ನವೆಂಬರ್ 05ರಂದು ಡೆಲ್ಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ ಕಳೆದೊಂದುವರೆ ದಶಕದಿಂದಲೂ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾ ಮುನ್ನುಗ್ಗುತ್ತಿದ್ದಾರೆ.

ಕೋಲ್ಕತಾ(ನ.11): ಟೀಂ ಇಂಡಿಯಾ ರನ್ ಮಷೀನ್‌ ವಿರಾಟ್ ಕೊಹ್ಲಿ ಇಂದು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಿಂಗ್‌ ಕೊಹ್ಲಿಗೆ ಜಗತ್ತಿನ ಮೂಲೆ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಇದೀಗ ಮಡದಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಗೆ ವಿನೂತನವಾಗಿ ಶುಭಕೋರುವ ಮೂಲಕ ಗಮನ ಸೆಳೆದಿದ್ದಾರೆ.

ನವೆಂಬರ್ 05ರಂದು ಡೆಲ್ಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ ಕಳೆದೊಂದುವರೆ ದಶಕದಿಂದಲೂ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾ ಮುನ್ನುಗ್ಗುತ್ತಿದ್ದಾರೆ. ಆದರೆ ಇದೀಗ ಅನುಷ್ಕಾ ಶರ್ಮಾ ತೀರಾ ಅಚ್ಚರಿ ಎನ್ನುವಂತೆ ವಿರಾಟ್ ಕೊಹ್ಲಿಯ ದಶಕದ ಹಳೆಯ ಅಪರೂಪದಲ್ಲೇ ಅಪರೂಪದ ರೆಕಾರ್ಡ್‌ವೊಂದನ್ನು ಸ್ಮರಿಸುವ ಮೂಲಕ ವಿನೂತನವಾಗಿ ಕೊಹ್ಲಿಗೆ ಶುಭಕೋರಿದ್ದಾರೆ.

ಹ್ಯಾಪಿ ಬರ್ತ್ ಡೇ ವಿರಾಟ್ ಕೊಹ್ಲಿ..! ಬರ್ತ್ ಡೇ ದಿನ ಬರುತ್ತಾ 49ನೇ ಶತಕ..?

ಹೌದು, ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಅಪರೂಪದ ಬೌಲಿಂಗ್ ರೆಕಾರ್ಡ್ ಸ್ಮರಿಸಿಕೊಂಡು ಶುಭಕೋರಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭದ ದಿನಗಳಲ್ಲಿ ಹಂಗಾಮಿ ಬೌಲರ್ ಅಗಿಯೂ ಕಾಣಿಸಿಕೊಂಡಿದ್ದರು. ಇನ್ನು ಬೌಲಿಂಗ್‌ನಲ್ಲಿ ಕೊಹ್ಲಿ ಹೆಸರಿನಲ್ಲಿ ಇಂದಿಗೂ ಒಂದು ದಾಖಲೆ ಅಚ್ಚಳಿಯದೇ ಉಳಿದಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸೊನ್ನೆ ಬಾಲ್‌ಗೆ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ.

ಹೌದು, 2011ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮೊತ್ತಮೊದಲ ಬಾರಿಗೆ ಬೌಲಿಂಗ್ ಮಾಡಿದ್ದರು. ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಕೊಹ್ಲಿ ಎಸೆತದ ಮೊದಲ ಕ್ರಮವಲ್ಲದ ಎಸೆತದಲ್ಲಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಕೊಹ್ಲಿ ಎಸೆದ ಮೊದಲ ಚೆಂಡು ವೈಡ್ ಆಗಿತ್ತು. ಆದರೆ ವಿಕೆಟ್ ಹಿಂದೆ ನಿಂತಿದ್ದ ಎಂ ಎಸ್ ಧೋನಿ, ಕೆವಿನ್ ಪೀಟರ್‌ಸನ್ ಅವರನ್ನು ಸ್ಟಂಪೌಟ್ ಮಾಡಿದ್ದರು. ಹೀಗಾಗಿ ಕೊಹ್ಲಿ ಸೊನ್ನೆ ಎಸೆತದಲ್ಲಿ ವಿಕೆಟ್ ಕಬಳಿಸಿ ಸಂಭ್ರಮಿಸಿದ್ದರು.

'ಪ್ರತಿ ಬಾಲ್‌ಗೂ....': ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಸಂದೇಶ..!

ಇದೀಗ ಈ ದಾಖಲೆಯನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅನುಷ್ಕಾ ಶರ್ಮಾ, "ಅವರು ಅಕ್ಷರಶಃ ತಮ್ಮ ಜೀವನದ ಎಲ್ಲಾ ವಿಭಾಗದಲ್ಲೂ ಅತ್ಯದ್ಭುತ ವ್ಯಕ್ತಿ. ಆದರೆ ಅವರಯ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತಷ್ಟು ಗರಿಗಳನ್ನು ಸೇರಿಸಿಕೊಳ್ಳುತ್ತಲೇ ಬಂದಿದ್ದಾರೆ. ಐ ಲವ್ ಯೂ. ಏನೇ ಆದರೂ ಎಂದೆಂದಿಗೂ ನಿಮ್ಮ ಜತೆಗಿರುತ್ತೇನೆ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದಾರೆ.

View post on Instagram

ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ 2014ರಲ್ಲಿ ಅನುಷ್ಕಾ ಶರ್ಮಾ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಬಳಿಕ ಪರಿಚಯ ಸ್ನೇಹವಾಗಿ, ಹಲವು ವರ್ಷಗಳ ಡೇಟಿಂಗ್ ಬಳಿಕ 2017ರಲ್ಲಿ ಇಟಲಿಯಲ್ಲಿ ಈ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಈ ಜೋಡಿಯ ಸುಂದರ ಕುಟುಂಬಕ್ಕೆ 2021ರಲ್ಲಿ ವಮಿಕಾ ಎನ್ನುವ ಮುದ್ದಾದ ಮಗುವಿನ ಸೇರ್ಪಡೆಯಾಗಿದೆ.