತಿ ವಿಕ್ಕಿ ಜೈನ್​ ಡ್ರಾಮಾ ಅಷ್ಟಿಷ್ಟಲ್ಲ. ಅಷ್ಟಕ್ಕೂ ನಟಿ ಸುಶಾಂತ್ ಸಿಂಗ್​ಗೆ ಕೈಕೊಟ್ಟವರು ಎಂದೇ ಖ್ಯಾತಿ ಪಡೆದಿರುವ ಅಂಕಿತಾ ನಂತರ ವಿಕ್ಕಿ ಜೈನ್​ ಅವರನ್ನು ಮದುವೆಯಾಗಿದ್ದು, ಈ ಜೋಡಿ ಬಿಗ್​ಬಾಸ್​ 17ನ ಒಳಗೆ ಹೋಗಿ ಹಂಗಾಮಾ ಸೃಷ್ಟಿಸಿದ್ದು ಬಿಗ್​ಬಾಸ್​ ಪ್ರಿಯರಿಗೆ ಗೊತ್ತೇ ಇದೆ. ಪ್ರತಿದಿನವೂ ಹಲ್​ಚಲ್​ ಸೃಷ್ಟಿಸುವ ಮೂಲಕ ಅಸಭ್ಯ, ಅಶ್ಲೀಲ ವರ್ತನೆಗಳಿಂದ ಬಿಗ್​ಬಾಸ್​ನ ಟಿಆರ್​ಪಿ ಹೆಚ್ಚಿಸುವಲ್ಲಿ ಈ ದಂಪತಿ ಬಹುದೊಡ್ಡ ಕೊಡುಗೆ ನೀಡಿದ್ದರು.  ಒಂದು ಹಂತದಲ್ಲಿ ಅಂಕಿತಾ ಪತಿಯ ಮೇಲೆ ಚಪ್ಪಲಿ ಕೂಡ ಎಸೆದು ಅಸಭ್ಯವಾಗಿ ವರ್ತಿಸಿದ್ದರು. ತಾವು ಗರ್ಭಿಣಿ ಎಂದು ಹೇಳುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದ್ದರು.

ವಿಕ್ಕಿ ಜೈನ್​ ಕೆಲ ವಾರಗಳಲ್ಲಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿದ್ದರೆ, ಅಂಕಿತಾ ನಾಲ್ಕನೇ ರನ್ನರ್​ ಅಪ್​ ಆದರು. ಈ ಬಗ್ಗೆ ಹೊರಕ್ಕೆ ಬಂದು ಬಹಳ ಬೇಸರ ಕೂಡ ವ್ಯಕ್ತಪಡಿಸಿದ್ದಿದೆ. ಬಿಗ್​ಬಾಸ್​ನಲ್ಲಿ ಗೆಲ್ಲಲಿ, ಬಿಡಲಿ ಅಲ್ಲಿ ಹೋಗಿ ಬಂದವರೆಲ್ಲರೂ ಸೆಲೆಬ್ರಿಟಿಗಳಾಗುವುದು ಮಾಮೂಲು. ಅಭಿಮಾನಿಗಳ ಸಂಖ್ಯೆಯೂ ಏರುತ್ತದೆ. ಅದೇ  ರೀತಿ ಇದೀಗ ಅಂಕಿತಾ ಪಬ್ಲಿಕ್​ ಫಿಗರ್​ ಆಗಿ ಹೊಮ್ಮಿದ್ದು, ತಾವು ಕಾಸ್ಟಿಂಗ್​ ಕೌಚ್​ ಅನುಭವಿಸಿರುವ ಕುರಿತು ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು.  ಯಾರ ಹೆಸರನ್ನೂ ಉಲ್ಲೇಖಿಸದ ಅವರು, ಈ ಹಿಂದೆ ಕೆಲವು ನಟಿಯರು ಹೇಳಿದ ಡೈಲಾಗ್​ಗಳನ್ನು ಪುನಃ ಹೇಳಿದ್ದರು.

ಆಗ ನನಗಿನ್ನೂ 19 ವರ್ಷ... ಸೌತ್​ ನಿರ್ಮಾಪಕ ಮಂಚಕ್ಕೆ ಕರೆದ್ರು... ಅನುಭವ ಹೇಳಿದ ಬಿಗ್​ಬಾಸ್​ ಅಂಕಿತಾ

ಇದೀಗ ಮಾಧುರಿ ದೀಕ್ಷಿತ್​ ಅವರಿಗೆ ಸೆಡ್ಡು ಹೊಡೆಯುವಂತೆ ಧಕ್​ ಧಕ್​ ಕರನೇಲಗಾ ಹಾಡಿಗೆ ಸ್ಟೆಪ್​ ಹಾಕಿದ್ದಾರೆ. ಸೀರೆಯಲ್ಲಿ ಮಾದಕವಾಗಿ ಕಾಣಿಸಿಕೊಂಡಿರುವ ಅಂಕಿತಾ ಅವರು, ಈ ಹಾಡಿಗೆ ಮಾಧುರಿ ದೀಕ್ಷಿತ್​ ಹಾಕಿದಂತೆಯೇ ಸ್ಟೆಪ್​ ಹಾಕಿದ್ದು, ಸಹಸ್ರಾರು ಮಂದಿ ಹಾರ್ಟ್​ ಇಮೋಜಿ ಕಳೆಸಿದ್ದಾರೆ. 1992ರಲ್ಲಿ ರಿಲೀಸ್​ ಆಗಿದ್ದ ಬೇಟಾ ಚಿತ್ರದಲ್ಲಿ ಅನಿಲ್​ ಕಪೂರ್​ ಜೊತೆ ಮಾಧುರಿ ದೀಕ್ಷಿತ್​ ರೊಮ್ಯಾನ್ಸ್ ಮಾಡಿದ್ದರು. ಈ ಚಿತ್ರಕ್ಕಿಂತಲೂ ಹೆಚ್ಚಾಗಿ ಮೈಚಳಿ ಬಿಟ್ಟು ನಟಿಸಿದ್ದ ಮಾಧುರಿ ದೀಕ್ಷಿತ್​ ಸಕತ್​ ಫೇಮಸ್​ ಆಗಿದ್ದರು. ಅಲ್ಲಿಂದ ಇಲ್ಲಿಯರವರೆಗೂ ನಟಿಗೆ ಧಕ್​ ಧಕ್​ ಬೆಡಗಿ ಎಂದೇ ಹೇಳಲಾಗುತ್ತದೆ. ಆ ಹಾಡು ಎವರ್​ಗ್ರೀನ್​ ಆಗಿ ಇಂದಿಗೂ ಹಲವರು ರೀಲ್ಸ್​ ಮಾಡುತ್ತಾರೆ. ಅದೇ ರೀತಿ ಅಂಕಿತಾ ಕೂಡ ಮಾಡಿದ್ದು, ಸಕತ್​ ವೈರಲ್​ ಆಗಿದೆ.


ಈಗ ಏನಿದ್ರೂ ಸೋಷಿಯಲ್ ಮೀಡಿಯಾಗಳ ಕಾಲಘಟ್ಟ. ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂಗಳ ಹಾವಳಿ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗೋಕೆ ಜನ್ರು ನಾನಾ ರೀತಿಯ ವಿಡಿಯೋ ಮಾಡ್ತಾನೆ ಇರ್ತಾರೆ.  ಅದರಲ್ಲೂ ಹಳೆಯ ಫಿಲ್ಮ್ ಸಾಂಗ್‌ಗಳು ಇಂಥಾ ಡ್ಯಾನ್ಸ್ ವಿಡಿಯೋಗಳಿಂದ ವೈರಲ್ ಆಗುತ್ತವೆ. ಹಾಗೆಯೇ ಅಂಕಿತಾ ಅವರು,  ಬಾಲಿವುಡ್‌ನ ಹಲವರ ಫೇವರಿಟ್‌ ಹಿಟ್‌ ಸಾಂಗ್‌ ಧಕ್ ಧಕ್ ಕರನೇ ಲಗಾ ಹಾಡಿಗೆ ಸ್ಟೆಪ್ ಹಾಕಿ ಪಡ್ಡೆ ಹುಡುಗರ ಹಾರ್ಟ್‌ ಬೀಟ್ ಹೆಚ್ಚಿಸಿದ್ದಾರೆ.  ಅಂದಹಾಗೆ ಈ ರೀಲ್ಸ್​ ಅವರು ಬಹಳ ಹಿಂದೆಯೇ ಮಾಡಿದ್ದು ಎನ್ನಲಾಗುತ್ತಿದ್ದು, ಅದೀಗ ಮತ್ತೊಮ್ಮೆ ವೈರಲ್​ ಆಗಿದೆ. 

ಒಳ್ಳೆ ಸೆಕ್ಸ್​ ಅಂದ್ರೆ ಒಳ್ಳೆ ಆಹಾರ ಇದ್ದಂತೆ: ಹಸಿಬಿಸಿಯಾಗಿ ಕಾಣಿಸಿಕೊಂಡ 'ನಟಸಾರ್ವಭೌಮ' ಬೆಡಗಿ ಅನುಪಮಾ ಹೇಳಿದ್ದೇನು?
 

Follow Us:
Download App:
  • android
  • ios