Asianet Suvarna News Asianet Suvarna News
breaking news image

ಇಂಡೋ ಪಾಕ್ ಮ್ಯಾಚ್ ಸೋತ ಪಾಕಿಸ್ತಾನ: 8.4 ಲಕ್ಷದ ಟಿಕೆಟ್‌ಗೆ ಟ್ರ್ಯಾಕ್ಟರ್ ಮಾರಿದ್ದ ಪಾಕ್ ಅಭಿಮಾನಿಯ ಕಣ್ಣೀರು

ನಿನ್ನೆ ನಡೆದ ಇಂಡಿಯಾ ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಸೋಲು ಕಂಡಿದ್ದು, ಇದರಿಂದ ಪಾಕಿಸ್ತಾನದ ಅಭಿಮಾನಿಯೋರ್ವ ಕಣ್ಣೀರಿಟ್ಟಿದ್ದಾನೆ. ಈತ ಬರೀ ಪಾಕಿಸ್ತಾನ ಸೋತಿದ್ದಕ್ಕೆ ಕಣ್ಣೀರಿಟ್ಟಲ್ಲ

A Pakistan fan sold his tractor to buy Indo pak T20 cricket match ticket which costs 8.4 lakh rupees akb
Author
First Published Jun 10, 2024, 7:05 PM IST

ನ್ಯೂಯಾರ್ಕ್‌: ನಿನ್ನೆ ನಡೆದ ಇಂಡಿಯಾ ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಸೋಲು ಕಂಡಿದ್ದು, ಇದರಿಂದ ಪಾಕಿಸ್ತಾನದ ಅಭಿಮಾನಿಯೋರ್ವ ಕಣ್ಣೀರಿಟ್ಟಿದ್ದಾನೆ. ಈತ ಬರೀ ಪಾಕಿಸ್ತಾನ ಸೋತಿದ್ದಕ್ಕೆ ಕಣ್ಣೀರಿಟ್ಟಲ್ಲ, ಬದಲಾಗಿ ಈತ ಈ ಮ್ಯಾಚೊಂದರ ಟಿಕೆಟ್ ಖರೀದಿಸಲು ಬರೋಬ್ಬರಿ 8.4 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದಾನೆ. ಇಷ್ಟೊಂದು ವೆಚ್ಚ ಮಾಡಿ ತಾನು ಮ್ಯಾಚ್ ನೋಡುವುದಕ್ಕೆ ಹೋದರೂ ಮ್ಯಾಚ್ ಸೋತಿತ್ತಲ್ಲ ಎಂದು ಬೇಸರದಿಂದ ಆತ ಕಣ್ಣೀರಾಕಿದ್ದಾನೆ. 

ನಿನ್ನೆನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ T20 ವಿಶ್ವಕಪ್ 2024ರ ಗ್ರೂಪ್ ಎ ತಂಡಗಳಾದ ಭಾರತ ಪಾಕಿಸ್ತಾನ ಮಧ್ಯೆ ನಡೆದ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ ಭಾರತ ವಿರುದ್ಧ  ಪಾಕಿಸ್ತಾನ ಕೇವಲ ಆರು ರನ್‌ಗಳ ಸೋಲು ಕಂಡಿತ್ತು.  19 ಓವರ್‌ಗಳಲ್ಲಿ 119 ರನ್‌ ಬಾರಿಸುವಷ್ಟರಲ್ಲಿ ಟೀಂ ಇಂಡಿಯಾವನ್ನು ಕಟ್ಟಿ ಹಾಕಿದ ಪಾಕ್ ಪಡೆ ಬ್ಯಾಟ್ಸಮನ್‌ಗಳ ವೈಫಲ್ಯದಿಂದಾಗಿ ಕೇವಲ 120 ರನ್‌ಗಳ ಗುರಿಯನ್ನು ಬೆನ್ನತ್ತಲು ವಿಫಲವಾಗಿತ್ತು. ಇತ್ತ ಭಾರತದ ಬೌಲರ್‌ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲರ್‌ಗಳ ಮಾರಕ ದಾಳಿಯಿಂದಾಗಿ ಕೇವಲ 113/7 ಗಳಿಸಲು ಪಾಕಿಸ್ತಾನ ಸಶಕ್ತವಾಯ್ತು.

ಇದರಿಂದ  ಮ್ಯಾಚ್ ನೋಡುವುದಕ್ಕಾಗಿ ಟ್ರಾಕ್ಟರ್ ಮಾರಿ ಲಕ್ಷಾಂತರ ರೂ ಖರ್ಚು ಮಾಡಿ ಮ್ಯಾಚ್ ನೋಡುವುದಕ್ಕೆ ಸ್ಟೇಡಿಯಂಗೆ ಬಂದಿದ್ದ ಪಾಕಿಸ್ತಾನದ ಅಭಿಮಾನಿಯೋರ್ವ ಮಾತ್ರ ತೀವ್ರ ಬೇಸರಗೊಂಡಿದ್ದ. ಚಾನೆಲೊಂದರ್ ಜೊತೆ ಮಾತನಾಡಿದ ಈ ಪಾಕ್ ಅಭಿಮಾನಿ ತಾನು ಸ್ಟೇಡಿಯಂನಲ್ಲೇ ಲೈವ್ ಆಗಿ ಮ್ಯಾಚ್ ನೋಡುವುದಕ್ಕಾಗಿ ಟಿಕೆಟ್ ಖರೀದಿಸುವುದಕ್ಕೆ ನನ್ನ ಟ್ರ್ಯಾಕ್ಟರ್‌ನ್ನು ಮಾರಿದೆ. (ಈ ಟಿಕೆಟ್‌ ಮೊತ್ತ 3000 ಯುಎಸ್‌ಡಿ ಅಂದರೆ ಪಾಕಿಸ್ತಾನದ ರೂಪಾಯಿಗೆ ಪರಿವರ್ತಿಸುವುದಾದರೆ 840,526.93)  ಆದರೆ ಪಾಕಿಸ್ತಾನ ಈ ಪಂದ್ಯವನ್ನು ಹೀಗೆ ಆಡುವುದು ಎಂದು ನಾನು ಊಹೆಯೂ ಮಾಡಿರಲಿಲ್ಲ ಎಂದು ಆ ಅಭಿಮಾನಿ ಹತಾಶೆ ವ್ಯಕ್ತಪಡಿಸಿದ್ದಾರೆ. 

ಅವರು ಟಿವಿ ಚಾನೆಲ್ ಜೊತೆ ಮಾತನಾಡುತ್ತಿರುವಾಗಲೇ ಕೆಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆತನನ್ನು ಛೇಡಿಸಲು ನೋಡಿದ್ದು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. ಬಾಬರ್ ಅಜಂ ನೇತೃತ್ವದ ಪಾಕ್ ತಂಡವನ್ನು ಭಾರತೀಯ ಟೀಂ ಗೆಲುವಿನ ಸಮೀಪ ಸುಳಿಯದಂತೆ ಕಟ್ಟಿ ಹಾಕಿದ ನಂತರ ಘೋಷಣೆ ಕೂಗಿದ ಭಾರತೀಯ ಅಭಿಮಾನಿಗಳು ಇತ್ತ ಪಾಕ್ ಕ್ರಿಕೆಟ್ ಫ್ಯಾನ್‌ಗಳನ್ನು ಸೋತಿರುವುದಕ್ಕೆ ಸಿಕ್ಕಾಪಟ್ಟೆ ಕಾಡಿಸಿದ್ದಾರೆ. ಇದರಿಂದಾಗಿ ಈ ಪಾಕ್ ಅಭಿಮಾನಿಯ ನೋವು ಇನ್ನಷ್ಟು ಹೆಚ್ಚಾಗಿದೆ. 
ಭಾರತ ತಂಡ ಕಲೆ ಹಾಕಿದ ಮೊತ್ತ ನೋಡಿದಾಗ ನಾವು ಭಾರತ ಗೆಲ್ಲುವುದು ಎಂದು ಭಾವಿಸಿರಲಿಲ್ಲ, ಆಟ ನಮ್ಮ ಕೈಯಲ್ಲೇ ಇತ್ತು. ಆದರೆ ಬಾಬರ್ ಅಜಂ ಔಟ್ ಆಗ್ತಿದ್ದಂಗೆ ಜನರ ಹೃದಯ ಒಡೆಯಿತು. ನಾನು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಬೇಸರದಿಂದಲೇ ಹೇಳಿದ್ದಾರೆ ಈ ಪಾಕ್ ಕ್ರಿಕೆಟ್ ಅಭಿಮಾನಿ.

"ಈತನಿಗೆ ಆಡೋಕ್ಕೆ ಬರಲ್ಲ, ಇಡೀ ತಂಡವನ್ನೇ ಕಿತ್ತೊಗೆಯಲು ಇದು ಸರಿಯಾದ ಸಮಯ": ಭಾರತ ಎದುರು ಸೋಲುಂಡ ಪಾಕ್ ಮೇಲೆ ಅಕ್ರಂ ಕಿಡಿ

 

Latest Videos
Follow Us:
Download App:
  • android
  • ios